ನಮ್ಮ ಮುದ್ದಿನ ಗಿಳಿ ಕಾಣೆಯಾಗಿದೆ – ಬ್ಯಾನರ್, ಕರಪತ್ರ ಹಂಚಿದ ದಂಪತಿ

Public TV
2 Min Read

ತುಮಕೂರು: ಅವರು ಆ ಗಿಳಿಯನ್ನು ಅರಗಿಣಿಯಂತೆ ಸಾಕಿದ್ದರು. ಅಪ್ಪಿ ಮುದ್ದಾಡುತ್ತಿದ್ದರು. ಸ್ವಂತ ಮಕ್ಕಳಿಗಿಂತ ಹೆಚ್ಚಾಗಿ ಪ್ರೀತಿ ವಾತ್ಸಲ್ಯದಿಂದ ನೋಡಿಕೊಳ್ಳುತ್ತಿದ್ದರು. ಆ ಗಿಳಿ ಕೂಡ ಅಷ್ಟೇ ಬಾಂಧ್ಯವ್ಯದಿಂದ ಈ ಕುಟುಂಬದೊಂದಿಗೆ ಬೆಸೆದಿತ್ತು. ಆದರೆ ಇದಕ್ಕಿದ್ದ ಹಾಗೆ ಕಾಣೆಯಾಗಿದೆ. ಇದೀಗ ಗಿಣಿಗಾಗಿ ಕುಟುಂಬ ಕಣ್ಣೀರಿಡುತ್ತಿದೆ.

ತೇವಗೊಂಡಿರುವ ಕಣ್ಣಾಲೆಗಳು, ಮಡುಗಟ್ಟಿದ್ದ ದುಃಖದೊಂದಿಗೆ ನಮ್ಮ ಮುದ್ದಿನ ಗಿಣಿ ಕಾಣೆಯಾಗಿದೆ ಎಂದು ಕುಟುಂಬವೊಂದು ಕರಪತ್ರ ಹಂಚುತ್ತಾ ಬೀದಿ ಬೀದಿ ಹುಡುಕಾಟ ನಡೆಸಿರುವ ಘಟನೆ ತುಮಕೂರಿನ ಜಯನಗರದಲ್ಲಿ ನಡೆದಿದೆ. ಜಯನಗರದ ನಿವಾಸಿ ಅರ್ಜುನ್-ರಂಜನಾ ದಂಪತಿ ಕಳೆದ ಸುಮಾರು ಮೂರು ವರ್ಷದಿಂದ ಒಂದು ಕಪಲ್ ಗಿಣಿಗಳನ್ನು ಭದ್ರಾವತಿಯಲ್ಲಿ ಸಾಕುತಿದ್ದರು. ಕಳೆದ 20 ದಿನದಿಂದ ತುಮಕೂರಿನ ಜಯನಗರಕ್ಕೆ ಶಿಫ್ಟ್ ಆಗಿದ್ದರು. ಜುಲೈ 16 ರಂದು ಮನೆಯ ಬಾಗಿಲು ತೆರೆದಾಗ ಗಂಡು ಗಿಣಿ ಹಾರಿಹೋಗಿದೆ. ಪುನಃ ವಾಪಸ್ ಬರಲೇ ಇಲ್ಲ. ಗಿಣಿಯೊಂದಿಗೆ ಈ ಕುಟುಂಬ ಅತ್ಯಂತ ಬಾಂಧ್ಯವದಿಂದ ಇದ್ದು ಕಾಣೆಯಾಗಿದ್ದ ಗಿಣಿಗಾಗಿ ಕಣ್ಣಿರಿಡುತ್ತಾ ದುಃಖದಲ್ಲಿ ಹುಡುಕಾಟ ನಡೆಸುತ್ತಿರುವುದು ಅಕ್ಷರಶಃ ಮನಕಲಕುವಂತಿತ್ತು. ಇದೀಗ ಗಿಣಿ ಹುಡುಕಾಟ ಆರಂಭಿಸಿರುವ ಕುಟುಂಬಸ್ಥರು ಆಟೋದಲ್ಲಿ ಅನೌನ್ಸ್ ಮಾಡುತ್ತಾ, ಕರಪತ್ರ ಹಂಚುತ್ತಿದ್ದಾರೆ. ಇದನ್ನೂ ಓದಿ: ನಾನು ಒಪ್ಕೊಂಡಿದ್ದೀನಿ, ಅವಳೂ ಒಪ್ಕೊಂಡಿದ್ದಾಳೆ, ನನ್ನ ಪತ್ನಿಯನ್ನೂ ಒಪ್ಪಿಸ್ತೀನಿ..: ನವ್ಯಶ್ರೀಯಿಂದ ಆಡಿಯೋ ರಿಲೀಸ್

ಗಿಣಿಗೆ ಅರ್ಜುನ್-ರಂಜನಾ ದಂಪತಿ ರುಸ್ತುಮಾ ಎಂದು ಹೆಸರಿಟ್ಟಿದ್ದು ಆಫ್ರೀಕನ್ ಗ್ರೇ ಬಣ್ಣದ ಗಿಣಿಯಾಗಿದೆ. ಗಿಣಿ ಪತ್ತೆ ಮಾಡಿಕೊಟ್ಟವರಿಗೆ 50 ಸಾವಿರ ರೂಪಾಯಿ ಬಹುಮಾನವ ಘೋಷಣೆಯನ್ನೂ ದಂಪತಿ ಮಾಡಿದ್ದು, ಸಾಮಾಜಿಕ ಜಾಲತಾಣಗಳಲ್ಲಿಯೂ ಗಿಣಿ ಕಾಣೆಯಾಗಿರುವ ಬಗ್ಗೆ ಕುಟುಂಬ ಮಾಹಿತಿ ಹಂಚಿಕೊಂಡು ಸಹಕರಿಸುವಂತೆ ಕೋರಿದೆ. ಉಪ್ಪಾರಳ್ಳಿ ಕೆರೆ, ಜಯನಗರ ಕೆರೆ ಹೀಗೆ ಪಕ್ಷಿಗಳು ಕೂರುವ ಎಲ್ಲಾ ಕಡೆಯೂ ಶೋಧ ನಡೆಸುತ್ತಿದ್ದಾರೆ. ಕಳೆದ ಮೂರ್ನಾಲ್ಕು ದಿನದಿಂದ ನೆಚ್ಚಿನ ಗಿಣಿಗಾಗಿ ಹಗಲು ರಾತ್ರಿ ಎನ್ನದೇ ಕುಟುಂಬ ಹುಡುಕಾಟ ನಡೆಸುತ್ತಿದೆ. ಗಿಣಿಯನ್ನು ನೋಡಿದವರು ಮಾಹಿತಿ ನೀಡುವಂತೆ ತುಮಕೂರು ನಗರದಲ್ಲಿ ಬ್ಯಾನರ್ ಹಾಕಿದ್ದಾರೆ. ಇದನ್ನೂ ಓದಿ: ಜನಾಕ್ರೋಶಕ್ಕೆ ಮಣಿದ ಕೇಂದ್ರ – ಅಕ್ಕಿ, ಮೊಸರು ಸೇರಿದಂತೆ 14 ವಸ್ತುಗಳ ಮೇಲೆ ಜಿಎಸ್‍ಟಿ ವಿನಾಯಿತಿ

ಈ ನಡುವೆ ಅರ್ಜುನ್-ರಂಜನಾ ದಂಪತಿ ತಂದಿದ್ದ ಜೋಡಿ ಗಿಳಿಗಳ ಪೈಕಿ ಹೆಣ್ಣು ಗಿಳಿ ಮಾತ್ರ ಪಂಜರದಲ್ಲಿ ಒಂಟಿಯಾಗಿದ್ದು ವಿರಹವೇದನೆ ಅನುಭವಿಸುತ್ತಿದೆ. ಹಾಗಾಗಿ ಕೆಲ ಸಾರ್ವಜನಿಕರು ಕೂಡ ಗಿಣಿ ಹುಡುಕಲು ಸಹಕರಿಸುತ್ತಿದ್ದಾರೆ.

Live Tv
[brid partner=56869869 player=32851 video=960834 autoplay=true]

Share This Article
Leave a Comment

Leave a Reply

Your email address will not be published. Required fields are marked *