ಕಾಲ್ಕೆರೆಯುತ್ತಾ ಜಗಳಕ್ಕೆ ಬಂದವನನ್ನು ಚಲಿಸುತ್ತಿದ್ದ ರೈಲಿನಿಂದ ಹೊರ ತಳ್ಳಿದ ಸಹ ಪ್ರಯಾಣಿಕ

Public TV
2 Min Read

ಕೋಲ್ಕತ್ತಾ: ರೈಲಿನೊಳಗೆ ಜಗಳವಾಡುತ್ತಾ ವ್ಯಕ್ತಿಯೋರ್ವ ತನ್ನ ಸಹ ಪ್ರಯಾಣಿಕನನ್ನು ಚಲಿಸುತ್ತಿದ್ದ ರೈಲಿನಿಂದ ಹೊರ ತಳ್ಳಿರುವ ವೀಡಿಯೋವೊಂದು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ.

ಶನಿವಾರ ರಾತ್ರಿ ಹೌರಾ-ಮಾಲ್ಡಾ ಟೌನ್ ಇಂಟರ್‌ಸಿಟಿ ಎಕ್ಸ್‌ಪ್ರೆಸ್‍ನಲ್ಲಿ (Howrah-Malda Town Intercity Express) ಬಿರ್ಭೂಮ್ (Birbhum) ಜಿಲ್ಲೆಯ ತಾರಾಪಿತ್ ರಸ್ತೆ (Tarapith Road) ಮತ್ತು ರಾಮ್‍ಪುರಹತ್ ನಿಲ್ದಾಣಗಳ (Rampurhat stations) ನಡುವೆ ಈ ಘಟನೆ ನಡೆದಿದೆ. ಇದೀಗ ಆರೋಪಿಯನ್ನು ಸರ್ಕಾರಿ ರೈಲ್ವೆ ಪೊಲೀಸರು (ಜಿಆರ್‌ಪಿ) ಬಂಧಿಸಿದ್ದಾರೆ. ಅಲ್ಲದೇ ಈ ಕೃತ್ಯದಲ್ಲಿ ಇತರರು ಕೂಡ ಭಾಗಿಯಾಗಿದ್ದಾರೆ ಎಂದು ಹೇಳಲಾಗುತ್ತಿದೆ.

ರೈಲಿನಿಂದ ಹೊರಗೆ ಬಿದ್ದ ಯುವಕನನ್ನು ಸಜಲ್ ಶೇಖ್ ಎಂದು ಗುರುತಿಸಲಾಗಿದ್ದು, ಸಹ ಪ್ರಯಾಣಿಕರ ಸೀಟ್ ಮೇಲೆ ತನ್ನ ಪಾದಗಳನ್ನು ಇಟ್ಟುಕೊಂಡು ಫೋನ್‍ನಲ್ಲಿ ಮಾತನಾಡುತ್ತಾ ನಿಂದಿಸುತ್ತಿದ್ದನು. ಅಲ್ಲದೇ ಈತ ಮಹಿಳೆಯರಿಗೆ ಹಾಗೂ ಇತರ ಪ್ರಯಾಣಿಕರಿಗೆ ನಿಂದಿಸಿದ್ದಾನೆ ಎಂದು ಆರೋಪಿಸಲಾಗಿದೆ. ಇದನ್ನೂ ಓದಿ: ಅ.21ರಂದು ಹುಕ್ಕೇರಿಯಲ್ಲಿ ಲಿಂಗಾಯತ ಪಂಚಮಸಾಲಿ ಬೃಹತ್ ಸಮಾವೇಶ

ಸದ್ಯ ವೈರಲ್ ಆಗುತ್ತಿರುವ ವೀಡಿಯೋದಲ್ಲಿ ಚೆಕ್ಡ್ ಶರ್ಟ್ ಧರಿಸಿದ್ದ ವ್ಯಕ್ತಿಯೋರ್ವ ಸಜಲ್ ಶೇಖ್ ಜೊತೆ ಜಗಳವಾಡಿದ್ದು, ಕೆಲವು ಸೆಕೆಂಡುಗಳ ನಂತರ ಸಮಾಧಾನವಾಗಿ ಇಬ್ಬರು ದೂರ ಸರಿಯುತ್ತಾರೆ. ಆದರೆ ನಂತರ ಕೂಡ ಸಜಲ್ ಶೇಖ್ ನಿಂದಿಸುತ್ತಲೇ ಇದ್ದಿದ್ದರಿಂದ ಕೋಪಗೊಂಡ ವ್ಯಕ್ತಿ ಮತ್ತೊಮ್ಮೆ ಆತನೊಂದಿಗೆ ವಾಗ್ವಾದಕ್ಕಿಳಿದು, ಕೊನೆಗೆ ರೊಚ್ಚಿಗೆದ್ದು, ರೈಲಿನಿಂದ ಸಜಲ್ ಶೇಖ್ ಅನ್ನು ಹೊರ ತಳ್ಳಿದ್ದಾನೆ. ಬಳಿಕ ತನ್ನ ಸೀಟಿಗೆ ಹೋಗಿ ಕುಳಿತುಕೊಳ್ಳುವುದನ್ನು ಕಾಣಬಹುದಾಗಿದೆ.

ಘಟನೆಯಲ್ಲಿ ಗಾಯಗೊಂಡ ಸಜಲ್ ಶೇಖ್ ಅನ್ನು ರಕ್ಷಿಸಿ, ಇದೀಗ ರಾಮಪುರಹತ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗಿದ್ದು, ಆತನ ಸ್ಥಿತಿ ಸ್ಥಿರವಾಗಿದೆ ಎನ್ನಲಾಗುತ್ತಿದೆ. ಇದನ್ನೂ ಓದಿ : ಅಮ್ಮ ನನ್ನ ಚಾಕ್ಲೇಟ್ ಕದ್ದಿದ್ದು, ಅವಳನ್ನು ಜೈಲಿಗೆ ಹಾಕಿ- ಪೊಲೀಸರಿಗೆ ದೂರು ನೀಡಿದ ಪುಟಾಣಿ

ಈ ಕುರಿತಂತೆ ಪೊಲೀಸರಿಗೆ ಪ್ರತಿಕ್ರಿಯೆ ನೀಡಿದ ಸಜಲ್ ಸೇಖ್, ಸೈಂಥಿಯಾದಲ್ಲಿ ರೈಲು ಹತ್ತಿ ನಾನು ಮನೆಗೆ ಹೋಗುತ್ತಿದ್ದೆ. ಈ ವೇಳೆ ಮೂರ್ನಾಲ್ಕು ಮಂದಿ ರೈಲಿನ ಕಂಪಾರ್ಟ್‍ಮೆಂಟ್‍ನಲ್ಲಿ ಕುಳಿತು ತಮ್ಮತಮ್ಮಲ್ಲೇ ಹರಟೆ ಹೊಡೆಯುತ್ತಿದ್ದರು ಮತ್ತು ಅಸಭ್ಯವಾಗಿ ಮಾತನಾಡುತ್ತಿದ್ದರು. ಅವರ ಪಕ್ಕದಲ್ಲಿಯೇ ಒಂದು ಕುಟುಂಬ ಕೂಡ ಕುಳಿತಿತ್ತು. ಹಾಗಾಗಿ ಈ ರೀತಿ ವರ್ತಿಸಬೇಡಿ ಎಂದು ಹೇಳಲು ಹೋದೆ. ಅದೇ ನನ್ನ ತಪ್ಪು. ಇದೇ ವೇಳೆ ಆ ಗ್ಯಾಂಗ್‍ನಲ್ಲಿದ್ದ ಓರ್ವ ವ್ಯಕ್ತಿ ಎದ್ದು ಬಂದು ನನ್ನ ಕಾಲರ್ ಹಿಡಿದುಕೊಂಡು ಬೆದರಿಕೆ ಹಾಕಿದ. ಅವನನ್ನು ಹೆದರಿಸಲು ನನ್ನ ಜೇಬಿನಿಂದ ಬ್ಲೇಡ್ ತೆಗೆದುಕೊಂಡೆ. ಅದಾದ ಬಳಿಕ ನಾನು ರೈಲ್ವೆ ಹಳಿಯ ಮೇಲೆ ನಾನು ಬಿದ್ದಿದ್ದೆ. ಅದು ಹೇಗೆ ಸಂಭವಿಸಿತು ಎಂದು ನನಗೆ ಗೊತ್ತಿಲ್ಲ. ಆದರೆ ಸ್ವಲ್ಪ ಸಮಯದ ಬಳಿಕ ಪ್ರಜ್ಞೆ ಬಂದಾಗ ನಾನು ರೈಲು ಹಳಿಯ ಮೇಲೆ ಬಿದ್ದಿದ್ದೆ. ನನ್ನ ಕೈಗಳು, ಕಾಲುಗಳು, ತಲೆ ಎಲ್ಲವೂ ಮರಗಟ್ಟಿದ್ದವು ಎಂದು ತಿಳಿಸಿದ್ದಾರೆ.

Live Tv
[brid partner=56869869 player=32851 video=960834 autoplay=true]

Share This Article
Leave a Comment

Leave a Reply

Your email address will not be published. Required fields are marked *