ಬೆಂಗಳೂರು: ಪ್ರಯಾಣಿಕನೊಬ್ಬ ಮೆಟ್ರೋ ಹಳಿಗೆ (Metro Track) ಹಾರಿ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ನಾಡಪ್ರಭು ಕೆಂಪೇಗೌಡ (Nadaprabhu Kempegowda Metro Station, Majestic) ಮೆಟ್ರೋ ನಿಲ್ದಾಣದಲ್ಲಿ ನಡೆದಿದೆ.
ಮಾದಾವರ ಟು ಸಿಲ್ಕ್ ಇನ್ಸ್ಟಿಟ್ಯೂಟ್ ಮಾರ್ಗದ ಗ್ರೀನ್ ಲೇನ್ನಲ್ಲಿ ಘಟನೆ ನಡೆದಿದ್ದು, ಮೆಜೆಸ್ಟಿಕ್ 3ನೇ ಪ್ಲಾಟ್ ಫಾರ್ಮ್ನಲ್ಲಿ ಸಂಚಾರ ಸ್ಥಗಿತಗೊಳಿಸಲಾಗಿದೆ. ಮೆಟ್ರೋ ಸ್ಥಗಿತದಿಂದ ಗ್ರೀನ್ ಲೈನ್ನಲ್ಲಿ ಪ್ರಯಾಣಿಕರ ದಟ್ಟಣೆ ಹೆಚ್ಚಾಗಿದೆ. ಇದನ್ನೂ ಓದಿ: ಬೆಂಗಳೂರು | ಮೊದಲ ದಿನವೇ ಜಾತಿಗಣತಿ ಸಮೀಕ್ಷೆಗೆ ವಿಘ್ನ – ಗೊಂದಲ ನಿವಾರಣೆಗೆ ಗಣತಿದಾರರಿಂದ ಪ್ರತಿಭಟನೆ
ಪ್ಲಾಟ್ ಫಾರ್ಮ್ನಲ್ಲಿ ನಿಂತಿದ್ದ ಪ್ರಯಾಣಿಕ ರೈಲು ಬರುತ್ತಿದ್ದಂತೆ ಹಳಿಗೆ ಹಾರಿದ್ದಾನೆ. ಸದ್ಯ ಮೆಟ್ರೋ ರೈಲಿನಡಿ ಪ್ರಯಾಣಿಕ ಸಿಲುಕಿಕೊಂಡಿದ್ದಾನೆ ಎಂದು ಮೂಲಗಳಿಂದ ತಿಳಿದುಬಂದಿದೆ. ಹೀಗಾಗಿ ಹಸಿರು ಮಾರ್ಗದ ಮೆಟ್ರೋ ಸಂಚಾರ ಸ್ಥಗಿತಗೊಳಿಸಲಾಗಿದೆ. ಇದನ್ನೂ ಓದಿ: ಮುಂದಿನ ಪೀಳಿಗೆಗೆ ನ್ಯಾಯ ಒದಗಿಸಲು ಸಮೀಕ್ಷೆಯಲ್ಲಿ ಭಾಗವಹಿಸಿ: ಡಿಕೆಶಿ ಮನವಿ
ಆತ್ಮಹತ್ಯೆಗೆ ಯತ್ನಿಸಿದ ಪ್ರಯಾಣಿಕನ ರಕ್ಷಣೆಗೆ ಮುಂದಾಗಿರುವ ಅಧಿಕಾರಿಗಳು ಶೀಘ್ರದಲ್ಲೇ ಸಂಚಾರ ಆರಂಭಿಸುವ ನಿಟ್ಟಿನಲ್ಲಿ ಕೆಲಸ ನಿರ್ವಹಿಸುತ್ತಿದ್ದಾರೆ. ಇದನ್ನೂ ಓದಿ: ‘ಕಾಂತಾರ’ಗೆ ಟಿಕೆಟ್ ಸಿಗದ ಕಾರ್ಯಕರ್ತರಿಗೆ ಸೋಮವಾರ ವ್ಯವಸ್ಥೆ ಮಾಡುತ್ತೇನೆ: ಪ್ರತಾಪ್ ಸಿಂಹ