ಐಪಿಎಲ್‍ನಲ್ಲಿ ವೇಗದ ಅರ್ಧಶತಕ ಸಿಡಿಸಿ ಕನ್ನಡಿಗನೊಂದಿಗೆ ದಾಖಲೆ ಪಟ್ಟಿ ಸೇರಿಕೊಂಡ ಪ್ಯಾಟ್ ಕಮ್ಮಿನ್ಸ್

Public TV
1 Min Read

ಪುಣೆ: 15ನೇ ಆವೃತ್ತಿ ಐಪಿಎಲ್‍ನಲ್ಲಿ ಪ್ಯಾಟ್ ಕಮ್ಮಿನ್ಸ್ ವೇಗದ ಅರ್ಧಶತಕ ಸಿಡಿಸಿ ಕನ್ನಡಿಗ ಕೆ.ಎಲ್ ರಾಹುಲ್ ದಾಖಲೆಯನ್ನು ಸರಿದೂಗಿಸಿದ್ದಾರೆ.

ಮುಂಬೈ ವಿರುದ್ಧದ ಪಂದ್ಯದಲ್ಲಿ ಕೆಕೆಆರ್ ಪರ ಭರ್ಜರಿ ಬ್ಯಾಟ್‍ಬೀಸಿದ ಪ್ಯಾಟ್ ಕಮ್ಮಿನ್ಸ್ ಕೇವಲ 14 ಎಸೆತಗಳಲ್ಲಿ ಅರ್ಧಶತಕ ಪೂರೈಸಿದರು. ಈ ಮೂಲಕ ಕೆ.ಎಲ್ ರಾಹುಲ್ ದಾಖಲೆಯನ್ನು ಸರಿದೂಗಿಸಿದರು. ರಾಹುಲ್ 2018ರಲ್ಲಿ ಡೆಲ್ಲಿ ವಿರುದ್ಧದ ಪಂದ್ಯದಲ್ಲಿ 14 ಎಸೆತಗಳಲ್ಲಿ ಅರ್ಧಶತಕ ಸಿಡಿಸಿ ದಾಖಲೆ ಬರೆದಿದ್ದರು. ಇದನ್ನೂ ಓದಿ: ಪ್ಯಾಟ್ ಕಮ್ಮಿನ್ಸ್ 6 ಸಿಕ್ಸ್, 4 ಫೋರ್ ಸಿಡಿಸಿ ಮಿಂಚಿನ ಅರ್ಧಶತಕ – ಕೆಕೆಆರ್‌ಗೆ 5 ವಿಕೆಟ್‌ಗಳ ಜಯ

ಇವರಿಬ್ಬರ ಬಳಿಕ ಐಪಿಎಲ್ ಇತಿಹಾಸದಲ್ಲಿ ಸುನೀಲ್ ನರೇನ್ ಬೆಂಗಳೂರು ವಿರುದ್ಧದ ಪಂದ್ಯದಲ್ಲಿ ಅರ್ಧಶತಕ ಸಿಡಿಸಿ ಮಿಂಚಿದ್ದಾರೆ. 2014ರಲ್ಲಿ ಯೂಸುಫ್ ಪಠಾಣ್ ಸನ್‍ರೈಸರ್ಸ್ ಹೈದರಾಬಾದ್ ವಿರುದ್ಧದ ಪಂದ್ಯದಲ್ಲಿ 15 ಎಸೆತಗಳಲ್ಲಿ ಅರ್ಧಶತಕ ಸಿಡಿಸಿ ಅಬ್ಬರಿಸಿದ್ದರು. ಇದನ್ನೂ ಓದಿ: ಆರ್‌ಸಿಬಿ ತಂಡದಿಂದ ಹೊರ ನಡೆದ ಕನ್ನಡಿಗ ಲುವ್ನಿತ್ ಸಿಸೋಡಿಯಾ

ಕೋಲ್ಕತ್ತಾ ಮತ್ತು ಮುಂಬೈ ನಡುವಿನ ನಿನ್ನೆಯ ಪಂದ್ಯದಲ್ಲಿ ಮುಂಬೈ ನೀಡಿದ 162 ರನ್‍ಗಳ ಸಾಧಾರಣ ಮೊತ್ತ ಬೆನ್ನಟ್ಟಿದ ಕೋಲ್ಕತ್ತಾ ಆರಂಭಿಕ ಆಘಾತ ಅನುಭವಿಸಿತು. ರಹಾನೆ 7 ರನ್ ಮತ್ತು ಶ್ರೇಯಸ್ ಅಯ್ಯರ್ 10 ರನ್ ಸಿಡಿಸಿ ವಿಕೆಟ್ ಒಪ್ಪಿಸಿದರು. ಬಳಿಕ ವೆಂಕಟೇಶ್ ಅಯ್ಯರ್ ತಂಡಕ್ಕೆ ಆಧಾರವಾದರು. ಆರಂಭದಿಂದ ಕೊನೆಯ ವರೆಗೆ ತಂಡಕ್ಕಾಗಿ ಹೋರಾಡಿದ ಅಯ್ಯರ್ ಅಜೇಯ 50 ರನ್ (41 ಎಸೆತ, 6 ಬೌಂಡರಿ, 1 ಸಿಕ್ಸ್) ಮತ್ತು ಬಿರುಸಿನ ಬ್ಯಾಟಿಂಗ್ ಮೂಲಕ ಮುಂಬೈಗೆ ನಡುಕ ಹುಟ್ಟಿಸಿದ ಪ್ಯಾಟ್ ಕಮ್ಮಿನ್ಸ್ 56 ರನ್ ಕೇವಲ 15 ಎಸೆತಗಳಲ್ಲಿ (4 ಬೌಂಡರಿ, 6 ಸಿಕ್ಸ್) ಚಚ್ಚಿ ಇನ್ನೂ 24 ಎಸೆತ ಬಾಕಿ ಇರುವಂತೆ ಕೋಲ್ಕತ್ತಾ ತಂಡಕ್ಕೆ 5 ವಿಕೆಟ್‍ಗಳ ಗೆಲುವು ತಂದುಕೊಟ್ಟರು.

Share This Article
Leave a Comment

Leave a Reply

Your email address will not be published. Required fields are marked *