ಪೆನ್‌ಡ್ರೈವ್‌ ಬಿಡುಗಡೆಗೆ ಕಾಂಗ್ರೆಸ್ಸಿನವರಿಂದಲೇ ತಡೆ – ಕೈ ಒಳಜಗಳಕ್ಕೆ ಬೆಂಕಿ ಹಚ್ಚಿದ ಹೆಚ್‌ಡಿಕೆ

By
2 Min Read

ಬೆಂಗಳೂರು: ಅದು ಸಾಮಾನ್ಯ ಪೆನ್‍ಡ್ರೈವ್ (Pen Drive) ಅಲ್ಲ. ಈ ಪೆನ್‍ಡ್ರೈವ್ ರಿಲೀಸ್‍ಗೆ ನನಗೆ ಆತುರ ಇಲ್ಲ. ಪೆನ್‍ಡ್ರೈವ್ ಬಿಡುಗಡೆಯನ್ನು ಕಾಂಗ್ರೆಸ್‌ನವರೇ (Congress) ತಡೆಯುತ್ತಿದ್ದಾರೆ ಎಂದು ಮಾಜಿ ಸಿಎಂ ಹೆಚ್‌ಡಿ ಕುಮಾರಸ್ವಾಮಿ (HD Kumaraswamy) ಹೊಸ ಬಾಂಬ್‌ ಸಿಡಿಸಿದ್ದಾರೆ.

ಸ್ಫೀಕರ್‌ ಖಾದರ್‌ ಅವರಿಗೆ ಕೃಷಿ ಇಲಾಖೆಯ ವರ್ಗಾವಣೆಗೆ ನಿಗದಿ ಮಾಡಿದ ದರಪಟ್ಟಿ ಮತ್ತು ಪೆನ್‌ ಡ್ರೈವ್‌ ವಿಚಾರದ ಬಗ್ಗೆ ವಿಧಾನಸೌಧದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಇನ್ನೂ ತುಂಬಾ ವಿಚಾರ ಸಿಗಲಿದೆ. ಈಗಲೇ ಆತುರಪಡಬೇಡಿ. ಕಾಂಗ್ರೆಸ್‍ನಲ್ಲಿ ವಿಕೆಟ್ ಬೀಳಬೇಕು ಎಂದು ಕೆಲವರು ಕಾಯುತ್ತಿದ್ದಾರೆ. ಇದು ಸಾಮಾನ್ಯ ಪೆನ್‍ಡ್ರೈವ್ ಅಲ್ಲ ಎಂದು ಹೇಳುವ ಮೂಲಕ ಕಾಂಗ್ರೆಸ್‌ ಒಳಜಗಳಕ್ಕೆ ಬೆಂಕಿ ಹಚ್ಚಿದ್ದಾರೆ.

 

ನಾನು ಎಲ್ಲೂ ಕದ್ದು ಓಡಿ ಹೋಗುವುದಿಲ್ಲ. ಹಿಟ್ ಆಂಡ್‌ ರನ್ ಪ್ರಶ್ನೆಯೇ ಇಲ್ಲ. ಈ ಹಿಂದೆ 2008-2013ರ ಅವಧಿಯಲ್ಲಿನ ಹಗರಣಗಳ ಬಗ್ಗೆ ನಾನು ದಾಖಲೆ ಇಟ್ಟು ಮಾಡಿದ್ದೇನೆ ಎಂದು ತಿಳಿಸಿದರು.

ವರ್ಗಾವಣೆ ದಂಧೆಗೆ ಅಡ್ಡಗಳನ್ನು ಮಾಡಿಕೊಂಡಿದ್ದಾರೆ. ಈ ದರಪಟ್ಟಿ (Transfer Rate Card) ಅವರೇ ಕೊಟ್ಟಿದ್ದ ಜಾಹೀರಾತಿನ ಮುಂದುವರೆದ ಭಾಗ ಇರಬಹುದು. ವಾಸ್ತವಾಂಶವನ್ನು ಸದನದ ಮುಂದೆ ಇಟ್ಟಿದ್ದೇನೆ. ಭ್ರಷ್ಟಾಚಾರ ನಿಲ್ಲಿಸುವ ಧೈರ್ಯವಿದ್ದರೆ ಕ್ರಮ ಕೈಗೊಳ್ಳಲಿ. ಈ ದರಪಟ್ಟಿ ಈಗ ಇವರ ಅವಧಿಯಲ್ಲೇ ಮಾಡಿದ್ದಾರೆ. ಅಧಿಕಾರಿಗಳಿಂದಲೇ ಈ ಮಾಹಿತಿ ಸೋರಿಕೆ ಆಗಿದೆ ಎಂದು ಹೇಳಿದರು.

ನಾನು ಒಕ್ಕಲಿಗ ಸಮಾಜದಲ್ಲಿ ಯಾರನ್ನೂ ಬೆಳೆಯಲು ಅಡ್ಡಿ ಮಾಡಿಲ್ಲ. ಭ್ರಷ್ಟಾಚಾರದ ದಾಖಲೆ ಇಟ್ಟಿದ್ದಕ್ಕೆ ಜಾತಿ ಬಣ್ಣ ಕಟ್ಟಿದ್ದಾರೆ. ಭ್ರಷ್ಟಾಚಾರಕ್ಕೆ ಯಾವುದಾದರೂ ಜಾತಿ ಇದ್ಯಾ ಎಂದು ಪ್ರಶ್ನಿಸುವ ಮೂಲಕ ಚಲುವರಾಯಸ್ವಾಮಿಗೆ ಟಾಂಗ್‌ ನೀಡಿದರು.

ಎಚ್‌ಡಿಕೆ ನೀಡಿದ ಕೃಷಿ ಇಲಾಖೆಯ ವರ್ಗಾವಣೆ ದರಪಟ್ಟಿ ಎಷ್ಟು?
ಕೇಂದ್ರ ಕಚೇರಿ ಜಂಟಿ ನಿರ್ದೇಶಕರು – 1 ಕೋಟಿಯಿಂದ 1.5 ಕೋಟಿ ರೂ.
ಜಿಲ್ಲೆಗಳ ಜಂಟಿ ನಿರ್ದೇಶಕರು – 15 ಲಕ್ಷದಿಂದ 75 ಲಕ್ಷ ರೂ.
ಉಪ ನಿರ್ದೇಶಕರು – 10 ಲಕ್ಷದಿಂದ 30 ಲಕ್ಷ ರೂ.
ಸಹಾಯಕ ನಿರ್ದೇಶಕರು – 5 ಲಕ್ಷದಿಂದ 15 ಲಕ್ಷ ರೂ.
ಜಿಲ್ಲಾ ಕಚೇರಿಯಲ್ಲಿನ ಸಹಾಯಕ ನಿರ್ದೇಶಕರು 3 ಲಕ್ಷದಿಂದ 10 ಲಕ್ಷ ರೂ.
ರೈತ ಸಂಪರ್ಕ ಕೇಂದ್ರಗಳು – 1 ಲಕ್ಷ ದಿಂದ 2 ಲಕ್ಷ ರೂ.

 

Web Stories

Share This Article
ಮಳೆಗಾಲದಲ್ಲಿ ಪಡ್ಡೆಗಳ ಮೈಚಳಿ ಬಿಡಿಸಿದ ತಮನ್ನಾ ಹಾಟ್‌ ಲುಕ್‌ ಯೋಗ ದಿನದಂದು ನಟಿ ಪ್ರಣಿತಾ ಯೋಗ… ಬಿಕಿನಿ ಬಿಟ್ಟು ಸೀರೆ ಉಟ್ಟ ನಟಿ ದಿವ್ಯಾ ಭಾರತಿ!.. ಶೋಲ್ಡರ್‌ಲೆಸ್ ಡ್ರೆಸ್‌ನಲ್ಲಿ ಪಟಾಕಿ ಪೋರಿ ಮಿಂಚಿಂಗ್ ಶಾರ್ಟ್ ಡ್ರೆಸ್‌ನಲ್ಲಿ ‘ಕಾಟೇರ’ ನಟಿ ಮಿಂಚಿಂಗ್ ನವಿಲಿನಂತೆ ಕಂಗೊಳಿಸಿದ ಮಲೈಕಾ ಚೈತ್ರಾ ಲುಕ್‌ಗೆ ಫ್ಯಾನ್ಸ್‌ ಫಿದಾ ಡಿಫರೆಂಟ್ ಆಗಿ ಸೀರೆಯುಟ್ಟ ಸ್ಯಾಮ್ ಬೋಲ್ಡ್ ಅವತಾರ ತಾಳಿದ ಚೈತ್ರಾ ಆಚಾರ್ ಡೆನಿಮ್ ಡ್ರೆಸ್‌ನಲ್ಲಿ ದೀಪಿಕಾ ಫೋಟೋಶೂಟ್