ಟೈಟಾನ್ಸ್ ವಿರುದ್ಧದ ಪಂದ್ಯವನ್ನು ಕಡೆಯ ನಿಮಿಷದ ಹೋರಾಟದಲ್ಲಿ ಟೈ ಮಾಡಿಕೊಂಡ ಬುಲ್ಸ್

Public TV
1 Min Read

ಬೆಂಗಳೂರು: ಬೆಂಗಳೂರು ಬುಲ್ಸ್ ಮತ್ತು ತೆಲುಗು ಟೈಟಾನ್ಸ್ ನಡುವಿನ ರೋಚಕ ಕಾದಾಟದಲ್ಲಿ ಕಡೆಯ ನಿಮಿಷ ಬೆಂಗಳೂರಿನ ನಾಯಕ ಪವನ್ ಶೆರವತ್, ಟೈಟಾನ್ಸ್ ನಾಯಕ ರೋಹಿತ್ ಕುಮಾರ್ ಅವರನ್ನು ಹಿಡಿಯುವ ಮೂಲಕ ಪಂದ್ಯವನ್ನು 34-34 ಅಂಕಗಳಿಂದ ಟೈ ಗೊಳಿಸಲು ಯಶಸ್ವಿಯಾದರು.

ಎರಡು ತಂಡಗಳು ಕೂಡ ಆರಂಭದಿಂದಲೂ ಸಮಬಲದ ಹೋರಾಟ ಸಾಧಿಸುತ್ತ ಮುನ್ನುಗ್ಗಿದವು. ಒಂದು ಹಂತದಲ್ಲಿ ಬೆಂಗಳೂರು ಮುನ್ನಡೆ ಕಾಯ್ದುಕೊಂಡಿದ್ದರೂ ಕೂಡ ಅದನ್ನು ಉಳಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಅಂತಿಮ 3 ನಿಮಿಷದ ಆಟದಲ್ಲಿ ಟೈಟಾನ್ಸ್ ಮುನ್ನಡೆ ಸಾಧಿಸಿತು. ಆದರೆ ಕಡೆಯ 1 ನಿಮಿಷದಲ್ಲಿ ಪಂದ್ಯ ರೋಚಕ ಹಂತಕ್ಕೆ ಸಾಗಿ ಅಂತಿಮವಾಗಿ 34-34 ಅಂಗಳಿಂದ ಸಮಬಲ ಸಾಧಿಸಿತು. ಇದನ್ನೂ ಓದಿ: ಟೀಂ ಇಂಡಿಯಾ ಸಾರಥ್ಯ ಹಿಡಿದ ಕನ್ನಡಿಗರಿವರು

ಬೆಂಗಳೂರು ಪರ ಚಂದ್ರನ್ ರಂಜಿತ್ 3 ರೈಡ್, 6 ಬೋನಸ್ ಪಾಯಿಂಟ್ ಸೇರಿ ಒಟ್ಟು 9 ಅಂಕಗಳಿಸಿದರೆ, ಟೈಟಾನ್ಸ್ ಪರ ಅಂಕಿತ್ ಬೇನಿವಾಲ್ 10 ರೈಡ್ ಪಾಯಿಂಟ್ ಗಳಿಸಿ ಮಿಂಚಿದರು. ಆದರೆ ಜಿದ್ದಾಜಿದ್ದಿನ ಕಾದಾಟ ಕೊನೆಗೆ ಸಮಬಲ ಸಾಧಿಸಿ ಅಭಿಮಾನಿಗಳಿಗೆ ಕಬಡ್ಡಿ ರಸದೌತಣವನ್ನು ಉಣಬಡಿಸಿತು. ಈ ಮೂಲಕ ದಿನದ ಎರಡು ಪಂದ್ಯಗಳು ಟೈನಲ್ಲಿ ಅಂತ್ಯವಾಯಿತು. ಈ ಮೊದಲು ಯುಮುಂಬಾ ಮತ್ತು ಯುಪಿ ಯೋಧ ನಡುವಿನ ಪಂದ್ಯ ಕೂಡ 28-28 ಅಂಕಗಳಿಂದ ಟೈ ಆಗಿತ್ತು. ಇದನ್ನೂ ಓದಿ: ದಕ್ಷಿಣ ಆಫ್ರಿಕಾದಲ್ಲಿ ಅದ್ದೂರಿಯಾಗಿ ಹೊಸ ವರ್ಷ ಆಚರಿಸಿದ ವಿರಾಟ್ ಕೊಹ್ಲಿ ದಂಪತಿ

ಬೆಂಗಳೂರು ತಂಡ 21 ರೈಡ್, 13 ಟೇಕಲ್ ಪಾಯಿಂಟ್‍ಗಳಿಂದ 34 ಅಂಕ ಗಳಿಸಿದರೆ, ಟೈಟಾನ್ಸ್ 19 ರೈಡ್, 1 ಸೂಪರ್ ರೈಡ್, 11 ಟೇಕಲ್ ಮತ್ತು 4 ಆಲ್‍ಔಟ್ ಪಾಯಿಂಟ್‍ನಿಂದ ಒಟ್ಟು 34 ಅಂಕ ಗಳಿಸಿತು.

Share This Article
Leave a Comment

Leave a Reply

Your email address will not be published. Required fields are marked *