ಧರ್ಮಸ್ಥಳ ಕೇಸ್‌ಲ್ಲಿ ಜನರು ಕಾನೂನು ಕೈಗೆತ್ತಿಕೊಳ್ಳಬಾರದು – ಪ್ರಿಯಾಂಕ್ ಖರ್ಗೆ

Public TV
1 Min Read

-ಫೇಕ್ ನ್ಯೂಸ್ ತಡೆಗೆ ಸರ್ಕಾರದಿಂದ ಬಿಲ್ ತರುತ್ತಿದ್ದೇವೆ ಎಂದ ಸಚಿವ

ಬೆಂಗಳೂರು: ಧರ್ಮಸ್ಥಳದಲ್ಲಿ (Dharmasthala) ಆಗುತ್ತಿರುವ ಗಲಾಟೆ ವಿಚಾರದಲ್ಲಿ ಜನರು ಕಾನೂನು ಕೈಗೆತ್ತಿಕೊಳ್ಳಬಾರದು ಎಂದು ಸಚಿವ ಪ್ರಿಯಾಂಕ್ ಖರ್ಗೆ (Priyank Kharge) ಕರೆ ನೀಡಿದ್ದಾರೆ.ಇದನ್ನೂ ಓದಿ: ಯಾವುದೇ ಕಾರಣಕ್ಕೂ ರಾಜಿಯಾಗಲ್ಲ, ನನಗೆ ರೈತರ ಹಿತವೇ ಮುಖ್ಯ: ಟ್ರಂಪ್‌ಗೆ ಮೋದಿ ಗುದ್ದು

ಧರ್ಮಸ್ಥಳದಲ್ಲಿ ಆಗುತ್ತಿರುವ ಗಲಾಟೆ ವಿಚಾರವಾಗಿ ವಿಧಾನಸೌಧದಲ್ಲಿ ಪ್ರತಿಕ್ರಿಯೆ ನೀಡಿದ ಅವರು, ಯಾರು ಕಾನೂನು ಕೈಗೆತ್ತಿಕೊಳ್ಳಬಾರದು. ಸರಿಯಾದ ಸುದ್ದಿ, ಸುಳ್ಳು ಸುದ್ದಿ ಎಂದು ಜನರೇ ಹಿಂಸಾಚಾರ ಮಾಡೋದು ಸರಿಯಲ್ಲ. ಧರ್ಮಸ್ಥಳ ಕೇಸ್‌ನಲ್ಲಿ ಈಗಾಗಲೇ ಎಸ್‌ಐಟಿ (SIT) ತನಿಖೆ ಆಗುತ್ತಿದೆ. ಮೊದಲು ತನಿಖೆ ಆಗಲಿ. ಕೋರ್ಟ್ನಲ್ಲೂ ಈ ಬಗ್ಗೆ ಕೇಸ್ ಇದೆ. ತನಿಖೆ ನಡೆಯುವಾಗ ಯಾರೂ ಹೀಗೆ ಮಾಡಬಾರದು ಎಂದು ತಿಳಿಸಿದ್ದಾರೆ.

ಫೇಕ್ ನ್ಯೂಸ್ (Fake News) ತಡೆಗೆ ಸರ್ಕಾರದಿಂದ ಬಿಲ್ ತರುತ್ತಿದ್ದೇವೆ. ಅದು ಬಂದ ಮೇಲೆ ಇವೆಲ್ಲಾ ಕಡಿಮೆ ಆಗುತ್ತದೆ. ಹೀಗಾಗಿ ಏನೇನೋ ಅರ್ಥೈಸಿಕೊಂಡು ಜನರು ಯಾರು ಕಾನೂನು ಕೈಗೆ ತೆಗೆದುಕೊಳ್ಳಬಾರದು ಎಂದು ಹೇಳಿದ್ದಾರೆ.ಇದನ್ನೂ ಓದಿ: ಅನಾಮಿಕ ಉಜಿರೆಯ ವ್ಯಕ್ತಿಯ ಮನೆಯಲ್ಲಿ ಉಳಿಯುತ್ತಿದ್ದಾನೆ, ನಿಮ್ಮ ವಶಕ್ಕೆ ಪಡೆಯಿರಿ: SITಗೆ ಮನವಿ

Share This Article