ತುಮಕೂರು: ಯಾರು ಯೋಗ್ಯರು, ಯಾರು ಆಯೋಗ್ಯರು ಅಂತ ಜನರಿಗೆ ಗೊತ್ತಿದೆ. ಐಟಿ ದಾಳಿ ನಡೆಸಿದಾಗ ಮೈತ್ರಿ ನಾಯಕರು ಹಾಗೂ ಬೆಂಬಲಿಗರ ಮನೆಯಲ್ಲಿ ನೋಟ್ ಏಣಿಕೆ ಯಂತ್ರ ಸಿಕ್ಕಿಲ್ಲ. ಆದ್ರೆ ಬಿಜೆಪಿ ನಾಯಕ ಈಶ್ವರಪ್ಪ ಮನೆಯಲ್ಲಿ ಎರಡೆರಡು ನೋಟು ಎಣಿಕೆ ಯಂತ್ರ ಸಿಕ್ಕಿವೆ. ಯಾರು ಒಳೆಯವರು ಅಂತ ಜನತೆ ಸರ್ಟಿಫಿಕೇಟ್ ಕೊಡ್ತಾರೆ. ಬಿಜೆಪಿಯವರ ಸರ್ಫಿಕೇಟ್ ಬೇಕಿಲ್ಲ ಎಂದು ಸಿಎಂ ಕುಮಾರಸ್ವಾಮಿ ತಿರುಗೇಟು ನೀಡಿದ್ದಾರೆ.
ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಈಶ್ವರಪ್ಪ ತಮ್ಮನ್ನು ಅಯೋಗ್ಯ ಎಂದ ವಿಚಾರವಾಗಿ ಪ್ರತಿಕ್ರಿಯಿಸಿದರು. ಈ ಹಿಂದೆ ಈಶ್ವರಪ್ಪ ಅವರು ನೀರಾವರಿ ಮಂತ್ರಿಯಾಗಿದ್ದಾಗ, ಅವರ ಮನೆ ಮೇಲೆ ಐಟಿ ದಾಳಿ ನಡೆದಿತ್ತು. ಆಗ ಅವರ ಮನೆಯಲ್ಲಿ ಏನೆಲ್ಲ ಸಿಕ್ಕಿದೆ ಎಂದು ಮಾಧ್ಯಮದಲ್ಲೇ ಪ್ರಸಾರವಾಗಿತ್ತು ಎಂದರು. ಇದನ್ನೂ ಓದಿ: ಎಚ್‍ಡಿಡಿ, ರೇವಣ್ಣ, ಕುಮಾರಸ್ವಾಮಿ ದಾದಾಗಳಾ: ಕೆ.ಎಸ್.ಈಶ್ವರಪ್ಪ ಪ್ರಶ್ನೆ
ಮಂಡ್ಯದ ವಿಚಾರ ಬಿಟ್ಟಾಕಿ ತಲೆ ಕೆಡಿಸಿಕೊಳ್ಳಬೇಡಿ. ಚುನಾವಣೆಯನ್ನು ಎದುರಿಸಲು ಶಕ್ತಿ ಇಲ್ಲದೆ ಇದ್ದವರು, ಕುತಂತ್ರದಿಂದ ಅಧಿಕಾರಿಗಳ ವಿರುದ್ಧ ದಬ್ಬಾಳಿಕೆ ನಡೆಸಿ ಒತ್ತಡ ಹಾಕುವ ಕೆಲಸ ಮಾಡುತ್ತಿದ್ದಾರೆ. ನಾನ್ಯಾಕೆ ಅದರ ಬಗ್ಗೆ ತಲೆಕೆಡಿಸಿಕೊಳ್ಳಲಿ. ಕಾನೂನು ಬದ್ಧವಾಗಿ ಏನು ನಡೆಯಬೇಕು ನಡೆಯುತ್ತದೆ ಎಂದು ಸಿಎಂ ಪರೋಕ್ಷವಾಗಿ ನಿಖಿಲ್ ಕುಮಾರಸ್ವಾಮಿ ನಾಮಪತ್ರ ವಿಚಾರಕ್ಕೆ ಟೀಕಿಸಿದ ಬಿಜೆಪಿ ನಾಯಕರಿಗೆ ಹಾಗೂ ಸುಮಲತಾರಿಗೆ ಟಾಂಗ್ ಕೊಟ್ಟರು.