ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ (Renukaswamy Murder Case) ಮತ್ತೆ ಜೈಲಿಗೆ ಹೋಗುವ ಟೆನ್ಷನ್ ನಡುವೆಯೂ ಪವಿತ್ರಾ ಗೌಡ (Pavithra Gowda) ಇನ್ಸ್ಟಾಗ್ರಾಂನಲ್ಲಿ (Instagram) ಮತ್ತೊಂದು ಸ್ಟೋರಿ ಹಾಕಿದ್ದಾರೆ.
ದೇವರ ಮೇಲೆ ನಂಬಿಕೆ ಇಡಬೇಕು. ಬಹುಶಃ ಅವರ ಉತ್ತರ ‘ಕಾಯಿರಿ’ ಅನ್ನೋದಾಗಿರಬಹುದು. ಕೆಲವು ವಿಳಂಬಗಳು ದೈವಿಕ ರಕ್ಷಣೆಯಾಗಿರುತ್ತದೆ. ನಾನು ತಾಳ್ಮೆ ಮತ್ತು ನಂಬಿಕೆಯನ್ನು ಆರಿಸಿಕೊಳ್ಳುತ್ತೇನೆ ಎಂದು ಪವಿತ್ರಾ ಗೌಡ ಇನ್ಸ್ಟಾದಲ್ಲಿ ಬರೆದುಕೊಂಡಿದ್ದಾರೆ. ಇದನ್ನೂ ಓದಿ: ರೇಣುಕಾಸ್ವಾಮಿ ಕೊಲೆ ಕೇಸ್‌ನ ಎ1 ಆರೋಪಿ ಪವಿತ್ರಾ ಗೌಡ ಬಂಧನ
ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ದರ್ಶನ್, ಪವಿತ್ರಾ ಗೌಡ ಸೇರಿದಂತೆ 7 ಆರೋಪಿಗಳ ಜಾಮೀನನ್ನು ಸುಪ್ರೀಂ ಕೋರ್ಟ್ (Supreme Court) ರದ್ದುಪಡಿಸಿ ಕೂಡಲೇ ಶರಣಾಗುವಂತೆ ಸೂಚಿಸಿದೆ. ಜಾಮೀನು ಆದೇಶ ಹೊರಬೀಳುವ ಮುನ್ನವೇ ಪವಿತ್ರಾ ಗೌಡ ಪೋಸ್ಟ್‌ವೊಂದನ್ನು ಹಂಚಿಕೊಂಡಿದ್ದರು. ಸತ್ಯವು ಎಲ್ಲಕ್ಕಿಂತ ಹೆಚ್ಚು ಶಕ್ತಿಶಾಲಿ. ಅದು ಯಾವಾಗಲೂ ನ್ಯಾಯವನ್ನು ಕೊಡುತ್ತದೆ. ಈ ಜಗತ್ತಿನಲ್ಲಿರುವ ಎಲ್ಲಕ್ಕಿಂತ ಹೆಚ್ಚಿನ ಶಕ್ತಿಯನ್ನು ಸತ್ಯ ಹೊಂದಿರುತ್ತದೆ. ಎಷ್ಟೇ ಸಮಯ ತೆಗೆದುಕೊಂಡರೂ, ನ್ಯಾಯವು ಯಾವಾಗಲೂ ತನ್ನ ದಾರಿಯನ್ನು ಕಂಡುಕೊಳ್ಳುತ್ತದೆ ಎಂದು ಬರೆದಿದ್ದರು. ಇದನ್ನೂ ಓದಿ: ಜಾಮೀನು ರದ್ದು ಬೆನ್ನಲ್ಲೇ ದರ್ಶನ್ ಆಪ್ತ ಪ್ರದೂಷ್ ಅರೆಸ್ಟ್
ಸುಪ್ರೀಂ ಕೋರ್ಟ್ ತೀರ್ಪು ಹೊರಬರುವ ಮುನ್ನ ಪವಿತ್ರಾ ಗೌಡ ದೇವರ ಮೊರೆ ಹೋಗಿದ್ದರು. ಜೊತೆಗೆ ಮನೆಯಲ್ಲಿ ತುಳಸಿ ಗಿಡಕ್ಕೆ ಪೂಜೆ ಸಲ್ಲಿಸಿದ್ದರು. ತೀರ್ಪು ಹೊರಬರುತ್ತಿದ್ದಂತೆ ಮನೆಯಲ್ಲಿ ಪವಿತ್ರಾ ಗೌಡ, ತಾಯಿ ಎದುರು ಬಿಕ್ಕಳಿಸಿ ಅತ್ತಿದ್ದಾರೆ. ಈ ವೇಳೆ ಮನೆ ಬಳಿ ಪೊಲೀಸರು ಬಂಧನಕ್ಕೆ ಕಾದು ನಿಂತಿದ್ದರು. ಮನೆಯ ಬಾಗಿಲು ತೆರೆದಂತೆ ಆರೋಪಿಯನ್ನು ಅರೆಸ್ಟ್ ಮಾಡಲಾಗಿದೆ. ಇದನ್ನೂ ಓದಿ: ತೀರ್ಪಿಗೂ ಹಿಂದಿನ ದಿನ ಬನ್ನಾರಿಗೆ ದರ್ಶನ್ ಭೇಟಿ