ಬೆಂಗಳೂರು ಬುಲ್ಸ್ ಎದುರು ಪಲ್ಟಿ ಹೊಡೆದ ಪುನೇರಿ ಪಲ್ಟನ್

Public TV
1 Min Read

ಬೆಂಗಳೂರು: ಬೆಂಗಳೂರು ಬುಲ್ಸ್ ಮತ್ತು ಪುನೇರಿ ಪಲ್ಟನ್ ನಡುವಿನ ಪಂದ್ಯ ಏಕಮುಖಿಯಾಗಿ ಸಾಗಿ ಬೆಂಗಳೂರು ಬುಲ್ಸ್ 40-29 ಅಂಕಗಳಿಂದ ಗೆದ್ದು, ಅಂಕಪಟ್ಟಿಯಲ್ಲಿ ಮೊದಲ ಸ್ಥಾನ ಅಲಂಕರಿಸಿದೆ.

ಆರಂಭದಿಂದಲೇ ಬುಲ್ಸ್, ಪುನೇರಿ ಪಲ್ಟನ್ ಮೇಲೆ ಸವಾರಿ ಮಾಡಿತು. ಬುಲ್ಸ್ ನಾಯಕ ಪವನ್ ಶೆರವತ್ ಮಿಂಚಿನ ರೈಡಿಂಗ್ ಮತ್ತೊಮ್ಮೆ ಗಮನಸೆಳೆದರು. ಒಟ್ಟು 9 ರೈಡ್, 2 ಬೋನಸ್ ಅಂಕಗಳೊಂದಿಗೆ 11 ಪಾಯಿಂಟ್ ಸಂಪಾದಿಸಿ ಗೆಲುವಿನ ರೂವಾರಿಯಾದರು. ಬೆಂಗಳೂರಿನ ಬಲಿಷ್ಠ ಡಿಫೆನ್ಸ್ ಮತ್ತು ರೈಡಿಂಗ್ ಮುಂದೆ ಮಂಕಾದ ಪುನೇರಿ 29-40 ಅಂತರದಿಂದ ಬೆಂಗಳೂರಿಗೆ ಶರಣಾಯಿತು. ಇದನ್ನೂ ಓದಿ: ಅಂಧತ್ವವನ್ನು ಮೆಟ್ಟಿನಿಂತು ಅಂತರಾಷ್ಟ್ರೀಯ ಕ್ರಿಕೆಟ್‍ನಲ್ಲಿ ಮಿಂಚುತ್ತಿರುವ ಹಳ್ಳಿ ಪ್ರತಿಭೆ ಲೋಕೇಶ್

ಪುನೇರಿ ಪಲ್ಟನ್ 17 ರೈಡ್, 10 ಟೇಕಲ್, 2 ಆಲ್‍ಔಟ್ ಪಾಯಿಂಟ್ ಸೇರಿ ಒಟ್ಟು 29 ಅಂಕ ಪಡೆದರೆ, ಬೆಂಗಳೂರು ಬುಲ್ಸ್ 23 ರೈಡ್, 1 ಸೂಪರ್ ರೈಡ್, 11 ಟೇಕಲ್, 4 ಆಲ್‍ಔಟ್, 2 ಇತರೆ ಅಂಕದೊಂದಿಗೆ ಒಟ್ಟು 40 ಅಂಕ ಸಂಪಾದಿಸಿ 11 ಅಂಕಗಳ ಅಂತರದ ಜಯ ಸಾಧಿಸಿದೆ.  ಇದನ್ನೂ ಓದಿ: 47ನೇ ರಾಷ್ಟ್ರೀಯ ಜೂನಿಯರ್ ವಾಲಿಬಾಲ್ ಚಾಂಪಿಯನ್‍ಶಿಪ್‍ನಲ್ಲಿ ಭಾಗವಹಿಸಿದ್ದ ಕರ್ನಾಟಕ ತಂಡಕ್ಕೆ ಸನ್ಮಾನ

Share This Article
Leave a Comment

Leave a Reply

Your email address will not be published. Required fields are marked *