‘ಪಠಾಣ್ 2’ಗೆ ಸಿದ್ಧತೆ- ಹೊಸ ನಿರ್ದೇಶಕನ ಹುಡುಕಾಟದಲ್ಲಿ ಚಿತ್ರತಂಡ

Public TV
1 Min Read

ಬಾಲಿವುಡ್ ನಟ ಶಾರುಖ್ ಖಾನ್ (Sharukh Khan) ಕೆರಿಯರ್‌ಗೆ ಮರುಜೀವ ಕೊಟ್ಟ ಸಿನಿಮಾ ಪಠಾಣ್. ಗಲ್ಲಾಪೆಟ್ಟಿಗೆ 1000 ಕೋಟಿ ರೂ.ಗೂ ಅಧಿಕ ಕಲೆಕ್ಷನ್ ಮಾಡುವ ಮೂಲಕ ಹಿಸ್ಟರಿ ಕ್ರಿಯೇಟ್ ಮಾಡಿತ್ತು. ಇದೀಗ ಇದರ ಸೀಕ್ವೆಲ್‌ಗಾಗಿ ಸಿದ್ಧತೆ ನಡೆಯುತ್ತಿದೆ. ಈ ಚಿತ್ರಕ್ಕೆ ಸಕ್ಸಸ್ ತಂದು ಕೊಟ್ಟ ಡೈರೆಕ್ಟರ್‌ ಸಿದ್ಧಾರ್ಥ್‌ ಆನಂದ್‌ಗೆ ನಿರ್ಮಾಪಕ ಗೇಟ್ ಪಾಸ್ ನೀಡಿದ್ದಾರೆ.

ಸಿದ್ಧಾರ್ಥ್ ಆನಂದ್ ನಿರ್ದೇಶನದ ‘ಪಠಾಣ್’ (Pathaan) ಸಿನಿಮಾವನ್ನು ಆದಿತ್ಯಾ ಚೋಪ್ರಾ ನಿರ್ಮಾಣ ಮಾಡಿದ್ದರು. ಶಾರುಖ್ ಖಾನ್- ದೀಪಿಕಾ ಪಡುಕೋಣೆ (Deepika Padukone) ಮುಖ್ಯಭೂಮಿಕೆಯಲ್ಲಿ ನಟಿಸಿದ್ದರು. ಇದೀಗ ಪಠಾಣ್ ಪಾರ್ಟ್ 2ಗೆ ಸಿದ್ಧತೆ ಮಾಡಲಾಗುತ್ತಿದೆ. ಈ ವರ್ಷದ ಅಂತ್ಯದಲ್ಲಿ ಶೂಟಿಂಗ್ ಶುರುವಾಗಲಿದ್ದು, ಶಾರುಖ್ ಭಾಗಿಯಾಗಲಿದ್ದಾರೆ.

ಆದರೆ ಈಗ ‘ಪಠಾಣ್’ ತಂಡ ಸಿನಿಮಾ ಬಗ್ಗೆ ಸುದ್ದಿಯಾಗುವ ಬದಲು ಡೈರೆಕ್ಟರ್ ವಿಚಾರವಾಗಿ ಹೈಲೈಟ್‌ ಆಗುತ್ತಿದೆ. ಸಿದ್ಧಾರ್ಥ್ ಆನಂದ್ ಬದಲು ಬೇರೆ ನಿರ್ದೇಶಕನಿಗೆ ಮಣೆ ಹಾಕಲು ನಿರ್ಮಾಪಕ ಆದಿತ್ಯಾ ಚೋಪ್ರಾ ಯೋಚಿಸಿದ್ದಾರೆ. ಈ ಹಿಂದೆ ತಮ್ಮ ನಿರ್ಮಾಣದ ‘ಟೈಗರ್’ ಮತ್ತು ‘ವಾರ್’ ಸಿನಿಮಾದ ಸೀಕ್ವೆಲ್‌ನಲ್ಲೂ ನಿರ್ದೇಶಕರನ್ನು ಆದಿತ್ಯಾ ಬದಲಿಸಿದ್ದರು. ಅದೇ ಫಾರ್ಮುಲಾ ಇಲ್ಲಿಯೂ ಬಳಸಲು ಮುಂದಾಗಿದ್ದಾರೆ.

ಇತ್ತ ಪಠಾಣ್ ಸಕ್ಸಸ್ ನಂತರ ‘ಫೈಟರ್’ ಸಿನಿಮಾಗೆ ಸಿದ್ಧಾರ್ಥ್ ಆನಂದ್ ನಿರ್ದೇಶನ ಮಾಡಿದ್ದರು. ಆದರೆ ಆ ಚಿತ್ರ ಗಲ್ಲಾಪೆಟ್ಟಿಗೆಯಲ್ಲಿ ಮಕಾಡೆ ಮಲಗಿತ್ತು. ಹಾಗಾಗಿ ನಿರ್ಮಾಪಕ ಆದಿತ್ಯಾ ನಿರ್ದೇಶಕರನ್ನು ಬದಲಿಸೋದೇ ಸೂಕ್ತ ಎಂದು ನಿರ್ಧರಿಸಿದ್ದಾರೆ. ಬೇರೇ ನಿರ್ದೇಶಕನ ಕಲ್ಪನೆಯಲ್ಲಿ ‘ಪಠಾಣ್ 2’ ಮೂಡಿ ಬಂದರೆ ಉತ್ತಮ ಎಂಬ ಲೆಕ್ಕಾಚಾರದಲ್ಲಿದ್ದಾರೆ. ಅದಕ್ಕಾಗಿ ಆದಿತ್ಯಾ ಹೊಸ ನಿರ್ದೇಶಕನ ಹುಡುಕಾಟಕ್ಕೆ ಇಳಿದಿದ್ದಾರೆ.

Share This Article