ಬುದ್ಧಿಜೀವಿಗಳ ದುರ್ಬುದ್ಧಿ ದೂರವಾಗಲಿ- ಪೇಜಾವರಶ್ರೀ ಪ್ರಾರ್ಥನೆ

Public TV
1 Min Read

ಉಡುಪಿ: ದೇಶದ ಬುದ್ಧಿಜೀವಿಗಳು ಬಗ್ಗೆ ತಿರಸ್ಕಾರ ಉಂಟಾಗಿದೆ. ಇಂತಹ ಸಂದರ್ಭದಲ್ಲೂ ಅವರಿಗೆ ದೇಶಾಭಿಮಾನ ಇಲ್ಲವಲ್ಲ ಎಂದು ಖೇದ ಉಂಟಾಗಿದೆ ಎಂದು ಪೇಜಾವರಶ್ರೀ ಹೇಳಿದರು.

ಬುದ್ಧಿಜೀವಿಗಳಿಗೆ ಒಳ್ಳೆ ಬುದ್ಧಿ ಬರಲಿ. ಬುದ್ಧಿಜೀವಿಗಳು ದುರ್ಬುದ್ಧಿ ಜೀವಿಗಳು ಆಗಬಾರದು. ಬುದ್ಧಿಜೀವಿಗಳು ಸದ್ಬುದ್ಧಿ ಜೀವಿಗಳಾಗಲಿ. ಬುದ್ಧಿಜೀವಿಗಳ ದುರ್ಬುದ್ಧಿ ದೂರವಾಗಲಿ ಎಂದು ದೇವರಲ್ಲಿ ನಾನು ಪ್ರಾರ್ಥನೆ ಮಾಡುತ್ತೇನೆ ಎಂದು ತಿಳಿಸಿದರು.

ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಅಭಿನಂದನ್ ತೋರಿದ ಧೈರ್ಯ ಮೆಚ್ಚುವಂತದ್ದು. ಶತ್ರುಗಳ ದೇಶದಲ್ಲಿ ಆತ ವರ್ತಿಸಿದ ರೀತಿ ದೇಶದ ಗೌರವ ಹೆಚ್ಚಿಸಿದೆ. ಅಭಿನಂದನ್ ಗೆ ಸಾವಿರ ಸಾವಿರ ಅಭಿನಂದನೆಗಳು ಎಂದು ಪೇಜಾವರಶ್ರೀ ಹೇಳಿದ್ದಾರೆ. ಅಭಿನಂದನ್ ಜೇಬಲ್ಲಿದ್ದ ಕಾಗದ ಪತ್ರ ನುಂಗಿ ದೇಶದ ಕಾಳಜಿ ತೋರಿದ್ದಾರೆ ಎಂದರು. ಪಾಕಿಸ್ತಾನದ ಜೊತೆ ಯುದ್ಧ ಬೇಡ. ಯುದ್ಧದಿಂದ ಸಾವಿರಾರು ಸಾವು-ನೋವುಗಳು ಸಂಭವಿಸುತ್ತದೆ. ಯುದ್ಧದಿಂದ ನಮ್ಮ ಸೈನಿಕರ ಸಾವಾಗುತ್ತದೆ. ಆತ್ಮಾಭಿಮಾನಕ್ಕೆ ಚ್ಯುತಿಬಾರದ ರೀತಿಯಲ್ಲಿ ಶಾಂತಿ ಸ್ಥಾಪನೆಯಾಗಲಿ ಎಂದರು.

ಮೋದಿಗೆ ನನ್ನ ಅಭಿನಂದನೆ. ಮೋದಿಯ ಅಭಿವೃದ್ಧಿ ಮತ್ತು ಧೈರ್ಯ, ದಿಟ್ಟತನವನ್ನು ನಾನು ಮೆಚ್ಚುತ್ತೇನೆ. ಮೋದಿ ಸೂಕ್ತ ಸಮಯದಲ್ಲಿ ದೇಶದ ಪ್ರಧಾನಿಯಾಗಿದ್ದಾರೆ ಎಂದು ಹೇಳಿದರು.

ಯಡಿಯೂರಪ್ಪ 22 ಸೀಟು ಹೇಳಿಕೆ ವಿಚಾರ ಬಹಳ ಚಿಕ್ಕದು. ಇದು ದೊಡ್ಡ ವಿಷಯವಲ್ಲ. ಇಂದಿರಾಗಾಂಧಿ ಆಳ್ವಿಕೆ ಸಂದರ್ಭ ಯುದ್ಧ ಆಗಿದೆ. ಆಗ ಕಾಂಗ್ರೆಸ್ ಗೆ ಉಪಯೋಗವಾಗ್ತದೆ ಎಂದು ಎಲ್ಲರು ಹೇಳಿಕೊಂಡಿದ್ದರು. ಬಿಎಸ್‍ವೈ ಹೇಳಿಕೆಯನ್ನು ದೊಡ್ಡ ವಿಷಯ ಮಾಡಬೇಕಾಗಿಲ್ಲ ಎಂದರು. ಪಾಕ್ ನ ಉಗ್ರರ ಸಂಹಾರ ಆಗಬೇಕು. ಅಮಾಯಕರ ಹತ್ಯೆ ಆಗಬಾರದು. ಉಗ್ರರನ್ನು ಹುಡುಕಿ ಕೊಲ್ಲಬೇಕು. ಸೈನಿಕರ ಸರ್ಜಿಕಲ್ ಸ್ಟ್ರೈಕ್ ಗೆ ಅಭಿನಂದಿಸ್ತೇನೆ ಎಂದು ತಿಳಿಸಿದರು.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Share This Article
Leave a Comment

Leave a Reply

Your email address will not be published. Required fields are marked *