ಡಿ ಬಾಸ್ ಸಫಾರಿಗೆ ಪವಿತ್ರಾ ಗೌಡ ಎಂಟ್ರಿ!

Public TV
2 Min Read

ರೇಣುಕಾಸ್ವಾಮಿ ಕೊಲೆ ಕೇಸ್ (Renukaswamy Murder Case) ಆರೋಪ ಹೊತ್ತ ನಂತರ ನಟ ದರ್ಶನ್ (Darshan) ಮತ್ತು ಪವಿತ್ರಾ ಗೌಡ (Pavithra Gowda) ದೂರವೇ ಉಳಿದಿದ್ದಾರೆ. ಈ ಜೋಡಿಯ ನಡುವೆ ಯಾವುದೇ ಕಾಂಟ್ಯಾಕ್ಟ್ ಇಲ್ಲ ಅಂತ ಅವರ ಆಪ್ತರೇ ಹೇಳಿಕೊಳ್ಳುತ್ತಿದ್ದರು. ಇತ್ತೀಚೆಗಷ್ಟೇ ನ್ಯಾಯಾಲಯದಲ್ಲಿ ನಟ ದರ್ಶನ್ ಮತ್ತು ಪವಿತ್ರಾ ಗೌಡ ಅವರ ಮುಖಾಮುಖಿ ಆಗಿತ್ತು. ಅದನ್ನು ಬಿಟ್ಟರೆ ಪರಸ್ಪರ ಭೇಟಿಗೆ ಸಾಧ್ಯವಿಲ್ಲ ಅನ್ನುವಂಥ ವಾತಾವರಣ ನಿರ್ಮಾಣವಾಗಿದೆ. ಈ ನಡುವೆ ದರ್ಶನ್ ಅವರ ನೆಚ್ಚಿನ ಸ್ಥಳಕ್ಕೆ ಹೋಗಿ ಬಂದಿದ್ದಾರೆ ಪವಿತ್ರಾ ಗೌಡ.

ರೇಣುಕಾಸ್ವಾಮಿ ಕೊಲೆ ಕೇಸ್ ನಲ್ಲಿ ಎ10 ಆರೋಪಿಯಾಗಿರುವ ವಿನಯ್ (Vinay) ಅವರ ಸ್ಟೋನಿ ಬ್ರೋಕ್ ರೆಸ್ಟೋ ಬಾರ್‌ನಲ್ಲಿ ಡಿ ಬಾಸ್ ಸಫಾರಿ (D Boss Safari) ಇದೆ. ಇದು ಕೇವಲ ದರ್ಶನ್ ಮತ್ತು ಅವರನ್ನು ಮೆಚ್ಚುವವರಿಗಾಗಿ ಮಾಡಿರುವಂಥ ಸ್ಥಳ. ಸ್ವತಃ ದರ್ಶನ್ ಅವರ ಕ್ಯಾಮೆರಾದಲ್ಲಿ ಸೆರೆಯಾದ ಪ್ರಾಣಿ ಪಕ್ಷಿಗಳ ಫೋಟೋಗಳು ಡಿ ಬಾಸ್ ಸಫಾರಿ ಗೋಡೆಯ ಮೇಲಿವೆ. ಅಲ್ಲಿ ಅನೇಕ ಪಾರ್ಟಿಗಳು ನಡೆಯುತ್ತವೆ. ರೇಣುಕಾಸ್ವಾಮಿ ಕೊಲೆಯ ದಿನ ದರ್ಶನ್ ಕೂಡ ಅದೇ ಸ್ಥಳದಲ್ಲೇ ಪಾರ್ಟಿ ಮಾಡಿದ್ದರು. ಈಗ ಜಾಗಕ್ಕೆ ಹೋಗಿ ವಿಡಿಯೋ ಮಾಡಿಕೊಂಡಿದ್ದಾರೆ ಪವಿತ್ರಾ ಗೌಡ. ಆ ವಿಡಿಯೋ ವೈರಲ್ ಆಗಿದೆ. ಇದನ್ನೂ ಓದಿ: ಪತಿ ಜೊತೆಗೆ ಬಂಗೀ ಜಂಪ್‌ ಮಾಡಿ ಸಂಭ್ರಮಿಸಿದ ವೈಷ್ಣವಿ ಗೌಡ

ಪವಿತ್ರಾ ಗೌಡ ಅವರ ಆಪ್ತರು ಹೇಳುವಂತೆ ಮೂರು ತಿಂಗಳ ಹಿಂದೆ ಹುಟ್ಟು ಹಬ್ಬದ ಕಾರ್ಯಕ್ರಮದಲ್ಲಿ ಭಾಗಿಯಾಗಲು ಪವಿತ್ರಾ ಗೌಡ ಡಿ ಬಾಸ್ ಸಫಾರಿಗೆ ಹೋಗಿದ್ದರು. ಆ ಸಮಯದಲ್ಲಿ ಪವಿತ್ರಾ ಗೌಡ ಅವರ ಆಪ್ತ ಪ್ರದೀಪ್ ಎನ್ನುವವರು ಆ ವಿಡಿಯೋ ಮಾಡಿಕೊಂಡಿದ್ದಾರೆ. ಅದನ್ನು ಇನ್ಸ್ಟಾದಲ್ಲಿ ಪೋಸ್ಟ್ ಮಾಡಿದ್ದಾರೆ. ಅದನ್ನು ಪವಿತ್ರಾ ಗೌಡ ತಮ್ಮ ಸೋಷಿಯಲ್ ಮೀಡಿಯಾ ಖಾತೆಯ ಸ್ಟೋರಿಯಲ್ಲಿ ರಿಪೋಸ್ಟ್ ಮಾಡಿದ್ದಾರೆ. ಪ್ರದೀಪ್ ಗೆ ಧನ್ಯವಾದಗಳನ್ನು ತಿಳಿಸಿದ್ದಾರೆ. ಇದನ್ನೂ ಓದಿ: ಕೊನೆಗೂ ಪವನ್ ಕಲ್ಯಾಣ್ ಸಿನಿಮಾ ರಿಲೀಸ್ ಡೇಟ್ ಫಿಕ್ಸ್

ಡಿ ಬಾಸ್ ಸಫಾರಿಯಲ್ಲಿ ಆಪ್ತರ ಜೊತೆ ಸಂಭ್ರಮಿಸುತ್ತಿರುವ ಪವಿತ್ರಾ ಅವರ ವಿಡಿಯೋ ಈಗ ವೈರಲ್ ಆಗಿದೆ. ವಿಡಿಯೋ ಹಂಚಿಕೊಂಡಿದ್ದಕ್ಕೆ ಪ್ರದೀಪ್ ಅವರಿಗೆ ಧನ್ಯವಾದಗಳನ್ನು ತಿಳಿಸುತ್ತಾ, ನಿಮ್ಮ ಹೃದಯ ಮತ್ತು ಭಾವನೆಯನ್ನು ನಾನು ಗೌರವಿಸುತ್ತೇನೆ ಎಂದು ಪ್ರದೀಪ್ ಗೆ ಬರೆದಿರುವ ಬರಹ ಕೂಡ ಸಾಕಷ್ಟು ಕಾಮೆಂಟ್ ಗಳಿಗೆ ಕಾರಣವಾಗಿದೆ.

Share This Article