ಬೆಂಗಳೂರು: ಶಾಸಕರ ಅಭಿಪ್ರಾಯ ಪಡೆದೇ ಹೈಕಮಾಂಡ್ ಸಿಎಂ ಆಯ್ಕೆ ಮಾಡೋದು ಅಂತ ಡಿಸಿಎಂ ಡಿ.ಕೆ ಶಿವಕುಮಾರ್ (D.K Shivakumar) ಹೇಳಿಕೆಗೆ ಗೃಹ ಸಚಿವ ಪರಮೇಶ್ವರ್ (G.Parameshwar) ತಿರುಗೇಟು ನೀಡಿದ್ದಾರೆ.
ಸಿಎಂ ಆಯ್ಕೆಗೆ ಶಾಸಕರ ಬಲ ಬೇಡ ಹೈಕಮಾಂಡ್ ತೀರ್ಮಾನ ಸಾಕು ಎಂಬ ಡಿಸಿಎಂ ಡಿ.ಕೆ ಶಿವಕುಮಾರ್ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಅವರು, ನಮ್ಮಲ್ಲಿ ಒಂದು ನಿಯಮ ಇದೆ. ಒಂದು ಪಕ್ಷ ಆಯ್ಕೆ ಆದ ಮೇಲೆ ಸರ್ಕಾರ ಮಾಡುವಾಗ, ಸಿಎಲ್‌ಪಿ ಲೀಡರ್ ಅಂದರೆ ಮುಖ್ಯಮಂತ್ರಿಗಳ ನೇಮಕ ಮಾಡುವಾಗ ಶಾಸಕರ ಅಭಿಪ್ರಾಯ ಕೇಳಲು ಹೈಕಮಾಂಡ್‌ನಿಂದ ವೀಕ್ಷಕರು ಬರುತ್ತಾರೆ. ಅವರು ಶಾಸಕರ ಅಭಿಪ್ರಾಯ ತಗೊಂಡು ಹೈಕಮಾಂಡ್‌ಗೆ ತಿಳಿಸುತ್ತಾರೆ. ಇಂತವರ ಪರ ಇಷ್ಟು ಜನ ಇದ್ದಾರೆ ಎಂದು ಹೇಳುತ್ತಾರೆ. ಯಾರಿಗೆ ಸಿಎಂಗೆ ಮೆಜಾರಿಟಿ ಬಂದಿದೆ ಎಂದು ಆ ನಂತರ ಹೆಸರು ಘೋಷಣೆ ಮಾಡುತ್ತಾರೆ ಎಂದರು. ಇದನ್ನೂ ಓದಿ: ನಮ್ಮ ಸಚಿವ ಸ್ಥಾನ ಉಳಿಸಿಕೊಳ್ಳೋದೇ ಕಷ್ಟ ಇದೆ, ಸಿಎಂ ಬದಲಾವಣೆ ಬಗ್ಗೆ ನಾವೇನ್ ಹೇಳೋದು? – ಸತೀಶ್ ಜಾರಕಿಹೊಳಿ
ಸಿದ್ದರಾಮಯ್ಯ ನವರನ್ನು ಆಯ್ಕೆ ಮಾಡಿದ್ದು ಇದೇ ರೀತಿಯಲ್ಲಿ. ಹಿಂದೆ ಎಸ್.ಎಂ ಕೃಷ್ಣ ಅವರನ್ನು ಆಯ್ಕೆ ಮಾಡುವಾಗಲೂ ಇದೇ ರೀತಿಯಲ್ಲಿ ಮಾಡಿದ್ದೇವೆ. ಇವಾಗ್ಲೂ ಕೂಡ ಶಾಸಕರ ಅಭಿಪ್ರಾಯ ಪಡೆಯಬೇಕೆಂಬುದು ಪದ್ದತಿ. ಇಲ್ಲ ಹೈಕಮಾಂಡ್ ತೀರ್ಮಾನ ತಗೊಳ್ತೇವೆ ಎಂದರೆ ಅದು ಅವರಿಗೆ ಬಿಟ್ಟಿದ್ದು. ಅದಕ್ಕೆ ನಾವು ಹೈಕಮಾಂಡ್ ತೀರ್ಮಾನ ಅನ್ನೋದು. ಹೈಕಮಾಂಡ್ ತೀರ್ಮಾನಕ್ಕೆ ಎಲ್ಲರೂ ಗೌರವ ಕೊಡುತ್ತಾರೆ ಎಂದರು. ಇದನ್ನೂ ಓದಿ: ರಾಜ್ಯದಲ್ಲಿ ಸಿಎಂ ಬದಲಾವಣೆ ಇಲ್ಲ, 5 ವರ್ಷವೂ ಸಿದ್ದರಾಮಯ್ಯ ಸಿಎಂ: ರಾಮಲಿಂಗಾರೆಡ್ಡಿ