ಚಿಕ್ಕಬಳ್ಳಾಪುರ: ಅಪ್ರಾಪ್ತ ವಿದ್ಯಾರ್ಥಿನಿ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ ಆರೋಪದ ಮೇಲೆ ವೃದ್ಧನಿಗೆ ಹಿಗ್ಗಾ ಮುಗ್ಗಾ ಥಳಿಸಿರುವ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯ ಮಂಚೇನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಬಂಕೇನಹಳ್ಳಿ ಗ್ರಾಮದ ನಿವಾಸಿ 70 ವರ್ಷದ ಗಂಗಾಧರಪ್ಪ ಹಲ್ಲೆಗೊಳಗಾದ ವೃದ್ಧ. 3ನೇ ತರಗತಿ ವ್ಯಾಸಂಗ ಮಾಡುತ್ತಿದ್ದ ಬಾಲಕಿಗೆ ಹಣ ಹಾಗೂ ತಿಂಡಿ ಆಸೆ ತೋರಿಸಿರುವ ವೃದ್ಧ ಗಂಗಾಧರಪ್ಪ, ಬಾಲಕಿಯನ್ನ ಪುಸಲಾಯಿಸಿ ಮನೆಗೆ ಕರೆದುಕೊಂಡು ಹೋಗಿದ್ದಾನೆ.
ಇದನ್ನು ಕಂಡ ಸ್ಥಳೀಯರು ವೃದ್ಧ ಗಂಗಾಧರಪ್ಪನನ್ನು ಹಿಡಿದು ಸಖತ್ ಆಗಿ ಥಳಿಸಿದ್ದಾರೆ. ಬಾಲಕಿಯ ಪೋಷಕರು ಹಾಗೂ ಮಹಿಳೆಯರು ಚಪ್ಪಲಿ ಮೂಲಕ ವೃದ್ಧ ಗಂಗಾಧರಪ್ಪನ ಮೇಲೆ ಹಲ್ಲೆ ಮಾಡಿದ್ದಾರೆ. ಗಂಭೀರವಾಗಿ ಹಲ್ಲೆಗೊಳಗಾದ ಗಂಗಾಧರಪ್ಪ ಸತ್ತು ಹೋಗಬಹುದು ಎನ್ನುವ ಅನುಮಾನದಿಂದ ಕೆಲವರು ಹಲ್ಲೆಯನ್ನ ತಡೆದಿದ್ದಾರೆ.
ಸದ್ಯ ಈ ಸಂಬಂಧ ವೃದ್ಧ ಗಂಗಾಧರಪ್ಪನನ್ನು ಮಂಚೇನಹಳ್ಳಿ ಪೊಲೀಸರು ವಶಕ್ಕೆ ಪಡೆದಿದ್ದು ವಿಚಾರಣೆ ನಡೆಸಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
ಯೂ ಟ್ಯೂಬ್‍ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
ಫೇಸ್‍ಬುಕ್‍ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
ಟ್ವಿಟ್ಟರ್‌ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/publictvnews