ಮಗಳಿಗಾಗಿ 200 ಕೋಟಿ ಬಜೆಟ್‌ನಲ್ಲಿ ಸಿನಿಮಾ ಮಾಡಲು ಮುಂದಾದ ಶಾರುಖ್ ಖಾನ್

Public TV
1 Min Read

ಬಾಲಿವುಡ್ ನಟ ಶಾರುಖ್ ಖಾನ್ (Sharukh Khan) ‘ಪಠಾಣ್’ (Pathaan Film) ಸಿನಿಮಾದಿಂದ ಸೂಪರ್ ಡೂಪರ್ ಸಕ್ಸಸ್ ಕಂಡಿದ್ದಾರೆ. ಶಾರುಖ್ ನಟನೆಯ ‘ಕಿಂಗ್’ (King Film) ಚಿತ್ರದ ಮೂಲಕ ಮಗಳು ಸುಹಾನಾ ಖಾನ್ ಬಾಲಿವುಡ್‌ಗೆ ಪಾದಾರ್ಪಣೆ ಮಾಡುತ್ತಿದ್ದಾರೆ. ಮಗಳ ಚೊಚ್ಚಲ ಚಿತ್ರಕ್ಕೆ 200 ಕೋಟಿ ರೂ. ಸುರಿಯಲು ಕಿಂಗ್ ಖಾನ್ ಮುಂದಾಗಿದ್ದಾರೆ.

ಈ ಹಿಂದೆ ‘ದಿ ಆರ್ಚೀಸ್’ ಸಿನಿಮಾದಲ್ಲಿ ಸುಹಾನಾ ಖಾನ್ (Suhana Khan) ನಟಿಸಿದ್ದರು. ಅದು ಒಟಿಟಿಯಲ್ಲಿ ರಿಲೀಸ್ ಆಗಿತ್ತು. ಈಗ ‘ಕಿಂಗ್’ ಚಿತ್ರದಲ್ಲಿ ಶಾರುಖ್ ಜೊತೆ ನಟಿಸುವ ಮೂಲಕ ಸುಹಾನಾ ಬೆಳ್ಳಿಪರದೆಗೆ ಎಂಟ್ರಿ ಕೊಡುತ್ತಿದ್ದಾರೆ. ಮಗಳ ಮೊದಲ ಚಿತ್ರ ಅದ್ಧೂರಿಯಾಗಿರಬೇಕು ಎಂಬ ಕಾರಣಕ್ಕೆ 200 ಕೋಟಿ ರೂ. ಬಜೆಟ್‌ನಲ್ಲಿ ಹಣ ಸುರಿಯಲು ಶಾರುಖ್ ಖಾನ್ ಮುಂದಾಗಿದ್ದಾರೆ.

ಈ ಸಿನಿಮಾಗೆ ಸುಜಯ್ ಘೋಶ್ ನಿರ್ದೇಶನ ಮಾಡುತ್ತಿದ್ದಾರೆ. ಚಿತ್ರದ ಪ್ರೀ-ಪ್ರೊಡಕ್ಷನ್ ಕೆಲಸಗಳು ಕೂಡ ಭರದಿಂದ ಸಾಗುತ್ತಿದೆ. ಕಲಾವಿದರ ಆಯ್ಕೆ ಕೂಡ ತೆರೆಮರೆಯಲ್ಲಿ ನಡೆಯುತ್ತಿದೆ. ಇದನ್ನೂ ಓದಿ:‘ಕಂಗುವ’ ಸಿನಿಮಾದಲ್ಲಿ ಸೂರ್ಯ ಡಬಲ್ ರೋಲ್

‘ಪಠಾಣ್’ ಸಿನಿಮಾದಂತೆ ‘ಕಿಂಗ್’ ಸಿನಿಮಾ ಕೂಡ ಸಕ್ಸಸ್ ಕಾಣಲೇಬೇಕು ಅಂತ ಶಾರುಖ್ ಖಾನ್ ಪಣ ತೊಟ್ಟಿದ್ದಾರೆ. ಮೊದಲ ಸಿನಿಮಾದಲ್ಲೇ ಮಗಳು ಸುಹಾನಾ ಗೆದ್ದು ಬೀಗಬೇಕು ಎಂದು ಶಾರುಖ್ ದಿಟ್ಟ ಹೆಜ್ಜೆ ಇಟ್ಟಿದ್ದಾರೆ. ಅದಕ್ಕಾಗಿ ತಮ್ಮ ಒಡೆತನದ ನಿರ್ಮಾಣ ಸಂಸ್ಥೆಯಿಂದ ಬಿಗ್‌ ಬಜೆಟ್‌ನಲ್ಲಿ ಸಿನಿಮಾ ಮಾಡಲು ಮುಂದಾಗಿದ್ದಾರೆ.

Share This Article