ಪೆರೋಲ್ ಪಡೆದು ಪರಾರಿಯಾದಾತ ತನ್ನದೇ ಸಾವಿನ ಕತೆ ಕಟ್ಟಿದ – 15 ವರ್ಷಗಳ ಬಳಿಕ ಮತ್ತೆ ಅಂದರ್

Public TV
2 Min Read

ಬೆಂಗಳೂರು: ಆತ ಓದಿದ್ದು 8ನೇ ಕ್ಲಾಸ್, ಮಾಡಿದ್ದು ಮರ್ಡರ್, ಆದರೆ ಫೇಮಸ್ ಆಗಿದ್ದು ಮಾತ್ರ ಚೆಸ್ ಆಟದಲ್ಲಿ. ಇದನ್ನೇ ಅಡ್ವಾಂಟೇಜ್ ಮಾಡಿಕೊಂಡ ಆರೋಪಿ ಪೆರೋಲ್ (Parole) ಕೇಸ್‌ನಲ್ಲಿ ಪರಾರಿಯಾಗಿ ಬಳಿಕ ತನ್ನದೇ ಸಾವಿನ ಕತೆ ಕಟ್ಟಿ 15 ವರ್ಷಗಳ ಬಳಿಕ ಮತ್ತೆ ಸಿಕ್ಕಿಬಿದ್ದಿದ್ದಾನೆ.

ಕಣ್ಮುಚ್ಕೊಂಡೇ ಚೆಸ್ ಗೇಮ್ ಗೆಲ್ಲುತ್ತಿದ್ದ ಈತನ ಕತೆ ಕೇಳಿದರೆ ಒಂದು ಸಿನಿಮಾನೇ ಮಾಡಬಹುದು. ಜೈಲಿಗೆ (Jail) ಬಂದು, ಚೆಸ್ (Chess) ಕಲಿತು, ಎಸ್ಕೇಪ್ ಆದಮೇಲೂ ಪ್ಲಾನ್ ಹಾಕಿದ್ದು ದೊಡ್ಡ ಬ್ಯುಸಿನೆಸ್‌ಗೆ. ತ್ರಿಬಲ್ ರೋಲ್‌ನಲ್ಲಿ ಲೈಫ್ ಹ್ಯಾಂಡಲ್ ಮಾಡುತ್ತಿದ್ದ ಆರೋಪಿಯ ಹೆಸರು ಸುಹೇಲ್.

ಪೆರೋಲ್ ಕೇಸ್‌ನಲ್ಲಿ ಪರಾರಿಯಾಗಿದ್ದ ಮಲ್ಟಿ ಟ್ಯಾಲೆಂಟೆಡ್ ಆರೋಪಿ ಸುಹೇಲ್‌ನನ್ನು 15 ವರ್ಷಗಳ ಬಳಿಕ ಮಡಿವಾಳ ಪೊಲೀಸರು ಬಂಧಿಸಿದ್ದಾರೆ. ಆತ ತನ್ನ ಕಣ್ಣಿಗೆ ಬಟ್ಟೆ ಕಟ್ಟಿಕೊಂಡು ಎಂತಹ ಕಷ್ಟದ ಲೆವೆಲ್ ಚೆಸ್ ಆಟವಾದರೂ ಗೆದ್ದುಬಿಡುತ್ತಿದ್ದ. ಚಾಲಾಕಿ ಸುಹೇಲ್ 2000ದಲ್ಲಿ ಮಡಿವಾಳ ಲಿಮಿಟ್ಸ್ನಲ್ಲಿ ಮಾಜಿ ಯೋಧರೊಬ್ಬರ ಲಾರಿ ಡ್ರೈವರ್ ಆಗಿದ್ದ. ಆ ಸಂದರ್ಭ ಕೊಲೆ ಮಾಡಿ, ಡಕಾಯತಿ ಮಾಡಿದ್ದ. ಈ ಸಂಬಂಧ ಪೊಲೀಸರು ಐಪಿಸಿ ಸೆಕ್ಷನ್ 396 ಅಡಿ ಅರೆಸ್ಟ್ ಮಾಡಿ ಜೈಲಿಗೆ ತಳ್ಳಿದ್ದರು.

ಆದರೆ ಸುಹೇಲ್ ಜೈಲಿನಲ್ಲಿ ಸುಮ್ಮನೆ ಇರುತ್ತಿರಲಿಲ್ಲ. ಯಾವಾಗಲೂ ತಲೆಗೆ ಕೆಲಸ ಕೊಡುತ್ತಿದ್ದ. 4 ಗೋಡೆಗಳ ಮಧ್ಯೆ ಇದ್ದು, 7 ವರ್ಷ ಚೆಸ್ ಆಟದಲ್ಲಿ ನಿಸ್ಸೀಮನಾಗಿದ್ದ. ಜೈಲಿಗೆ ತಳ್ಳಿದ್ದೇ ತಡ ಚೆಸ್ ಆಟದ ಕಲಿಕೆಗೆ ಮುಂದಾಗಿದ್ದ ಸುಹೇಲ್ ಪುಸ್ತಕ ಓದುವುದು, ಒಬ್ಬನೇ ಕೂತು ಚೆಸ್ ಆಡುವುದು, ಕಣ್ಣಿಗೆ ಬಟ್ಟೆ ಕಟ್ಟಿಕೊಂಡು ಎದುರಾಳಿ ಇಲ್ಲದಿದ್ದರೂ ಎರಡೂ ಕಡೆ ಆಟವಾಡುತ್ತಿದ್ದ.

2 ವರ್ಷದಲ್ಲಿ ಚೆಸ್ ಆಟ ಕಲಿತು ಪರ್ಫೆಕ್ಟ್ ಆಗಿದ್ದ ಸುಹೇಲ್, ಈತನ ಒಂಟಿ ಆಟ ನೋಡಿಯೇ ಜೈಲರ್‌ಗಳು ಬೆರಗಾಗಿದ್ದರು. ಈತನ ಟ್ಯಾಲೆಂಟ್ ನೋಡಿ ಜೈಲು ಎಸ್‌ಪಿ ಆತನನ್ನು ಚೆಸ್ ಟೂರ್ನಿಗಳಿಗೆ ಕಳಿಸೋಕೆ ಶುರು ಮಾಡಿದ್ದರು. ಅಂದಿನಿಂದ ಆಟ ಶುರು ಮಾಡಿದ್ದವ ಹಿಂದಿರುಗಿ ನೋಡೇ ಇಲ್ಲ. ಸತತ ದೊಡ್ಡ ದೊಡ್ಡ ಟೂರ್ನಮೆಂಟ್‌ಗಳಲ್ಲಿ ಸುಹೇಲ್ ಚೆಸ್ ಆಟ ಗೆದ್ದು ಬರುತ್ತಿದ್ದ. ಇದನ್ನೂ ಓದಿ: ರಾತ್ರಿ ಊಟ ಬಡಿಸಲು ನಿರಾಕರಿಸಿದ್ದಕ್ಕೆ ಪತ್ನಿಯನ್ನು ಕೊಡಲಿಯಿಂದ ಕೊಂದ ಪತಿ

ಸುಹೇಲ್ 2007ರ ವರೆಗೂ ಟೂರ್ನಮೆಂಟ್ ಗೆದ್ದು ತಂದಿದ್ದ. ಅದೇ ನಂಬಿಕೆಯಲ್ಲಿ ಹಿರಿಯ ಅಧಿಕಾರಿಗಳ ಬಳಿ ಪೆರೋಲ್ ಕೇಳಿದ್ದ. ನನ್ನ ಹೆಂಡತಿ, ಮಕ್ಕಳನ್ನು ನೋಡಬೇಕು ಎಂದುಕೊಂಡು ಪೆರೋಲ್ ಪಡೆದು ಹೋದಾತ ವಾಪಾಸ್ ಬರಲೇ ಇಲ್ಲ. ವಾಪಸ್ ಬರುತ್ತಾನೆ ಎಂದು ಪೊಲೀಸರಿಗೆ ಸುಹೇಲ್ ಕೈ ಕೊಟ್ಟಿದ್ದ. ಈ ವೇಳೆ ತನ್ನ ಸ್ನೇಹಿತನ ಸಹಾಯ ಪಡೆದು, ತಾನು ಸತ್ತಿರುವುದಾಗಿ ಸೀನ್ ಕ್ರಿಯೇಟ್ ಮಾಡಿದ್ದ.

ಸುಹೇಲ್ ಎಸ್ಕೇಪ್ ಆದ ಕೆಲ ತಿಂಗಳುಗಳ ನಂತರ ಹೆಣ್ಣೂರು ಲಿಮಿಟ್ಸ್‌ನಲ್ಲಿ ಒಂದು ಶವ ಸಿಕ್ಕಿತ್ತು. ಸುಹೇಲ್‌ಗೆ ಹೋಲಿಕೆಯಾಗುವಂತೆಯೇ ಇದ್ದ ಶವವಾಗಿದ್ದರಿಂದ ಈ ಬಗ್ಗೆ ಪೊಲೀಸರು ಸುಹೇಲ್ ಸ್ನೇಹಿತನನ್ನು ಕೇಳಿದ್ದರು. ಈ ವೇಳೆ ಆತನೂ ಇದು ಸುಹೇಲ್ ಶವ ಎಂದಿದ್ದ. ಅಲ್ಲಿಗೆ ಸುಹೇಲ್ ಸತ್ತುಹೋಗಿದ್ದಾನೆ ಎಂದು ಪೊಲೀಸರು ಭಾವಿಸಿದ್ದರು.‌ ಇದನ್ನೂ ಓದಿ: ವಿವಾಹಿತೆಯೊಂದಿಗೆ ಪ್ರೇಮ- ಹೋಟೆಲ್‌ನಲ್ಲಿ ರಾತ್ರಿ ತನ್ನೊಂದಿಗೆ ಇರಲು ನಿರಾಕರಿಸಿದ್ದಕ್ಕೆ ಕೊಲೆ

ಇದೆಲ್ಲದರ ಬಳಿಕ ಕಳೆದ 15 ವರ್ಷಗಳಿಂದ ಸುಹೇಲ್ ಯಾರಿಗೂ ಗುರುತು ಸಿಗದಂತೆ ಜೀವನ ಸಾಗಿಸಿದ್ದ. ಆದರೆ ಇತ್ತೀಚೆಗೆ ಪೊಲೀಸರು ಚಿಕ್ಕಮಗಳೂರಿನ ಉಪ್ಪಿನಂಗಡಿ ಕಡೆ ಹೋಗಿದ್ದಾಗ ಕೊನೆಗೂ ಪತ್ತೆಯಾಗಿದ್ದಾನೆ. ಇದೀಗ ಚಾಲಾಕಿ ಸುಹೇಲ್‌ನನ್ನು ಪೊಲೀಸರು ಬಂಧಿಸಿ, ಜೈಲಿಗಟ್ಟಿದ್ದಾರೆ.

Live Tv
[brid partner=56869869 player=32851 video=960834 autoplay=true]

Share This Article
Leave a Comment

Leave a Reply

Your email address will not be published. Required fields are marked *