ಟೆಹ್ರಾನ್: ಅಮೆರಿಕ (USA) ಮತ್ತು ಇಸ್ರೇಲಿ (Isreal) ಪಡೆಗಳ ಜಂಟಿ ವಾಯುದಾಳಿಯಲ್ಲಿ (Air Strike) ಬುಶೆಹರ್ ವಿಮಾನ ನಿಲ್ದಾಣದಲ್ಲಿ ನಿಲ್ಲಿಸಲಾಗಿದ್ದ ಪ್ರಯಾಣಿಕ ವಿಮಾನ ನಾಶವಾಗಿದೆ.
ಏರ್‌ಸ್ಟ್ರೈಕ್‌ಗೆ ಇರಾನ್ ಏರ್ ವಿಮಾನ ತುಂಡಾಗಿದೆ. ವಿಮಾನಿಂದ ಹೊಗೆ ಮೇಲಕ್ಕೆ ಹೋಗುತ್ತಿರುವ ದೃಶ್ಯವನ್ನು ಇರಾನಿನ ಸರ್ಕಾರಿ ಮಾಧ್ಯಮ ಪ್ರೆಸ್ ಟಿವಿ ಹಂಚಿಕೊಂಡಿದೆ.
ವಿಮಾನ ನಿಲ್ದಾಣದ (Bushehr Airport) ಮೇಲೆ ನಡೆಸಲಾದ ಏರ್‌ಸ್ಟ್ರೈಕ್‌ನಿಂದ ಆಗಿರಬಹುದಾದ ಸಾವುನೋವುಗಳ ಬಗ್ಗೆ ಯಾವುದೇ ಮಾಹಿತಿ ಲಭ್ಯವಿಲ್ಲ. ಇದನ್ನೂ ಓದಿ: ಇರಾನ್ ಅಧ್ಯಕ್ಷರ ಕಚೇರಿ ಮೇಲೆ ದಾಳಿ – ಐಆರ್‌ಜಿಸಿ, ಹೆಜ್ಬುಲ್ಲಾ ಕಮಾಂಡರ್‌ಗಳು ಫಿನಿಶ್
A passenger plane was destroyed following the US-Israeli attack on Bushehr airport.
Follow: https://t.co/mLGcUTS2ei pic.twitter.com/uoA2svZCl7
— Press TV 🔻 (@PressTV) March 3, 2026
ಬುಶೆಹರ್ ಯಾಕೆ ಮುಖ್ಯ?
ಇರಾನಿನಲ್ಲಿ ಕಾರ್ಯಾಚರಣೆ ನಡೆಸುತ್ತಿರುವ ಏಕೈಕ ಪರಮಾಣು ವಿದ್ಯುತ್ ಸ್ಥಾವರ ಬುಶೆಹರ್‌ನಲ್ಲಿದೆ. ಪರ್ಷಿಯನ್ ಕೊಲ್ಲಿಯ ಉದ್ದಕ್ಕೂ ದಕ್ಷಿಣ ಬಂದರು ನಗರದಲ್ಲಿ ನೆಲೆಗೊಂಡಿರುವ ಈ ಸೌಲಭ್ಯವನ್ನು ರಷ್ಯಾದ ನೆರವಿನೊಂದಿಗೆ ನಿರ್ಮಿಸಲಾಗಿದ್ದು ಈಗ ಹೆಚ್ಚುವರಿ ರಿಯಾಕ್ಟರ್ ಘಟಕಗಳೊಂದಿಗೆ ವಿಸ್ತರಿಸುವ ಕೆಲಸ ನಡೆಯುತ್ತಿತ್ತು.
ಇರಾನ್ ಮೇಲೆ ಅಮೆರಿಕ-ಇಸ್ರೇಲಿ ವಾಯುದಾಳಿ ನಡೆಯುತ್ತಿರುವುದರಿಂದ ಸ್ಥಾವರದ ಎರಡನೇ ಮತ್ತು ಮೂರನೇ ಘಟಕಗಳ ನಿರ್ಮಾಣ ಕಾರ್ಯವನ್ನು ಸ್ಥಗಿತಗೊಳಿಸಿರುವುದಾಗಿ ರಷ್ಯಾದ ರಾಜ್ಯ ಪರಮಾಣು ನಿಗಮ ರೋಸಾಟಮ್ ಮಂಗಳವಾರ ತಿಳಿಸಿದೆ.
ಸ್ಥಾವರವನ್ನು ನೇರವಾಗಿ ಗುರಿಯಾಗಿ ದಾಳಿ ನಡೆಯದೇ ಇದ್ದರೂ ಈ ಸೌಲಭ್ಯದ ಕೆಲ ಕಿಲೋಮೀಟರ್ ದೂರದಲ್ಲಿ ಸ್ಫೋಟಗಳ ಶಬ್ದ ಕೇಳಿಬರುತ್ತಿದೆ ಎಂದು ರೋಸಾಟಮ್ ಮುಖ್ಯಸ್ಥ ಅಲೆಕ್ಸಿ ಲಿಖಾಚೆವ್ ಹೇಳಿದ್ದಾರೆ.
ಸುಮಾರು 639 ರಷ್ಯಾದ ಸಿಬ್ಬಂದಿ ಇರಾನ್‌ನಲ್ಲಿದ್ದು ಸ್ಥಳಾಂತರ ಮಾಡುವ ಕೆಲಸ ನಡೆಯುತ್ತಿದೆ. ದಾಳಿಗಳು ನಡೆದ ಬಳಿಕ ಸುಮಾರು 100 ಕಾರ್ಮಿಕರು ಮತ್ತು ಅವರ ಕುಟುಂಬಗಳನ್ನು ಸ್ಥಳಾಂತರಿಸಲಾಗಿತ್ತು. ಏರ್ ಸ್ಟ್ರೈಕ್ ವಿರಾಮದ ಸಮಯದಲ್ಲಿ ಮತ್ತಷ್ಟು ಸ್ಥಳಾಂತರಿಸುವ ಕೆಲಸ ನಡೆಯುತ್ತಿದೆ. ಇದನ್ನೂ ಓದಿ: Iran War| ಭಾರತಕ್ಕೆ ಕಚ್ಚಾ ತೈಲ ಪೂರೈಸಲು ನಾವು ಸಿದ್ಧ: ರಷ್ಯಾ

