ಮೊದಲ ಡೋಸ್ ಪಡೆಯುವಾಗ ಇದ್ದ ಉತ್ಸಾಹ 2ನೇ ಡೋಸ್‍ಗೆ ಠುಸ್

By
2 Min Read

ಬೆಂಗಳೂರು: ಜನರಲ್ಲಿ ಮೊದಲ ಡೋಸ್ ಪಡೆಯುವಾಗ ಇದ್ದ ಉತ್ಸಾಹ 2ನೇ ಡೋಸ್‍ಗೆ ಠುಸ್ ಆಗಿದೆ. ಸಾರ್ವಜನಿಕರು ಅಯ್ಯೋ ಕೊರೊನಾ ಇದ್ರಿಂದ್ರೇ ಇಷ್ಟೊತ್ತಿಗಾಗಲೇ ಬಂದೇ ಬಿಡಬೇಕಿತ್ತು. ಇಲ್ಲಿಯವರೆಗೂ ಬಂದಿಲ್ಲ ಎಂದ ಮೇಲೆ ಮುಂದೆ ಬರುವುದಿಲ್ಲ ಎಂದು ಸುಮ್ಮನಾಗಿದ್ದಾರೆ.

ಈ ಕುರಿತು ಸಾರ್ವಜನಿಕರಿಗೆ ಕೇಳಿದರೆ, ನೀವಲ್ಲ ಸರ್, ಆ ದೇವರೇ ಬಂದು ತಗೊಳಪ್ಪಾ ಅಂದ್ರೂ ನಾನು ಮಾತ್ರ ತಗೊಳೋದಿಲ್ಲ. ಅದೇನಾಗುತ್ತೋ ಆಗೇ ಬಿಡ್ಲಿ. ನಾನೂ ಒಂದು ಕೈ ನೋಡೇ ಬಿಡ್ತೀನಿ, ಈ ರೀತಿಯ ಸಿನಿಮಾ ಡೈಲಾಗ್‍ಗಳನ್ನು ಹೇಳಿಕೊಂಡು, ವ್ಯಾಕ್ಸಿನ್ ತೆಗೆದುಕೊಳ್ಳದೇ ಇರೋ ಜನರ ಸಂಖ್ಯೆ ನಗರದಲ್ಲಿ ತೀವ್ರವಾಗಿ ಹೆಚ್ಚಳವಾಗಿದೆ. ಇದನ್ನೂ ಓದಿ: ಮಕ್ಕಳ ವ್ಯಾಕ್ಸಿನ್ ವಿಚಾರದಲ್ಲಿ ಆರಂಭದಲ್ಲೇ ಹಿನ್ನಡೆ – ಮತ್ತಷ್ಟು ತಡ ಸಾಧ್ಯತೆ

ಸಿಲಿಕಾನ್ ಸಿಟಿಯಲ್ಲಿ ಕೆಲ ತಿಂಗಳ ಹಿಂದೆ ಕೋವಿಡ್ ಲಸಿಕೆ ಪಡೆಯಲು ಇದ್ದ ಮುತುವರ್ಜಿ ಇತ್ತೀಚಿಗೆ ಜನರಲ್ಲಿ ಮಾಯವಾಗಿ ಹೋಗಿದೆ. ಹೇಗೂ ಕಳೆದ ಕೆಲ ದಿನಗಳಿಂದ ಕೋವಿಡ್ ಸೋಂಕಿತರ ಸಂಖ್ಯೆ ಕಡಿಮೆ ಆಗಿದೆ. ಕೆಲ ತಿಂಗಳ ಹಿಂದೆ ಖಾಸಗಿ ಆಸ್ಪತ್ರೆಗಳಲ್ಲಿ ಹಾಗೂ ಸರ್ಕಾರಿ ಲಸಿಕೆ ಕೇಂದ್ರಗಳಲ್ಲಿ ನೂಕುನುಗ್ಗಲು ಉಂಟಾಗ್ತಿತ್ತು. ಈ ವೇಳೆ ನಾ ಮುಂದು ತಾ ಮುಂದು ಎಂದು ಜನರ ಮಧ್ಯೆ ಪೈಪೋಟಿಯಾಗಿ ಕಾದಾಟ ಸಹ ನಡೆಯುತ್ತಿತ್ತು.

ಕೆಲವೆಡೆ ನಿರೀಕ್ಷೆಗಿಂತ ಹೆಚ್ಚಿನ ಜನಸಮೂಹ ಬಂದ ಕಾರಣ ನೋ ಸ್ಟಾಕ್ ಬೋರ್ಡ್ ಪ್ರದರ್ಶಿಸಲಾಗ್ತಿತ್ತು. ಆದರೂ ಶಿಫರಸ್ಸು ಮಾಡಿಸಿ ಲಸಿಕೆ ಹಾಕಿಸಿಕೊಳ್ಳಲಾಗ್ತಿತ್ತು. ಆದರೆ ಈಗ 2ನೇ ಡೋಸ್ ಲಸಿಕೆ ಪಡೆಯಲು ಕೈಬೀಸಿ ಕರೆದ್ರೂ, ಜನರು ಜಾಣ ಕಿವುಡುತನದಿಂದ ವರ್ತಿಸುತ್ತಿದ್ದಾರೆ. ಖಾಸಗಿ ಆಸ್ಪತ್ರೆಗಳಲ್ಲಿ ಶೇ.90ರಷ್ಟು ಹಾಗೂ ಸರ್ಕಾರಿ ಲಸಿಕೆ ಕೇಂದ್ರಗಳಲ್ಲಿ ಶೇ.50ರಷ್ಟು ಲಸಿಕೆ ಹಾಕಿಸಿಕೊಳ್ಳುವ ಸಂಖ್ಯೆ ಕುಸಿತ ಕಂಡಿದೆ ಎಂದು ಡಾಕ್ಟರ್ ಪ್ರಸನ್ನ ಹೇಳುತ್ತಾರೆ. ಇದನ್ನೂ ಓದಿ: ಕುಮಾರಸ್ವಾಮಿ, ಯಡಿಯೂರಪ್ಪ ಕಾಂಗ್ರೆಸ್‍ನಿಂದ ಸಿಎಂ ಆದೆ ಅಂತ ಹೇಳಬೇಕು: ಎ.ಮಂಜು

ಕೋವಿಶೀಲ್ಡ್‍ನ ಎರಡನೇ ಡೋಸ್ ಪಡೆಯಬೇಕಾದ ಅದೆಷ್ಟೋ ಜನರು ಲಸಿಕೆ ಹಾಕಿಸಿಕೊಳ್ಳೋದನ್ನೇ ಮರೆತುಬಿಟ್ಟಿದ್ದಾರೆ. ಸರ್ಕಾರವೇ 84 ದಿನಗಳ ಗ್ಯಾಪ್ ನಂತರ ಹಾಕಿಸಿಕೊಳ್ಳಿ ಅಂತೇಳಿದೆ. ಇನ್ನೊಂದೆರೆಡು ವಾರ ಡಿಲೇ ಆದ್ರೆ, ಏನೂ ಆಗಲ್ಲ ಎಂದು ಮರೆತೇ ಬಿಡ್ತಿದ್ದಾರೆ. ಒಂದನೇ ಡೋಸ್ ಪಡೆಯೋದ್ರಿಂದ ಶೇ.54ರಿಂದ ಶೇ.60ರಷ್ಟು ಮಾತ್ರ ಸೇಫ್ ಆಗ್ತೀವಿ ಹೊರತು ಪೂರ್ಣವಾಗಿ ಅಲ್ಲ. ಜನ ಎರಡನೇ ಡೋಸ್ ಪಡೆಯಲು ಹಿಂದೇಟು ಹಾಕಬಾರದು. ವ್ಯಾಕ್ಸಿನ್ ಪಡೆಯದೇ ಹೋದ್ರೇ ಮೊದಲ ಡೋಸ್ ಪಡೆದು ಪ್ರಯೋಜನವಿಲ್ಲದ್ದಂತೆ ಆಗಲಿದೆ.

Share This Article
Leave a Comment

Leave a Reply

Your email address will not be published. Required fields are marked *