ರೇಪ್ ಮಾಡಿ ವಿಡಿಯೋ ಹರಿಬಿಟ್ಟ ದುರುಳರು – ಕಾಮುಕರಿಗೆ ಥಳಿಸಿ ಪೊಲೀಸರಿಗೊಪ್ಪಿಸಿದ ಜನ

1 Min Read

ಹುಬ್ಬಳ್ಳಿ: ನಗರದಲ್ಲಿ (Hubballi) ಮಹಿಳೆ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿ ವಿಡಿಯೋ ಹರಿಬಿಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಕಾಮುಕರನ್ನು ಸ್ಥಳೀಯರು ಥಳಿಸಿ (Police) ಪೊಲೀಸರಿಗೊಪ್ಪಿಸಿದ್ದಾರೆ.

ಜ.9 ರಂದು ಅಂಬೇಡ್ಕರ್ ಮೈದಾನದಿಂದ ಮಹಿಳೆಯನ್ನು ಆಟೋದಲ್ಲಿ ಕರೆದುಕೊಂಡು ಹೋಗಿದ್ದರು. ಬಳಿಕ ಮಹಿಳೆಗೆ ಮದ್ಯ ಕುಡಿಸಿ ಅನುಚಿತವಾಗಿ ವರ್ತಿಸಿದ್ದರು. ಅದನ್ನು ವಿಡಿಯೋ ಮಾಡಿಕೊಂಡು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದರು. ಘಟನೆಯಾದ ಒಂದು ದಿನದ ನಂತರ ಮಹಿಳೆ ಪೊಲೀಸರಿಗೆ ದೂರು ನೀಡಿದ್ದರು. ಇದನ್ನೂ ಓದಿ: ಬಿಜೆಪಿ ಕಾರ್ಯಕರ್ತೆ ವಿವಸ್ತ್ರ ಪ್ರಕರಣದಲ್ಲಿ ಟ್ವಿಸ್ಟ್‌ – ʻಹನಿಟ್ರ್ಯಾಪ್ʼ ಲೇಡಿ ಸುಜಾತಾ ಹಂಡಿಯ ಅಸಲಿ ಮುಖ ಅನಾವರಣ!

ಪ್ರಕರಣ ಆರೋಪಿಗಳಾದ ಶಿವಾನಂದ್ ಹಾಗೂ ಗಣೇಶ್‍ನನ್ನು ಸ್ಥಳೀಯರು ಹಿಡಿದು ತಲೆ ಬೋಳಿಸಿ ಥಳಿಸಿ, ಪೊಲೀಸರಿಗೊಪ್ಪಿಸಿದ್ದಾರೆ. ಆರೋಪಿಗಳನ್ನು ಬಂಧಿಸಲಾಗಿದೆ. ಅಲ್ಲದೇ ಥಳಿಸಿದ ನಾಲ್ವರ ವಿರುದ್ಧ ದೂರು ದಾಖಲಾಗಿದ್ದು, ಅವರನ್ನೂ ಬಂಧಿಸಲಾಗಿದೆ.

ಆರೋಪಿಗಳನ್ನು ಥಳಿಸಿ ಪೊಲೀಸರಿಗೊಪ್ಪಿಸಿದ ನಾಲ್ವರನ್ನು ಬಿಡುಗಡೆ ಮಾಡಬೇಕು. ಪೊಲೀಸರು ಈ ರೀತಿ ಕೇಸ್ ಹಾಕಿದ್ರೆ, ಅತ್ಯಾಚಾರ ನಡೆದರು ಯಾರು ರಕ್ಷಣೆಗೆ ಬರಲ್ಲಾ ಎಂದು ಹಳೇ ಹುಬ್ಬಳ್ಳಿ ಪೊಲೀಸ್ ಠಾಣೆ ಮುಂದೆ ಸ್ಥಳೀಯರು ಪ್ರತಿಭಟನೆ ನಡೆಸಿದ್ದಾರೆ. ಇದನ್ನೂ ಓದಿ: ಹುಬ್ಬಳ್ಳಿ | ಪ್ರತ್ಯೇಕ ಪ್ರಕರಣ – ಇಬ್ಬರು ಬಾಲಕಿಯರ ಮೇಲೆ ಅಪ್ರಾಪ್ತರಿಂದ ಲೈಂಗಿಕ ದೌರ್ಜನ್ಯ – 7 ಮಂದಿ ವಶಕ್ಕೆ

Share This Article