ಪ್ರತಿ ವರ್ಷ ಬಿಗ್ ಬಾಸ್ನಲ್ಲಿ (Bigg Boss Kannada) ಕಾಂಟ್ರವರ್ಸಿ ಆಗ್ತಾನೆ ಇದೆ. ಆದ್ರೆ ನಮ್ಮ ಸೀಸನ್ನಿಂದ ಬಿಗ್ ಬಾಸ್ಗೆ ಕಂಟಕ ಬಂದುಬಿಟ್ಟಿದೆ. ವರ್ತೂರ್ ಸಂತೋಷ್, ರಜತ್, ವಿನಯ್ ಗೌಡ ಅವರ ಕಾಂಟ್ರವರ್ಸಿ ಆಯ್ತು. ಇದೆಲ್ಲಾ ನೋಡಿದಾಗ ಬೇಜಾರ್ ಆಗುತ್ತೆ. ಏಕೆಂದ್ರೆ ನಾವೆಲ್ಲ ಒಂದೇ ಫ್ಯಾಮಿಲಿ ತರ ಇದ್ದವರು ಅಂತ ಮಾಜಿ ಬಿಗ್ಬಾಸ್ ಸ್ಪರ್ಧಿ ಹಾಗೂ ಮಾಡೆಲ್ ಪವಿ ಪೂವಯ್ಯ (Pavi Poovappa) ಹೇಳಿದ್ರು.
ಬಿಗ್ಬಾಸ್ ಶೂಟಿಂಗ್ ನಡೆಯುತ್ತಿರುವ ಜಾಲಿವುಡ್ ಸ್ಟುಡಿಯೋಗೆ (Jollywood Studio) ಬೀಗ ಬಿದ್ದ ವಿಚಾರ ಕುರಿತು ʻಪಬ್ಲಿಕ್ ಟಿವಿʼ ಜೊತೆಗೆ ಅವರು ಮಾತನಾಡಿದರು. ವಿಷಯ ಗೊತ್ತಾಗಿ ನನಗೂ ಬೇಜಾರಾಯ್ತು. ಇದರಲ್ಲಿ ಬಿಗ್ ಬಾಸ್ ಅವರದ್ದು ಏನೂ ತಪ್ಲಿಲ್ಲ. ತಪ್ಪಾಗಿರೋದು ಜಾಲಿಹುಡ್ ಸ್ಟುಡಿಯೋ ಅವರಿಂದ. ಬಿಗ್ ಬಾಸ್ ಅವರು ಕೂಡ ಜಾಲಿವುಡ್ಗೆ ಹೋಗುವ ಮುಂಚೆ ಇದೆಲ್ಲ ಪ್ರೊಸಿಜರ್ ನೋಡ್ಕೋಬೇಕಿತ್ತು. ಬಿಗ್ ಬಾಸ್ಗೆ ಅನುವು ಮಾಡಿಕೊಡುವಂತೆ ಸರ್ಕಾರಕ್ಕೂ ಮನವಿ ಮಾಡ್ತೇವೆ. ಏಕೆಂದರೆ ಅವರಲ್ಲೂ ಬಿಗ್ ಬಾಸ್ ನೋಡುವವರು ಇರ್ತಾರೆ ಎಂದು ತಿಳಿಸಿದ್ರು.
ಪ್ರತಿ ವರ್ಷ ಬಾರಿ ಕಾಂಟ್ರವರ್ಸಿ ಆಗ್ತಾನೆ ಇದೆ. ನಮ್ಮ ಸೀಸನ್ನಿಂದ ಬಿಗ್ಬಾಸ್ಗೆ ಕಂಟಕ ಬಂದುಬಿಟ್ಟಿದೆ. ಕಳೆದ ಬಾರಿ ವರ್ತೂರು ಸಂತೋಷ್, ವಿನಯ್, ರಜತ್ ಅವರ ವಿಚಾರ ಕಾಂಟ್ರಾವರ್ಸಿ ಆಯ್ತು. ಬಿಗ್ ಬಾಸ್ಗೆ ಈ ರೀತಿ ಆಗುತ್ತಲ್ಲ ಅಂತಾ ಅನ್ಸಿಸುತ್ತೆ. ಈ ಥರ ಆದಾಗ ಸ್ಪರ್ಧಿಗಳನ್ನ ಶಿಫ್ಟ್ ಮಾಡುವ ವೇಳೆ ನಿಯಮ ಉಲ್ಲಂಘನೆ ಆಗಬಹುದು. ಸ್ಫರ್ಧಿಗಳು ಡೈವರ್ಷನ್ ಕೂಡ ಆಗಬಹುದು. ನಮ್ಮ ಸೀಸನ್ ನಡೆಯುವಾಗ ಪರಿಸರ ನಿಯಮ ಉಲ್ಲಂಘನೆ ಆಗಿರಲಿಲ್ಲ. ಬಿಗ್ ಬಾಸ್ ಮನೆ ಒಳಗಡೆ ಕಸ, ನೀರು ಎಲ್ಲಾ ಕ್ಲಿಯರ್ ಆಗುತ್ತಾ ಇತ್ತು ಎಂದು ಹೇಳಿದ್ರು.
‘ಬಿಗ್ ಬಾಸ್’ ಕನ್ನಡ 10ರಲ್ಲಿ ಪವಿ ಪೂವಪ್ಪ ಅವರು ವೈಲ್ಡ್ ಕಾರ್ಡ್ ಸ್ಪರ್ಧಿಯಾಗಿ ಎಂಟ್ರಿ ಕೊಟ್ಟಿದ್ದರು. ಕೆಲವೇ ದಿನ ಇದ್ದರೂ ಜನರ ಮನಗೆದ್ದಿದ್ದರು.