ಸಿಎಂ ಸಿದ್ದರಾಮಯ್ಯರನ್ನು ಭೇಟಿಯಾದ ಪವನ್ ಕಲ್ಯಾಣ್

Public TV
1 Min Read

ಆಂಧ್ರಪ್ರದೇಶದ ಉಪಮುಖ್ಯಮಂತ್ರಿ ಮತ್ತು ತೆಲುಗಿನ ನಟನಾಗಿರುವ ಪವನ್ ಕಲ್ಯಾಣ್ (Pawan Kalyan) ಇಂದು (ಆ.8) ಬೆಂಗಳೂರಿನಲ್ಲಿ ಸಿಎಂ ಸಿದ್ದರಾಮಯ್ಯ (CM Siddaramaiah) ಅವರನ್ನು ಭೇಟಿಯಾಗಿದ್ದಾರೆ. ಇದನ್ನೂ ಓದಿ:ಮಗಧೀರ ವಿಲನ್ ಈಗ ಹೀರೋ- ದೇವ್ ಗಿಲ್ ನಟನೆಯ ‘ಅಹೋ ವಿಕ್ರಮಾರ್ಕ’ ಚಿತ್ರದ ಸಾಂಗ್ ರಿಲೀಸ್

ಅರಣ್ಯ ಇಲಾಖೆ ಸಭೆ ಹಿನ್ನೆಲೆ ಬೆಂಗಳೂರಿಗೆ ಪವನ್ ಕಲ್ಯಾಣ್ ಆಗಮಿಸಿದ್ದಾರೆ. ಸಭೆ ಆರಂಭಕ್ಕೂ ಮುನ್ನ ಸಿಎಂ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿ ಕೆಲ ಸಮಯ ಮಾತುಕತೆ ನಡೆಸಿದ್ದಾರೆ. ಈ ವೇಳೆ, ಸಚಿವರಾದ ಜಮೀರ್ ಅಹಮದ್‌ರನ್ನು ಕೂಡ ನಟ ಭೇಟಿಯಾಗಿದ್ದಾರೆ.

ಅಂದಹಾಗೆ, ಡಿಸಿಎಂ ಆಗಿ ರಾಜಕೀಯ ಬ್ಯುಸಿಯಿರುವ ಪವನ್ ಕಲ್ಯಾಣ್ ಸಿನಿಮಾ ಅಭಿಮಾನಿಗಳು ಎದುರು ನೋಡ್ತಿದ್ದಾರೆ. ಓಜಿ, ಹರಿ ಹರ ವೀರ ಮಲ್ಲು, ಉಸ್ತಾದ್ ಭಗತ್ ಸಿಂಗ್ ಸೇರಿದಂತೆ ಹಲವು ಪ್ರಾಜೆಕ್ಟ್‌ಗಳು ಪವನ್ ಕಲ್ಯಾಣ್ ಕೈಯಲ್ಲಿವೆ. ರಾಜಕೀಯದ ಕೆಲಸದ ನಡುವೆ ಈ ಚಿತ್ರಗಳನ್ನು ಪೂರ್ಣಗೊಳಿಸಬೇಕಿದೆ.

Share This Article