– ಟ್ರಾಫಿಕ್ ಮಧ್ಯೆಯೇ ಸಿಲುಕಿದ ಆಂಬುಲೆನ್ಸ್
ಬೆಂಗಳೂರು: ಸಾಲು ಸಾಲು ರಜೆ ಬಳಿಕ ಊರಿಗೆ ತೆರಳಿದ್ದ ಜನರು ಬೆಂಗಳೂರಿನತ್ತ ಬರುತ್ತಿದ್ದು, ಈ ಹಿನ್ನೆಲೆ ನೆಲಮಂಗಲದ ಕುಣಿಗಲ್ ಬೈಪಾಸ್ ಬಳಿ ಟ್ರಾಫಿಕ್ ಜಾಮ್ ಆಗಿದೆ.ಇದನ್ನೂ ಓದಿ: ಬ್ರೇಕ್ ಫೇಲ್ ಆಗಿ ರಸ್ತೆಬದಿ ಕಂದಕಕ್ಕೆ ನುಗ್ಗಿದ ಬಿಎಂಟಿಸಿ ಬಸ್
ಶುಕ್ರವಾರದಿಂದ ಭಾನುವಾರದವರೆಗೆ ಮೂರು ದಿನ ಸಾಲು ಸಾಲು ರಜೆಯಿದ್ದ ಕಾರಣ ಹೆಚ್ಚಿನವರು ಊರಿಗೆ ತೆರಳಿದ್ದರು. ಇದೀಗ ರಜೆ ಮುಗಿಸಿ ಊರಿನಿಂದ ಬೆಂಗಳೂರಿನತ್ತ ಜನರು ಬರುತ್ತಿದ್ದು, ಮಂಗಳೂರು-ಬೆAಗಳೂರು ರಾಷ್ಟ್ರೀಯ ಹೆದ್ದಾರಿ 75ರಲ್ಲಿ ಭಾರೀ ಟ್ರಾಫಿಕ್ ಜಾಮ್ ಉಂಟಾಗಿದೆ.
ಬೆಂಗಳೂರು ಹೊರವಲಯದ ನೆಲಮಂಗಲದ ಕುಣಿಗಲ್ ಬೈಪಾಸ್ ಬಳಿ ವಾಹನಗಳು ಸಾಲುಗಟ್ಟಿ ನಿಂತಿದ್ದು, ಮಳೆಯೇ ನಡುವೆ ದ್ವಿಚಕ್ರ ವಾಹನ ಸವಾರರು ಪರದಾಡುವಂತಾಗಿದೆ. ಮೂರು ದಿನಗಳ ರಜೆ ಮುಗಿಸಿ ಹೆಚ್ಚಿನ ಜನರು ಬೆಂಗಳೂರಿಗೆ ಮರಳುತ್ತಿರುವ ಹಿನ್ನೆಲೆ ಟ್ರಾಫಿಕ್ ಜಾಮ್ ಆಗಿದೆ. ಇದೆಲ್ಲದರ ಮಧ್ಯೆಯೇ ಆಂಬುಲೆನ್ಸ್ ಸಿಲುಕಿಕೊಂಡಿದ್ದು, ಪ್ರಯಾಣಿಕರು ಹೈರಾಣಾಗಿದ್ದಾರೆ.ಇದನ್ನೂ ಓದಿ: ನೇಣು ಬಿಗಿದ ಸ್ಥಿತಿಯಲ್ಲಿ ಪತ್ನಿ ಶವ ಪತ್ತೆ – ಪತಿ ವಿರುದ್ಧ ಕೊಲೆ ಆರೋಪ