ಪಿಡಿಓ ಅಧಿಕಾರಿ ಅಮಾನತು

Public TV
1 Min Read

ಆನೇಕಲ್: ವ್ಯಕ್ತಿಯೊಬ್ಬರು ಮಾಹಿತಿ ಹಕ್ಕು ಕಾಯ್ದೆಯಡಿ ಸಲ್ಲಿಸಿದ್ದ ವಿವರವನ್ನು ನೀಡಲು ವಿಳಂಬ ಮಾಡಿದ ಹಿನ್ನೆಲೆ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿಯನ್ನು ಅಮಾನತು ಮಾಡಲಾಗಿರುವ ಘಟನೆ ಬೆಂಗಳೂರು ಹೊರವಲಯದ ಹೆನ್ನಾಗರದಲ್ಲಿ ನಡೆದಿದೆ.

ಆನೇಕಲ್ ತಾಲೂಕಿನ ಹೆನ್ನಾಗರ ಗ್ರಾಪಂ ಅಭಿವೃದ್ಧಿ ಅಧಿಕಾರಿ ತುಳಸಿನಾಥ್ ಅಮಾನತುಗೊಂಡ ಅಧಿಕಾರಿ. ಬೆಂಗಳೂರು ನಗರ ಜಿಪಂ ಸಿಇಒ ಅಮಾನತು ಮಾಡಿ ಆದೇಶ ಹೊರಡಿಸಿದ್ದಾರೆ. ಮಾಹಿತಿ ಹಕ್ಕು ಕಾಯ್ದೆಯಡಿ ಆನೇಕಲ್ ತಾಲೂಕು ಜಿಗಣಿ ಹೋಬಳಿ ಗ್ರಾಮದ ಹೆನ್ನಾಗರ ಗ್ರಾಪಂ ಪಿಡಿಓ ತುಳಸಿನಾಥ್ ಅವರಿಗೆ ಮಾಹಿತಿ ಹಕ್ಕು ಕಾಯ್ದೆಯಡಿಯಲ್ಲಿ ದಾಖಲೆಯನ್ನು ಕೇಳಿ ವೀರಭದ್ರಸ್ವಾಮಿ ಎಂಬುವವರು ಅರ್ಜಿ ಸಲ್ಲಿಸಿದ್ದರು. ಆದರೆ ದಾಖಲೆಯನ್ನು ನೀಡದೆ ಹಲವು ಬಾರಿ ಮಾಹಿತಿ ಕೇಳಿದರೂ ಸಹ ವಿಳಂಬ ಮಾಡಿದ್ದರು.

ಕರ್ತವ್ಯಲೋಪ ವಿಚಾರದಲ್ಲಿ ಮಾಹಿತಿ ಹಕ್ಕು ಕಾಯ್ದೆ ಪ್ರಕರಣದಲ್ಲಿ ರಾಜ್ಯ ಮಾಹಿತಿ ಆಯುಕ್ತರು ಎಚ್. ಪಿ. ಸುಧಾಮ್‍ದಾಸ್ ಅವರ ಆದೇಶದಂತೆ ಜಿಪಂ ಸಂಗಪ್ಪ ಐಎಎಸ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅವರು ಶಿಸ್ತುಕ್ರಮ ಜರುಗಿಸುವಂತೆ ಆದೇಶ ಮಾಡಿರುತ್ತಾರೆ. ಅದರಂತೆ ಜಿಲ್ಲಾ ಪಂಚಾಯಿತಿ ಅವರು ಆಯೋಗದ ಆದೇಶಕ್ಕೆ ಮಾನ್ಯತೆ ನೀಡಿ ಬೇಜವಾಬ್ದಾರಿಯಿಂದ ಮಾಹಿತಿ ಕೊಡದೆ ಮಾಹಿತಿ ಆಯೋಗದ ನೀತಿ-ನಿಯಮಗಳನ್ನು ಉಲ್ಲಂಘಿಸುತ್ತಿದ್ದ ಇಂತಹ ಅಧಿಕಾರಿ ವಿರುದ್ಧ ಮಹತ್ವದ ಆದೇಶವಾಗಿದೆ. ಇದನ್ನೂ ಓದಿ: ಎದುರಾಳಿಗಳ ನಂಬರ್ ಎಷ್ಟೇ ಇರಲಿ, ಗೇಮ್ ನಮ್ಮದೇ: ಆಪರೇಷನ್ ಕಮಲದ ಸಂದೇಶ ಏನು!?

Live Tv

Share This Article
Leave a Comment

Leave a Reply

Your email address will not be published. Required fields are marked *