ಪುಣೆ ಕಾನೂನು ವಿದ್ಯಾರ್ಥಿನಿ ಪರ ನಿಂತ ಪವನ್‌ ಕಲ್ಯಾಣ್‌ – ದೀದಿ ಹೇಳಿಕೆಗೆ ಖಂಡನೆ

Public TV
2 Min Read

– ವಿದ್ಯಾರ್ಥಿನಿ ಬಂಧಿಸಿದ ಕೋಲ್ಕತ್ತಾ ಪೊಲೀಸರ ನಡೆಗೆ ಆಂಧ್ರ ಡಿಸಿಎಂ ಅಸಮಾಧಾನ

ನವದೆಹಲಿ: ಕೋಮುವಾದಿ ಪೋಸ್ಟ್‌ಗಾಗಿ ಕಾನೂನು ವಿದ್ಯಾರ್ಥಿನಿಯೊಬ್ಬಳನ್ನು ಬಂಧಿಸಿದ ಕೋಲ್ಕತ್ತಾ ಪೊಲೀಸರ ಕ್ರಮವು ರಾಜಕೀಯ ವಿವಾದಕ್ಕೆ ಕಾರಣವಾಗಿದೆ. ಎನ್‌ಡಿಎ ಮಿತ್ರಪಕ್ಷ ಮತ್ತು ಆಂಧ್ರ ಡಿಸಿಎಂ ಪವನ್‌ ಕಲ್ಯಾಣ್‌ (Pawan Kalyan), ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ (Mamata Banerjee) ಹೇಳಿಕೆಯನ್ನು ಖಂಡಿಸಿದ್ದಾರೆ.

26 ಅಮಾಯಕರ ಸಾವಿಗೆ ಕಾರಣವಾದ ಪಹಲ್ಗಾಮ್‌ ಭಯೋತ್ಪಾದಕ ದಾಳಿ ವಿರುದ್ಧ ಭಾರತ ನಡೆಸಿದ ಪ್ರತಿದಾಳಿ ‘ಆಪರೇಷನ್‌ ಸಿಂಧೂರ’ (Operation Sindoor) ಸಂದರ್ಭದಲ್ಲಿ ಮಾತನಾಡದಿದ್ದಕ್ಕಾಗಿ ಬಾಲಿವುಡ್‌ ನಟರನ್ನು ವಿರುದ್ಧ ಕಾನೂನು ವಿದ್ಯಾರ್ಥಿನಿ ಶರ್ಮಿಸ್ತಾ ಪನೋಲಿ (Sharmista Panoli) ಪೋಸ್ಟ್‌ ಹಾಕಿದ್ದರು. ನಿಂದನಾತ್ಮಕ, ಕೋಮುವಾದಿ ಭಾಷೆಯನ್ನು ಬಳಸಿ ಸೋಷಿಯಲ್‌ ಮೀಡಿಯಾದಲ್ಲಿ ಪೋಸ್ಟ್‌ ಹಂಚಿಕೊಂಡಿದ್ದರು. ಈ ಹಿನ್ನೆಲೆಯಲ್ಲಿ ವಿದ್ಯಾರ್ಥಿನಿಯನ್ನು ಪೊಲೀಸರು ಬಂಧಿಸಿದ್ದರು. ಇದನ್ನೂ ಓದಿ: ‘ಆಪರೇಷನ್‌ ಸಿಂಧೂರ’; ಕೋಮು ಗುರಿಯಾಗಿಸಿ ಆಕ್ಷೇಪಾರ್ಹ ಪೋಸ್ಟ್‌ – ಪುಣೆ ಕಾನೂನು ವಿದ್ಯಾರ್ಥಿನಿ ಬಂಧನ

ಶರ್ಮಿಸ್ತಾ ಪನೋಲಿ ವಿರುದ್ಧ, ಧರ್ಮದ ಆಧಾರದ ಮೇಲೆ ದ್ವೇಷವನ್ನು ಉತ್ತೇಜಿಸುವುದು, ಧಾರ್ಮಿಕ ಭಾವನೆಗಳನ್ನು ಕೆರಳಿಸುವ ಉದ್ದೇಶಪೂರ್ವಕ ಕೃತ್ಯಗಳು ಆರೋಪದಲ್ಲಿ ಎಫ್‌ಐಆರ್‌ ದಾಖಲಿಸಲಾಗಿದೆ. ವಿದ್ಯಾರ್ಥಿನಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, 14 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿದೆ.

ವಿದ್ಯಾರ್ಥಿಯ ಬಂಧನದ ಬಗ್ಗೆ ಜನ ಕಲ್ಯಾಣ ಸೇನಾ ನಾಯಕ ಪವನ್ ಕಲ್ಯಾಣ್ ಎಕ್ಸ್ ನಲ್ಲಿ ಪ್ರತಿಕ್ರಿಯಿಸಿದ್ದಾರೆ. ಆಪರೇಷನ್ ಸಿಂಧೂರ ಸಮಯದಲ್ಲಿ ಕಾನೂನು ವಿದ್ಯಾರ್ಥಿನಿ ಶರ್ಮಿಸ್ತಾ ಮಾತನಾಡಿದ್ದಳು. ಆಕೆಯ ಮಾತುಗಳಿಂದ ಕೆಲವರಿಗೆ ನೋವುಂಟಾಗಿರಬಹುದು. ಅದನ್ನರಿತು ಆಕೆ ತಪ್ಪು ಒಪ್ಪಿಕೊಂಡಿದ್ದಾಳೆ. ಕೊನೆಗೆ ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡಿದ್ದ ವೀಡಿಯೋವನ್ನು ಡಿಲೀಸ್‌ ಮಾಡಿದ್ದಾಳೆ. ಕ್ಷಮೆಯನ್ನೂ ಯಾಚಿಸಿದ್ದಾಳೆ. ಪಶ್ಚಿಮ ಬಂಗಾಳ ಪೊಲೀಸರು ಶರ್ಮಿಸ್ತಾ ವಿರುದ್ಧ ತ್ವರಿತವಾಗಿ ಕ್ರಮಕೈಗೊಂಡರು. ಆದರೆ, ಟಿಎಂಸಿಯ ಚುನಾಯಿತ ನಾಯಕರು, ಸಂಸದರು ಸನಾತನ ಧರ್ಮವನ್ನು ಅಪಹಾಸ್ಯ ಮಾಡಿದಾಗ ಲಕ್ಷಾಂತರ ಜನರಲ್ಲಿ ಉಂಟಾದ ತೀವ್ರವಾದ ನೋವಿಗೆ ಸ್ಪಂದನೆ ಏನು? ಸನಾತನ ಧರ್ಮದ ಬಗ್ಗೆ ಮಾತನಾಡಿದವರ ಕ್ಷಮೆ ಎಲ್ಲಿದೆ? ಅವರ ತ್ವರಿತ ಬಂಧನ ಎಲ್ಲಾಯಿತು ಎಂದು ಪವನ್‌ ಕಲ್ಯಾಣ್‌ ಪ್ರಶ್ನಿಸಿದ್ದಾರೆ. ಇದನ್ನೂ ಓದಿ: ಪಾಕ್ ದಾಳಿಯಿಂದ ನಮ್ಮ ಫೈಟರ್ ಜೆಟ್‌ಗಳಿಗೂ ಹಾನಿ? – ಮೊದಲ ಬಾರಿಗೆ ಸಿಡಿಎಸ್ ಪ್ರತಿಕ್ರಿಯೆ ಏನು?

ಇದಕ್ಕೂ ಮುನ್ನ ಮಮತಾ ಬ್ಯಾನರ್ಜಿ ಅವರು ಬಿಜೆಪಿ ಗುರಿಯಾಗಿಸಿ ಹೇಳಿಕೆ ನೀಡಿದ್ದರು. ಪಶ್ಚಿಮ ಬಂಗಾಳದಲ್ಲಿ ಬಿಜೆಪಿಯು ವಿಭಜಕ ರಾಜಕೀಯದ ಮೂಲಕ ಕೋಮು ಗಲಭೆಗಳನ್ನು ಪ್ರಚೋದಿಸಲು ಪ್ರಯತ್ನಿಸುತ್ತಿದೆ ಎಂದು ಆರೋಪಿಸಿದ್ದರು. ಬಿಜೆಪಿ ನಿಲುವುಗಳು ಹಿಂದೂ ಧರ್ಮದ ನಿಜವಾದ ತತ್ವಗಳಿಗೆ ವಿರುದ್ಧವಾಗಿದೆ ಎಂದು ಟೀಕಿಸಿದ್ದರು.

Share This Article