ಎಂ.ಬಿ ಪಾಟೀಲ್ ಸಿಎಂ ಆಗಬೇಕಂದ್ರೆ ಜನ ಬಯಸಬೇಕು- ಸಚಿವರ ಇಂಗಿತ

Public TV
2 Min Read

ರಾಯಚೂರು: ಎಂ.ಬಿ ಪಾಟೀಲ್ (MB Patil) ಮುಖ್ಯಮಂತ್ರಿ ಆಗಬೇಕು ಅಂದ್ರೆ ಆಗಲ್ಲ ಜನ ಬಯಸಬೇಕು, ಸರ್ಕಾರ ಅಧಿಕಾರಕ್ಕೆ ಬರಬೇಕು. ಈಗ ಪಕ್ಷ ಅಧಿಕಾರಕ್ಕೆ ಬಂದಿದೆ ಹೈಕಮಾಂಡ್ ತೀರ್ಮಾನ ಮಾಡುತ್ತೆ ಅಂತ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್ ಹೇಳಿದ್ದಾರೆ.

ರಾಯಚೂರಿನ ಲಿಂಗಸುಗೂರಿನಲ್ಲಿ ಮಾತನಾಡಿದ ಅವರು, ಸಿ.ಎಂ ಆಗಬೇಕು ಅಂತ ಅಂದುಕೊಂಡ್ರೆ ಆಗುವುದಿದ್ದರೆ, ಈಗಾಗಲೇ ಸಾಕಷ್ಟು ಜನ ಸಿಎಂ ಆಗಿ ಹೋಗುತ್ತಿದ್ದರು ಎಂದರು.

ಬೆಳಗಾವಿ ರಾಜಕಾರಣ ಅಸಮಾಧಾನ ವಿಚಾರವಾಗಿ ಪ್ರತಿಕ್ರಿಯಿಸಿ, ತುಂಬಾ ತರಾತುರಿಯಲ್ಲಿ ಬೆಳಗಾವಿ ಹೋಗಿದ್ದೆ, ಯಾರಿಗೂ ಹೇಳಲು ಆಗಿಲ್ಲ ಅಂತ ಈಗಾಗಲೇ ಡಿ.ಕೆ.ಶಿವಕುಮಾರ್ (DK Shivakumar) ಹೇಳಿದ್ದಾರೆ. ಸತೀಶ್ ಜಾರಕಿಹೊಳಿಯವರು (Sathish Jarakiholi) ನಮ್ಮಲ್ಲಿ ಯಾವ ವ್ಯತ್ಯಾಸ ಇಲ್ಲಾ ಅಂತ ಹೇಳಿದ್ದಾರೆ. ಇದನ್ನ ದೊಡ್ಡದು ಮಾಡುವ ಅಗತ್ಯವಿಲ್ಲ ಎಂದು ಹೇಳಿದರು.  ಇದನ್ನೂ ಓದಿ: Gaganyaan Mission: ತಾಂತ್ರಿಕ ದೋಷದಿಂದ ಸದ್ಯಕ್ಕೆ ಮೊದಲ ಪರೀಕ್ಷಾರ್ಥ ಹಾರಾಟ ಸ್ಥಗಿತ

ಗುತ್ತಿಗೆದಾರರ ಮೇಲೆ ಐಟಿ ದಾಳಿ (IT Raid) ಹಿಂದೆಯೂ ನಡೀತಿತ್ತು, ಈಗಲೂ ನಡೆದಿದೆ. ದಾಳಿ ಆಗಿರುವುದಕ್ಕೂ ಕಾಂಗ್ರೆಸ್ ಗೂ ಏನೂ ಸಂಬಂಧವಿಲ್ಲ. ನಮ್ಮ ಸರ್ಕಾರ ಬಂದ ಮೇಲೆ ಟೆಂಡರ್‍ಗಳನ್ನೇ ಕರೆದಿಲ್ಲ. ಬಿಜೆಪಿಯವರು ಆಪಾದನೆ ಮಾಡೋದಾದ್ರೆ ನಾವು ಇದು ಆ 40% ಹಣ ಈಗ ಚುನಾವಣೆ ಸಂದರ್ಭದಲ್ಲಿ ಹೊರಬರುತ್ತಿದೆ ಅಂತ ಹೇಳಬೇಕಾಗುತ್ತೆ ಅಂತ ಎಂಬಿಪಿ ಹೇಳಿದರು.

ಸಚಿವ ಶರಣಪ್ರಕಾಶ ಪಾಟೀಲ್ ಹೆಸರು ಹೇಳಿ ರೈತ ಆತ್ಮಹತ್ಯೆ ಮಾಡಿಕೊಂಡ ಪ್ರಕರಣ ಕುರಿತು ಮಾತನಾಡಿ, ಶರಣಪ್ರಕಾಶ ಪಾಟೀಲ್ ರಾಜಕೀಯದಲ್ಲಿ ಬದ್ಧತೆ ಹಾಗೂ ಪರಿಶುದ್ಧತೆ ಹೊಂದಿದಂತಹ ನಾಯಕ. ಸಿಐಡಿ ತನಿಖೆಯೂ ಈ ಪ್ರಕರಣಕ್ಕೆ ಅಗತ್ಯವಿಲ್ಲ. ಈಶ್ವರಪ್ಪ ಅವರ ಕೇಸ್ ಬೇರೆ ಶರಣಪ್ರಕಾಶರದ್ದು ಬೇರೆ. ಅತ್ಯಂತ ದಕ್ಷವಾದ, ಪ್ರಾಮಾಣಿಕವಾದ, ಪರಿಶುದ್ಧವಾದ ನಾಯಕ ಶರಣಪ್ರಕಾಶ ಪಾಟೀಲ್. ಸುಮ್ಮನೆ ಎಲ್ಲಾ ಬೋಗಸ್ ಯಾರೋ ಬರಕೊಟ್ಟಿರೋದು ಅದು ಅಂತ ಹೇಳಿದರು.

ಬಿಜೆಪಿ ಮಾಜಿ ಶಾಸಕಿ ಪೂರ್ಣಿಮಾ ಶ್ರೀನಿವಾಸ್ ಕಾಂಗ್ರೆಸ್ ಸೇರ್ಪಡೆಯಾಗಿದ್ದಾರೆ. ಮುಂದೆ ಕೆ.ಎಸ್. ಈಶ್ವರಪ್ಪ ಬಂದ್ರೂ ಅಚ್ಚರಿಯಿಲ್ಲ. ಪಾರ್ಲಿಮೆಂಟ್ ಎಲೆಕ್ಷನ್ ವರೆಗೆ ನೋಡಲಿ ಈಶ್ವರಪ್ಪ ಸೇರಿಕೊಂಡರೆ ಅಚ್ವರಿಯಿಲ್ಲಾ ಆದ್ರೆ ಸೇರಿಸಿಕೊಳ್ಳಬೇಕಾದರೆ ನಾವೇ ವಿಚಾರ ಮಾಡುತ್ತೇವೆ ಅಂತ ಸಚಿವ ಎಂ.ಬಿ.ಪಾಟೀಲ್ ಹೇಳಿದರು.

Web Stories

Share This Article
ಯಮ್ಮೊ ಯಮ್ಮೊ.. ನೋಡ್ದೆ ನೋಡ್ದೆ.. Milky Beauty Tamanna Bhatia Hot Photoshoot ಬಿಕಿನಿ ಬಿಟ್ಟು ಸೀರೆ ಉಟ್ಟ ನಟಿ ದಿವ್ಯಾ ಭಾರತಿ!.. ಶೋಲ್ಡರ್‌ಲೆಸ್ ಡ್ರೆಸ್‌ನಲ್ಲಿ ಪಟಾಕಿ ಪೋರಿ ಮಿಂಚಿಂಗ್ ಶಾರ್ಟ್ ಡ್ರೆಸ್‌ನಲ್ಲಿ ‘ಕಾಟೇರ’ ನಟಿ ಮಿಂಚಿಂಗ್ ನವಿಲಿನಂತೆ ಕಂಗೊಳಿಸಿದ ಮಲೈಕಾ ಚೈತ್ರಾ ಲುಕ್‌ಗೆ ಫ್ಯಾನ್ಸ್‌ ಫಿದಾ ಡಿಫರೆಂಟ್ ಆಗಿ ಸೀರೆಯುಟ್ಟ ಸ್ಯಾಮ್ ಬೋಲ್ಡ್ ಅವತಾರ ತಾಳಿದ ಚೈತ್ರಾ ಆಚಾರ್ ಡೆನಿಮ್ ಡ್ರೆಸ್‌ನಲ್ಲಿ ದೀಪಿಕಾ ಫೋಟೋಶೂಟ್