ನಟ ನರೇಶ್ ಅವರಿಂದ ಪವಿತ್ರಾ ಲೋಕೇಶ್ ಕೂಡ ದೂರ ದೂರ

Public TV
4 Min Read

ವಿತ್ರಾ ಲೊಕೇಶ್ ಹಾಗೂ ನರೇಶ್ ಮತ್ತೆ ಸುದ್ದಿಗೆ ಬಂದಿದ್ದಾರೆ. ಹಲವಾರು ತಿಂಗಳಿಂದ ಇವರಿಬ್ಬರ ಕುರಿತು ಅನೇಕ ವಿಷಯ ಕೇಳಿ ಬರುತ್ತಿವೆ. ಅದಕ್ಕೆ ಉತ್ತರವನ್ನು ಇಬ್ಬರೂ ಕೊಡುತ್ತಾ ಬಂದಿದ್ದಾರೆ. ಈಗ ಹೊಸ ವಿವಾದ ಅಖಾಡಕ್ಕೆ ಇಳಿದಿದೆ. ಇಷ್ಟು ದಿನ ಆಪ್ತ ಮಿತ್ರರಾಗಿದ್ದ ನರೇಶ್ ಹಾಗೂ ಪವಿತ್ರ ದೂರವಾಗಿದ್ದಾರಂತೆ. ಅದ್ಯಾವ ಕಾರಣಕ್ಕೆ ಹೀಗಾಯಿತು, ಏಕಾಏಕಿ ಇಬ್ಬರೂ ಮುನಿಸಿಕೊಂಡಿದ್ದು ನಿಜವಾ, ಇದಕ್ಕೆ ಯಾರು ಕಾರಣ, ಏನಿದರ ಹಿಂದಿನ ರಹಸ್ಯ ? ಇದರ ಬಗ್ಗೆ ಪವಿತ್ರಾ ಲೋಕೇಶ್ ಮಾತಾಡಿದರಾ ಅಥವಾ ಇಲ್ಲವಾ ? ಅದರ ಎಕ್ಸ್ಕ್ಲೂಸಿವ್ ಕಥನ  ಇಲ್ಲಿದೆ.

ಹಲವಾರು ತಿಂಗಳಿಂದ ಪವಿತ್ರಾ ಹಾಗೂ ಗೆಳೆಯ ನರೇಶ್ ವಿವಾದದಿಂದಲೇ ಲೈಮ್‌ಲೈಟಿನಲ್ಲಿದ್ದರು. ಇದನ್ನು ಅವರು ಬೇಕಾಗಿ ಮಾಡಿಕೊಂಡಿರಲಿಲ್ಲ. ಆದರೆ ಇಂಥ ವಿಷಯ ಬಂದಾಗ ಸಹಜವಾಗಿ ಎಲ್ಲರೂ ಕೇಳುತ್ತಾರೆ. ಸುಳ್ಳು ಯಾವುದು ನಿಜ ಯಾವುದು ಎಂದು ತಿಳಿಯದೆ ಮಾತಾಡುತ್ತಾರೆ. ಹೀಗಾಗಿಯೇ ನರೇಶ್ ಮತ್ತು ಪವಿತ್ರಾ ನಡುವಿನ ಸಂಬಂಧ ಹೆಚ್ಚೆಚ್ಚು ಚರ್ಚೆಗೆ ಒಳಗಾಗುತ್ತಾ ಬಂದಿತು. ಈ ನಡುವೆ ನರೇಶ್ ಮೂರನೇ ಪತ್ನಿ ರಮ್ಯಾ ರಘುಪತಿ ಕೂಡ ಕೆಲವು ಆಪಾದನೆ ಮಾಡಿದರು. ಅದರಿಂದಲೂ ಪವಿತ್ರಾ ಲೋಕೇಶ್ ಸದ್ದು ಮಾಡಿದರು. ಈಗ ನರೇಶ್ ಹಾಗೂ ಪವಿತ್ರಾ ಮಧ್ಯೆ ಸಂಬಂಧವೇ ಕಡಿದ ಸಮಾಚಾರ ಬಂದಿದೆ.

ಪವಿತ್ರಾ ಲೋಕೇಶ್ (Pavitra Lokesh) ಹಾಗೂ ನರೇಶ್ (Naresh) ಹಲವು ವರ್ಷಗಳಿಂದ ಸ್ನೇಹಿತರು. ಇಬ್ಬರೂ ಅನೇಕ ಸಿನಿಮಾ ಹಾಗೂ ಧಾರಾವಾಹಿಗಳಲ್ಲಿ ನಟಿಸಿದ್ದಾರೆ. ಸೂಪರ್ ಜೋಡಿಯಾಗಿ ಮಿಂಚಿದ್ದಾರೆ. ಟಾಲಿವುಡ್‌ನಲ್ಲಿ ಇಬ್ಬರಿಗೂ ದೊಡ್ಡ ಸ್ಥಾನ ಇದೆ. ಹೀಗಾಗಿಯೇ ಇಬ್ಬರ ಸ್ನೇಹಕ್ಕೆ ಹೆಚ್ಚು ತೂಕ ಬಂತು. ಸ್ನೇಹ ಮತ್ತೊಂದು ಮಗ್ಗುಲಿಗೆ ತಿರುಗಿತು. ಅದನ್ನು ಇಬ್ಬರೂ ಒಪ್ಪಿಕೊಂಡರು. ಇಷ್ಟೆಲ್ಲ ನಡೆಯುತ್ತಿರುವಾಗಲೇ ನರೇಶ್ ಮೂರನೇ ಪತ್ನಿ ರಮ್ಯಾ ಎಂಟ್ರಿಯಾಯಿತು. `ನಾನು ನರೇಶ್‌ಗೆ ಡಿವೋರ್ಸ್ ಕೊಡಲ್ಲ…’ ಎಂದು ಬೀದಿಯಲ್ಲಿ ನಿಂತು ಕೂಗಿದರು. ಪವಿತ್ರಾ ಲೋಕೇಶ್ ಮೇಲೆ ಎಲ್ಲ ಅಪಾದನೆ ಹೊರಿಸಿದರು ರಮ್ಯಾ. ಇದನ್ನೂ ಓದಿ:ದೊಡ್ಮನೆಯಲ್ಲಿ ಮಕ್ಕಳ ದರ್ಬಾರ್: ಮಗುವನ್ನು ತಬ್ಬಿ ಗಳಗಳನೆ ಅತ್ತ ಮಯೂರಿ

ರಮ್ಯಾ ರಘುಪತಿ (Ramya Raghapathi) ಬೆಂಗಳೂರು ಹೆಣ್ಣು ಮಗಳು. ನರೇಶ್ ಅದಾಗಲೇ ಎರಡು ಮದುವೆ ಮಾಡಿಕೊಂಡಿದ್ದರು. ಅವೆಲ್ಲ ಮುರಿದುಬಿದ್ದಿದ್ದವು. ಆಮೇಲೆ ನರೇಶ್ ಹಾಗೂ ರಮ್ಯಾ ಹತ್ತಿರವಾದರು. ಹಿರಿಯರ ಸಮ್ಮುಖದಲ್ಲಿ ದಂಪತಿಗಳಾದರು. ಕೆಲವು ವರ್ಷ ಎಲ್ಲವೂ ಚೆನ್ನಾಗಿತ್ತು. ಅಥವಾ ಲೋಕ ಹಾಗೆ ನಂಬಿತ್ತು. ನೋಡ ನೋಡುತ್ತಿದ್ದಂತೆಯೇ ಇಬ್ಬರ ನಡುವೆ ಕಿತ್ತಾಟ ಆರಂಭವಾಯಿತು. ಇನ್ನು ಸಹಿಸಲು ಸಾಧ್ಯ ಇಲ್ಲ ಎಂದಾಗ ರಮ್ಯಾ ಬೆಂಗಳೂರಿಗೆ ಮರಳಿದರು. ತವರು ಮನೆಯಲ್ಲಿ ನೆಲೆಸಿದರು. ಈ ನಡುವೆ ಪವಿತ್ರಾ ಲೋಕೇಶ್ ಕೂಡ ಪತಿ ಸುಚೇಂದ್ರ ಪ್ರಸಾದ್‌ರನ್ನು ಬಿಟ್ಟು ನರೇಶ್ ಜೊತೆ ಹೆಜ್ಜೆ ಹಾಕಿದರು. ನೆನಪಿಡಿ, ಇಬ್ಬರ ಸಂಬಂಧಕ್ಕೆ ಕಾನೂನಿನ ಅಧಿಕೃತ ಮುದ್ರೆ ಬಿದ್ದಿರಲಿಲ್ಲ.

ಒಂದು ಕಡೆ ರಮ್ಯಾ ಹಾಗೂ ನರೇಶ್ ನಡುವಿನ ಜಗಳ, ಇನ್ನೊಂದು ಕಡೆ ಪವಿತ್ರಾ ಮತ್ತು ಸುಚೇಂದ್ರ ಪ್ರಸಾದ್ ನಡುವಿನ ಹಾಕ್ಯಾಟ. ಅವರು ಇವರ ಮೇಲೆ, ಇವರು ಅವರ ಮೇಲೆ. ಒಬ್ಬರ ಮೇಲೊಬ್ಬರು ಆರೋಪ ಪ್ರತ್ಯಾರೋಪ ಮಾಡಿದರು. ಅಸಲಿಗೆ ತಪ್ಪು ಯಾರದ್ದು ? ಉತ್ತರ ಸಿಗುವುದು ದುಸ್ತರವಾಯಿತು. ಯಾಕೆಂದರೆ ಇಂಥ ಸಂಸಾರದಲ್ಲಿ ಮಂತ್ರಕ್ಕಿಂತ ಉಗುಳೇ ಹೆಚ್ಚಾಗಿರುತ್ತದೆ. ಇನ್ನೆಲ್ಲಿ ಉತ್ತರ ಇನ್ನೆಲ್ಲಿ ಸಮಾಧಾನ ಇನ್ನೆಲ್ಲಿ ತಾರ್ಕಿಕ ಅಂತ್ಯ ? ರಮ್ಯಾ, ನಾನು ನರೇಶ್‌ಗೆ ಡಿವೋರ್ಸ್ ಕೊಡಲ್ಲ ಎನ್ನುವಲ್ಲಿಗೆ ಅಲ್ಪವಿರಾಮ ಬಿತ್ತು.

ಈ ಮಧ್ಯೆ ರಮ್ಯಾ ಮತ್ತೊಂದು ಹೊಗೆ ಎಬ್ಬಿಸಿದರು. ನರೇಶ್ ಮನೆಯಲ್ಲಿ ರಮ್ಯಾ ಮತ್ತೆ ನೆಲೆಸಿದ್ದಾರೆ, ಡಿವೋರ್ಸ್ ಕೊಡಲು ಒಪ್ಪುತ್ತಿಲ್ಲ. ಮಕ್ಕಳಿಗಾಗಿ ನರೇಶ್‌ರನ್ನು ನಾನು ಬಿಡಲ್ಲ. ಇಂಥ ಮಾತು ಕೇಳಿ ಬಂದವು. ಕೊನೆಗೆ ಖುದ್ದು ನರೇಶ್ ಇದಕ್ಕೆ ಸ್ಪಷ್ಠಿಕರಣ ಕೊಟ್ಟರು. `ಈಗಾಗಲೇ ನಾನು ರಮ್ಯಾರಿಂದ ದೂರವಾಗಲು ವಿಚ್ಚೇಧನಕ್ಕೆ ಅರ್ಜಿ ಸಲ್ಲಿಸಿದ್ದೇನೆ. ಹೀಗಿರುವಾಗ ರಮ್ಯಾ ಹೇಗೆ ನಮ್ಮ ಮನೆಯಲ್ಲಿ ಬಂದಿರಲು ಸಾಧ್ಯ ? ಅದೆಲ್ಲವೂ ಸುಳ್ಳೇ ಸುಳ್ಳು…’ ಹೀಗಂತ ಸೋಶಿಯಲ್ ಮೀಡಿಯಾದಲ್ಲಿ ನೋವು ತೋಡಿಕೊಂಡರು.

ಇನ್ನೇನು ಎಲ್ಲವೂ ಮುಗಿದ ಹಾಗಾಯಿತು, ರಮ್ಯಾರಿಂದ ನರೇಶ್ ಡಿವೋರ್ಸ್ ಪಡೆದುಕೊಳ್ಳುವುದೊಂದು ಬಾಕಿ. ಅಲ್ಲಿವರೆಗೆ ನೋ ಡ್ರಾಮಾ…ನೋ ಹಂಗಾಮ. ಹೀಗಂತ ಎಲ್ಲರೂ ತಿಳಿದುಕೊಂಡಿದ್ದರು. ಈಗ ನೋಡಿದರೆ ಮತ್ತೊಂದು ಬಾಂಬು ಸಿಡಿದಿದೆ. ನರೇಶ್ ಹಾಗೂ ಪವಿತ್ರಾ ನಡುವಿನ ಸಂಬಂಧ ಹದಗೆಟ್ಟಿದೆಯಂತೆ, ಯಾವ್ಯಾವುದೋ ಕಾರಣಕ್ಕೆ ಕಿತ್ತಾಟ ಮಾಡಿಕೊಂಡಿದ್ದಾರಂತೆ. ಇಬ್ಬರೂ ಈಗ ಜೊತೆಯಲ್ಲಿ ಇಲ್ಲವಂತೆ ಹೀಗೆ ಅನೇಕ ವಿಷಯಗಳು ಹರಿದಾಡುತ್ತಿವೆ. ಉತ್ತರ ಹೇಳಬೇಕಾದ ನರೇಶ್ ಅಂಡ್ ಪವಿತ್ರಾ ಮಾತ್ರ ಮೌನಕ್ಕೆ ಜಾರಿದ್ದಾರೆ.

ಈ ಇಬ್ಬರ ಸಂಬಂಧ ಹಳಸಿದೆ ಎನ್ನುವ ವಿಷಯ ಈಗಾಗಲೇ ಟಾಲಿವುಡ್‌ನ ಅನೇಕ ಮಾಧ್ಯಮಗಳಲ್ಲಿ ಹರಿದಾಡಿದೆ. ಇಬ್ಬರನ್ನೂ ಸಂಪರ್ಕಿಸಿ ಉತ್ತರ ಪಡೆಯಲು ಪ್ರುಯತ್ನ ಕೂಡ ನಡೆದಿದೆ. ಆದರೆ ಅವರಾರೂ ಉತ್ತರ ನೀಡಿಲ್ಲ. ವಿದೇಶದಲ್ಲಿ ಇದ್ದಾರಾ ಎಂದು ಚೆಕ್ ಮಾಡಿದರೆ. ಅದೂ ಇಲ್ಲ. ಇಬ್ಬರೂ ಇದೇ ನೆಲದಲ್ಲಿದ್ದಾರೆ. ಕೊನೆಗೆ ನಾವು ಕೂಡ ಪವಿತ್ರಾ ಲೋಕೇಶ್‌ರನ್ನು ಸಂಪರ್ಕ ಮಾಡಲು ಯತ್ನಿಸಿದೆವು. ಅವರ ಮೊಬೈಲ್ ಸಂಖ್ಯೆಗೆ ಮೂರು ನಾಲ್ಕು ಬಾರಿ ಫೋನ್ ಮಾಡಿದೆವು. ಉತ್ತರ ಬರಲಿಲ್ಲ. ಕೊನೆಗೆ ಇಂತಿಂಥ ವಿಷಯಕ್ಕೆ ನಿಮ್ಮಿಂದ ಸ್ಪಷ್ಟನೆ ಬೇಕಾಗಿತ್ತು ಎನ್ನುವ ಸಂದೇಶವನ್ನೂ ಮೊಬೈಲ್‌ಗೆ ಕಳಿಸಲಾಯಿತು.

Live Tv
[brid partner=56869869 player=32851 video=960834 autoplay=true]

Share This Article
Leave a Comment

Leave a Reply

Your email address will not be published. Required fields are marked *