ತ್ರಿಪುರ ಬಿಜೆಪಿ ಬೆಂಬಲಿಗರಿಂದ ಸಂಸದೀಯ ತಂಡದ ಮೇಲೆ ದಾಳಿ

Public TV
1 Min Read

ಅಗರ್ತಲಾ: ಬಿಜೆಪಿ (BJP) ಬೆಂಬಲಿಗರಿಂದ ಕಾಂಗ್ರೆಸ್ (Congress) ಹಾಗೂ ಸಿಪಿಐ (CPI) ಸಂಸದೀಯ ತಂಡದ ಮೇಲೆ ದಾಳಿ ನಡೆದ ಘಟನೆ ಬಿಸಲ್‍ಗಢ್‍ನಲ್ಲಿ ನಡೆದಿದೆ.

ತ್ರಿಪುರ ಸಿಪಿಐ ರಾಜ್ಯ ಕಾರ್ಯದರ್ಶಿ ಜಿತೇಂದ್ರ ಚೌಧರಿ (Jitendra Chaudhury) ಹಾಗೂ ತಂಡ ಶುಕ್ರವಾರ ಸಂಜೆ ಬಿಸಲ್‍ಗಢ್‍ನ (Bisalgarh) ನೇಹಲ್‍ಚಂದ್ರ ನಗರಕ್ಕೆ (Nehalchandra Nagar) ತೆರಳಿದ್ದಾಗ ಈ ದಾಳಿ ನಡೆದಿದೆ. ದಾಳಿಯ ಹಿನ್ನೆಲೆಯಲ್ಲಿ ಇಂದು ನಡೆಯ ಬೇಕಿದ್ದ ಸಂಸದೀಯ ತಂಡದ ಸಾರ್ವಜನಿಕ ಕಾರ್ಯಕ್ರಮಗಳನ್ನು ರದ್ದು ಪಡಿಸುವಂತೆ ಅವರು ಒತ್ತಾಯಿಸಿದ್ದಾರೆ. ಇದನ್ನೂ ಓದಿ: ಕೆಪಿಸಿಸಿ ಕಾರ್ಯಾಧ್ಯಕ್ಷ ಧ್ರುವ ನಾರಾಯಣ್‌ ಇನ್ನಿಲ್ಲ

ಸಂಸದೀಯ ತಂಡ ಚುನಾವಣೋತ್ತರ ರಾಜಕೀಯ ಹಿಂಸಾಚಾರದ ಕುರಿತು ಸಂತ್ರಸ್ತರೊಂದಿಗೆ ಮಾತನಾಡಲು ಬಿಜೆಪಿ ಆಡಳಿತದ ತ್ರಿಪುರದಲ್ಲಿ ಎರಡು ದಿನ ಪ್ರವಾಸ ಕೈಗೊಂಡಿತ್ತು.

ದಾಳಿಯಲ್ಲಿ ಮೂರು ವಾಹನಗಳು ಹಾನಿಗೊಳಗಾಗಿವೆ. ವಾಹನದಲ್ಲಿದ್ದ ಎಲ್ಲರನ್ನೂ ಸುರಕ್ಷಿತವಾಗಿ ಕರೆತರಲಾಯಿತು. ಘಟನೆ ಸಂಬಂಧ ಓರ್ವನನ್ನು ಬಂಧಿಸಲಾಗಿದೆ. ಇನ್ನುಳಿದ ಆರೋಪಿಗಳ ಪತ್ತೆಗೆ ಬಲೆ ಬೀಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಘಟನೆಯನ್ನು ಕಾಂಗ್ರೆಸ್ ನಾಯಕ ಜೈರಾಮ್ ರಮೇಶ್ ಖಂಡಿಸಿದ್ದಾರೆ. ಪಕ್ಷದ ನಾಯಕರ ನಿಯೋಗದ ಮೇಲೆ ಬಿಜೆಪಿ ಗೂಂಡಾಗಳು ದಾಳಿ ನಡೆಸಿದ್ದಾರೆ. ನಿಯೋಗದ ಜೊತೆಯಲ್ಲಿದ್ದ ಪೊಲೀಸರು ಪ್ರತಿಕ್ರಿಯಿಸಿಲ್ಲ. ಬಿಜೆಪಿ ಪ್ರಾಯೋಜಿತ ಹಿಂಸಾಚಾರಕ್ಕೆ ಜಯವಾಗಲಿ ಎಂದು ಟ್ವಿಟ್ಟರ್‌ನಲ್ಲಿ ಆಕ್ರೋಶ ಹೊರಹಾಕಿದ್ದಾರೆ. ಇದನ್ನೂ ಓದಿ: ತಂದೆ ಮನೆಯಿಂದ ಕಾಸ್ಟ್ಲಿ ವಾಚ್ ತರದಿದ್ದಕ್ಕೆ ಪತ್ನಿ ಮೇಲೆ ಮಾರಣಾಂತಿಕ ಹಲ್ಲೆ!

Share This Article
Leave a Comment

Leave a Reply

Your email address will not be published. Required fields are marked *