ರಾಜ್ಯ ಸರ್ಕಾರದ ಭ್ರಷ್ಟಾಚಾರದ ಬಗ್ಗೆ ಜನ ಬೀದಿ-ಬೀದಿಗಳಲ್ಲಿ ಮಾತಾಡ್ತಿದ್ದಾರೆ: ಹೆಚ್‌ಡಿಕೆ

Public TV
1 Min Read

ಬೆಂಗಳೂರು: ರಾಜ್ಯ ಸರ್ಕಾರದ ಭ್ರಷ್ಟಾಚಾರದ ಬಗ್ಗೆ ಜನರು ಬೀದಿ-ಬೀದಿಗಳಲ್ಲಿ ಚರ್ಚೆ ಮಾಡುತ್ತಿದ್ದಾರೆ ಎಂದು ಸರ್ಕಾರದ ವಿರುದ್ಧ ಕೇಂದ್ರ ಸಚಿವ ಹೆಚ್‌ಡಿ ಕುಮಾರಸ್ವಾಮಿ (HD Kumaraswamy) ವಾಗ್ದಾಳಿ ನಡೆಸಿದರು.

ವಸತಿ ಇಲಾಖೆಯಲ್ಲಿ ಅಕ್ರಮ ಸತ್ಯ ಎಂಬ ಕಾಂಗ್ರೆಸ್ (Congress) ಶಾಸಕ ಬಿ.ಆರ್.ಪಾಟೀಲ್ (BR Patil) ಹೇಳಿಕೆಗೆ ಬೆಂಗಳೂರಿನಲ್ಲಿ ಪ್ರತಿಕ್ರಿಯಿಸಿದ ಅವರು, ಸರ್ಕಾರದಲ್ಲಿ ಅಕ್ರಮ ಆಗಿಲ್ಲ ಅಂತಲೇ ಹೇಳಬೇಕು. ಅದು ಬಿಟ್ಟು ಇನ್ನೇನು ಹೇಳೋಕೆ ಸಾಧ್ಯ? ಈ ಸರ್ಕಾರದಲ್ಲಿ ಏನು ನಡೆಯುತ್ತಿದೆ ಅಂತ 224 ಶಾಸಕರಿಗೂ ಗೊತ್ತಿದೆ ಎಂದು ಹೇಳಿದರು.ಇದನ್ನೂ ಓದಿ: ವಿಜಯ್ ದಳಪತಿ ಹುಟ್ಟುಹಬ್ಬದ ದಿನವೇ ಫ್ಯಾನ್ಸ್‌ಗೆ ಭರ್ಜರಿ ಗಿಫ್ಟ್

ಶಾಸಕರು ಅವರ ಕ್ಷೇತ್ರಕ್ಕೆ ಯಾವುದಾದರೂ ಕಾರ್ಯಕ್ರಮಕ್ಕೆ ಹಣ ತೆಗೆದುಕೊಂಡು ಹೋಗಬೇಕಾದ್ರೆ ಎಲ್ಲಾ ಇಲಾಖೆಗಳಲ್ಲೂ ಪೇಮೆಂಟ್ ಆಗಬೇಕು ಇದೇ ಅವರ ಹಣೆಬರಹ ಈ ಸರ್ಕಾರದಲ್ಲಿ ನಡೆಯುತ್ತಿರೋದು ಇದೆ ಎಂದರು.

ಮುಖ್ಯಮಂತ್ರಿಗೆ ಮಾನ, ಮರ್ಯಾದೆ ಇದ್ದರೆ ಪಕ್ಕದಲ್ಲಿ ಕೂರಿಸಿಕೊಳ್ಳುತ್ತಾರೆ. ಹೆಚ್.ಕೆ ಪಾಟೀಲ್ ಪತ್ರದಲ್ಲಿ ಅಕ್ರಮ ಗಣಿಗಾರಿಕೆ ಬಗ್ಗೆ ಬರೆದಿದ್ದಾರೆ. ಇದೇ ಪಾಟೀಲ್‌ರನ್ನು 2015ರಲ್ಲಿ ರೆಕಮೆಂಡೇಷನ್ ಮಾಡುತ್ತಾರೆ. ಕಾಂಗ್ರೆಸ್ ಸರ್ಕಾರದಲ್ಲಿ ಅದನ್ನು ಇಟ್ಟುಕೊಂಡು ದಿನಾ ಪೂಜೆ ಮಾಡ್ತಿದ್ದಾರೆ. ಈ ಸರ್ಕಾರದಲ್ಲಿ ಮಾತಾಡಲು ಬೇಕಾದಷ್ಟು ವಿಷಯವಿದೆ. ಅದನ್ನು ಮಾತಾಡಿದ್ರೆ ಕೆಸರಿನ ಮೇಲೆ ಕಲ್ಲು ಎರೆಚಿದ ಹಾಗೇ ಆಗುತ್ತದೆ. ಬೀದಿ-ಬೀದಿಯಲ್ಲಿ ಈ ಸರ್ಕಾರದ ಬಗ್ಗೆ ಚರ್ಚೆ ಆಗ್ತಿದೆ. ಎಲ್ಲರಿಗೂ ಗೊತ್ತಿದೆ. ಇವರೆಲ್ಲಾ ಮಂತ್ರಿಗಳಾ? ಇವೆಲ್ಲವು ಇಲಾಖೆಗಳಾ? ಅದೆಂತದೋ ಉಪಮುಖ್ಯಮಂತ್ರಿ ಮಾಡಬೇಕಿತ್ತಂತೆ? ಎಂದು ಜಮೀರ್ ಅಹ್ಮದ್ ವಿರುದ್ಧ ಕಿಡಿಕಾರಿದರು.ಇದನ್ನೂ ಓದಿ: ಆಧುನಿಕ ಕರ್ನಾಟಕ ನಿರ್ಮಾಣಕ್ಕೆ ವೀರಶೈವ ಲಿಂಗಾಯತರ ಕೊಡುಗೆ ಅಪಾರ: ಈಶ್ವರ್ ಖಂಡ್ರೆ

Share This Article