ಬೆಂಗಳೂರು: ಬಿಎಂಟಿಸಿ ಬಸ್ಸಿನ (BMTCC Bus) ಚಕ್ರಕ್ಕೆ ಸಿಲುಕಿ ಪ್ರಯಾಣಿಕ ಸಾವನ್ನಪ್ಪಿದ ಘಟನೆ ಜಯನಗರದ 4ನೇ ಬ್ಲಾಕ್‌ನಲ್ಲಿ (Jayanagar 4th block) ನಡೆದಿದೆ.
ಸಂಪಂಗಿ(64) ಮೃತಪಟಟ್ಟ ವ್ಯಕ್ತಿ. ಸಂಪಂಗಿ ಹತ್ತುವ ಸಮಯಲ್ಲಿ ಚಾಲಕ ಬಾಗಿಲು ಬಂದ್ ಮಾಡಿದ್ದಾನೆ. ಬಂದ್ ಮಾಡಿದ್ದರಿಂದ ಸಂಪಂಗಿಯ ಕೈ ಬಾಗಿಲಿನ ಒಳಡೆ ಇದ್ದರೆ ದೇಹ ಹೊರಗಡೆ ಇತ್ತು. ಇದನ್ನೂ ಓದಿ: ಧರ್ಮಸ್ಥಳ ಕೇಸಲ್ಲಿ ಅನನ್ಯಾ ಭಟ್ ಪಾತ್ರ ಕಟ್ಟುಕಥೆನಾ? – ಸುಜಾತಾ ಭಟ್ ಸುಳ್ಳು ಹೇಳಿ ಯಾಮಾರಿಸಿದ್ರಾ?
ಬಸ್ಸು ಮುಂದಕ್ಕೆ ಹೋಗುತ್ತಿದ್ದಂತೆ ಚಕ್ರದ ಅಡಿಗೆ ಬಿದ್ದು ಸಂಪಂಗಿ ಸಾವನ್ನಪ್ಪಿದ್ದಾರೆ. ಜಯನಗರ ಬಸ್ ನಿಲ್ದಾಣದಿಂದ ಎಲೆಕ್ಟ್ರಿಕ್ ಬಸ್ ಮೆಜೆಸ್ಟಿಕ್ ಕಡೆಗೆ ಹೊರಟಿತ್ತು.
ಸ್ಥಳಕ್ಕೆ ಜಯನಗರ ಪೊಲೀಸರು ಆಗಮಿಸಿದ್ದು ಈಗ ಮೃತ ಸಂಪಂಗಿಯ ಕುಟುಂಬಸ್ಥರನ್ನು ಸಂಪರ್ಕಿಸುತ್ತಿದ್ದಾರೆ. ಮೃತದೇಹವನ್ನು ಕಿಮ್ಸ್ ಆಸ್ಪತ್ರೆಗೆ ಸಾಗಿಸಲಾಗಿದೆ.