ಬಿಜೆಪಿ ಮೇಕಿಂಗ್ ಇಂಡಿಯಾ ಮಾಡಲು ಹೋದ್ರೆ ಕಾಂಗ್ರೆಸ್ ಬ್ರೇಕಿಂಗ್ ಇಂಡಿಯಾ ಮಾಡ್ತಿದೆ: ಅಮಿತ್ ಷಾ

Public TV
1 Min Read

ನವದೆಹಲಿ: ಬಿಜೆಪಿ ಸರ್ಕಾರ ಭಾರತದ ನಿರ್ಮಾಣಕ್ಕಾಗಿ ಕಾರ್ಯನಿರ್ವಹಿಸುತ್ತಿದ್ದರೆ, ಕಾಂಗ್ರೆಸ್ ಭಾರತವನ್ನು ಮುರಿಯುವ ಕೆಲಸ ಮಾಡುತ್ತಿದೆ ಎಂದು ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಷಾ ಹೇಳಿದ್ದಾರೆ.

ಬಿಜೆಪಿಯ ಕಾರ್ಯನಿರ್ವಾಹಕ ಸಭೆಯಲ್ಲಿ ಮಾತನಾಡಿದ ಅವರು, ಈ ಬಾರಿ ಮತ್ತೆ 2019ರ ಚುನಾವಣೆಯಲ್ಲಿ ಪಕ್ಷವು 2014 ಕ್ಕಿಂತಲೂ ದೊಡ್ಡ ಮಟ್ಟದ ಗೆಲುವು ಸಾಧಿಸಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಇಂದು ಎರಡನೇ ದಿನ ಪ್ರಧಾನಿ ಮೋದಿ ಅವರು ಭಾಷಣ ಕೈಗೊಂಡಿದ್ದಾರೆ ಎಂದರು.

ಮಧ್ಯಪ್ರದೇಶ, ರಾಜಸ್ತಾನ್ ಮತ್ತು ಛತ್ತಿಸ್‍ಗಢ್ ಈ ವರ್ಷದ ಅಂತ್ಯದಲ್ಲಿ ನಿರ್ಣಾಯಕ ಚುನಾವಣೆಯಿಂದಾಗಿ ಬಿಜೆಪಿ 2 ದಿನಗಳ ರಾಷ್ಟ್ರೀಯ ಕಾರ್ಯಕಾರಿ ಸಭೆಯನ್ನು ಶನಿವಾರ ಆರಂಭಿಸಿದೆ. ಈ ಸಭೆಗೆ ದೇಶಾದ್ಯಂತ ಹಿರಿಯ ಪಕ್ಷದ ನಾಯಕರು ಹಾಜರಾಗಿದ್ದು, ದೆಹಲಿಯ ಅಂಬೇಡ್ಕರ್ ಅಂತರಾಷ್ಟ್ರೀಯ ಕೇಂದ್ರದಲ್ಲಿ ನಡೆಯುತ್ತಿದೆ. ಮುಂಬರುವ ವಿಧಾನಸಭಾ ಚುನಾವಣೆಗಳಿಂದಾಗಿ ಮೂರು ರಾಜ್ಯಗಳಲ್ಲಿ ಬಿಜೆಪಿ ಅಧಿಕಾರದಲ್ಲಿದೆ ಅಂದ್ರು.

ಈ ಸಭೆಯೂ ಆಗಸ್ಟ್ 18 ಮತ್ತು 19 ರಂದೇ ನಡೆಯಬೇಕಿತ್ತು ಆದರೆ ಆಗಸ್ಟ್ 16 ರಂದು ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರು ನಿಧನರಾದ ಕಾರಣದಿಂದಾಗಿ ಮುಂದೂಡಲಾಗಿದೆ ಅಂತ ಅವರು ಹೇಳಿದ್ರು.

ಪ್ರಧಾನಿ ಮೋದಿರವರ ಮಾರ್ಗದರ್ಶನ ಭಾಷಣದ ನಂತರ ನಿರ್ಣಯಕ ಸಮಿತಿ ಅಂತ್ಯಗೊಳ್ಳಲಿದೆ. ಎಲ್.ಕೆ ಅಡ್ವಾಣಿ, ರಾಜ್‍ನಾಥ್ ಸಿಂಗ್, ಮುರಳಿ ಮನೋಹರ್ ಜೋಶಿ, ಸುಷ್ಮಾ ಸ್ವರಾಜ್ ಮತ್ತು ಅರುಣ್ ಜೇಟ್ಲಿ ಪಕ್ಷದ ಪರಿಣತರು ವೇದಿಕೆ ಅಲಂಕರಿಸಲಿದ್ದಾರೆ. ಎಲ್ಲಾ ಬಿಜೆಪಿ ಆಡಳಿತ ರಾಜ್ಯಗಳ ಪಕ್ಷದ ಮುಖ್ಯಸ್ಥರು, ಪಕ್ಷದ ಮುಖ್ಯಮಂತ್ರಿಗಳು ಮತ್ತು ಉಪ ಮುಖ್ಯಮಂತ್ರಿಗಳು ಮತ್ತು ಸಂಘಟನೆಯ ಇತರ ಸದಸ್ಯರು ಸಹ ಸಭೆಯಲ್ಲಿ ಭಾಗವಹಿಸುತ್ತಿದ್ದಾರೆ ಅಂತ ಶಾ ವಿವರಿಸಿದ್ರು.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Share This Article
Leave a Comment

Leave a Reply

Your email address will not be published. Required fields are marked *