ಮಹಾರಾಷ್ಟ್ರ ಶೈಲಿಯ ಶೇಂಗಾ ಚಟ್ನಿ ಪುಡಿ ತಿಂದು ನೋಡಿ

Public TV
1 Min Read

ಸಾಮಾನ್ಯವಾಗಿ ಶೇಂಗಾ ಎಲ್ಲರೂ ತಿಂದಿರುತ್ತಾರೆ. ಶೇಂಗಾ ಬೀಜವನ್ನು ಸೇವಿಸುವುದರಿಂದ ಬಹಳಷ್ಟು ಆರೋಗ್ಯ ಲಾಭಗಳಿವೆ. ಇದು ಪ್ರೋಟಿನ್, ಫೈಬರ್ ಮತ್ತು ವಿಟಮಿನ್ ಬಿ6, ವಿಟಮಿನ್ ಇ ಮುಂತಾದ ಪೋಷಕಾಂಶಗಳನ್ನು ಒಳಗೊಂಡಿದೆ. ಇವತ್ತಿನ ನಮ್ಮ ರೆಸಿಪಿಯಲ್ಲಿ ಅನ್ನ, ಇಡ್ಲಿ, ದೋಸೆ, ಮೊಸರನ್ನ ಮುಂತಾದ ಆಹಾರಗಳ ರುಚಿಯನ್ನು ಹೆಚ್ಚಿಸುವ ಮಹಾರಾಷ್ಟ್ರ ಶೈಲಿಯ ಶೇಂಗಾ ಚಟ್ನಿ ಪುಡಿ ಯಾವ ರೀತಿ ಮಾಡುವುದು ಎಂಬುದನ್ನು ತಿಳಿಸಿಕೊಡುತ್ತಿದ್ದೇವೆ. ಹಾಗಿದ್ರೆ ಇದನ್ನು ಯಾವ ರೀತಿ ಮಾಡುವುದು ಎಂಬುದನ್ನು ತಿಳಿದುಕೊಳ್ಳಿ.

ಬೇಕಾಗುವ ಸಾಮಗ್ರಿಗಳು:
ಶೇಂಗಾ – 1 ಕಪ್
ಬೆಳ್ಳುಳ್ಳಿ – 5
ಕೆಂಪು ಒಣ ಮೆಣಸು – 4
ಜೀರಿಗೆ – 1 ಚಮಚ
ಅಚ್ಚಖಾರದ ಪುಡಿ – ಅರ್ಧ ಚಮಚ
ಅರಶಿಣ ಪುಡಿ – ಕಾಲು ಚಮಚ
ಉಪ್ಪು – ರುಚಿಗೆ ತಕ್ಕಷ್ಟು

ಮಾಡುವ ವಿಧಾನ:
* ಮೊದಲಿಗೆ ಒಂದು ಪ್ಯಾನ್ ಬಿಸಿಗಿಟ್ಟು ಅದರಲ್ಲಿ ಶೇಂಗಾ ಹಾಕಿಕೊಂಡು 8 ನಿಮಿಷಗಳ ಕಾಲ ಫ್ರೈ ಮಾಡಿಕೊಂಡು ಒಂದು ಬೌಲ್‌ನಲ್ಲಿ ತೆಗೆದಿಡಿ.
* ಬಳಿಕ ಅದೇ ಪ್ಯಾನ್ ಒಣ ಮೆಣಸು ಮತ್ತು ಜೀರಿಗೆಯನ್ನು ಹಾಕಿಕೊಂಡು ಒಂದು ಸಲ ಹುರಿದುಕೊಳ್ಳಿ.
* ಈಗ ಒಂದು ಮಿಕ್ಸಿ ಜಾರಿಗೆ ಬೆಳ್ಳುಳ್ಳಿ, ಒಣ ಮೆಣಸು, ಜೀರಿಗೆ, ಅಚ್ಚಖಾರದ ಪುಡಿ, ಅರಶಿಣ ಮತ್ತು ರುಚಿಗೆ ತಕ್ಕಷ್ಟು ಉಪ್ಪನ್ನು ಸೇರಿಸಿಕೊಂಡು ಚನ್ನಾಗಿ ಪುಡಿಮಾಡಿಕೊಳ್ಳಿ.
* ನಂತರ ಹುರಿದ ಶೇಂಗಾ ಬೀಜದ ಸಿಪ್ಪೆ ತೆಗೆದು ಮಿಕ್ಸಿ ಜಾರಿಗೆ ಹಾಕಿಕೊಂಡು ಮತ್ತೊಂದು ಸಲ ಪುಡಿ ಮಾಡಿ.
* ಈಗ ಶೇಂಗಾ ಚಟ್ನಿ ಪುಡಿ ಸವಿಯಲು ಸಿದ್ಧ. ಇದನ್ನು ಒಂದು ಗಾಳಿಯಾಡದ ಡಬ್ಬದಲ್ಲಿ ಹಾಕಿಟ್ಟುಕೊಂಡು ಬೇಕಾದಾಗ ಉಪಯೋಗಿಸಿಕೊಳ್ಳಬಹುದು.

Share This Article