ಪತಿ ಜೊತೆ ಜಗಳವಾಡಿ ಕೆರೆಗೆ ಹಾರಿ ಬದುಕಿಸುವಂತೆ ಆಂಜನೇಯನನ್ನ ಬೇಡುತ್ತಿದ್ದ ಮಹಿಳೆಯ ರಕ್ಷಣೆ

Public TV
0 Min Read

ಚಿಕ್ಕಮಗಳೂರು: ಕೆರೆಗೆ ಹಾರಿ ಬದುಕಿಸುವಂತೆ ಆಂಜನೇಯನನ್ನ ಬೇಡುತ್ತಿದ್ದ ಮಹಿಳೆಯನ್ನು ರಕ್ಷಿಸಿದ ಘಟನೆ ಚಿಕ್ಕಮಗಳೂರು (Chikkamagaluru) ತಾಲೂಕಿನ ಅಲ್ಲಂಪುರದಲ್ಲಿ ನಡೆದಿದೆ.

ಗಂಡನ (Husband) ಜೊತೆ ಜಗಳವಾಡಿ ಚಿಕ್ಕಮಗಳೂರು ನಗರದ ರಾಮನಹಳ್ಳಿ ನಿವಾಸಿ ರಂಜಿತಾ ಕೆರೆಗೆ (Lake) ಹಾರಿದ್ದರು. ಸಾಯಬೇಕು ಎಂದು ಕೆರೆಗೆ ಹಾರಿದ ಬಳಿಕ ಆಂಜನೇಯನ ನೆನೆದು ಪ್ರಾರ್ಥನೆ ಮಾಡಿದ್ದಾರೆ. ಇದನ್ನೂ ಓದಿ: ಮಂಡ್ಯ | ಮಾನಸಿಕ ಖಿನ್ನತೆಯಿಂದ ಕಾವೇರಿ ನದಿಗೆ ಹಾರಿದ MCA ಪದವೀಧರೆ

ಕೆರೆಯಲ್ಲಿ ಯಾರೋ ಇರುವುದನ್ನು ನೋಡಿ ಪಕ್ಕದ ಹೋಂ ಸ್ಟೇ ಮಾಲೀಕ ರಮೇಶ್ ಸ್ಥಳಕ್ಕೆ ಬಂದು ಹುಡುಗರ ಕರೆಸಿದ್ದಾರೆ. ಬಳಿಕ ಕೆರೆಯಲ್ಲಿ ಮುಳುಗುತ್ತಿದ್ದ ರಂಜಿತಾಳನ್ನು ಸುಮಂತ್, ಪ್ರಸನ್ನ ರಕ್ಷಿಸಿದ್ದಾರೆ.

Share This Article