ವಕ್ಫ್‌ ಜಾಗದಲ್ಲಿ ಹೊಸ ಸಂಸತ್‌ ಭವನ ನಿರ್ಮಾಣ: ಬದ್ರುದ್ದೀನ್ ಅಜ್ಮಲ್ ವಿವಾದ

Public TV
1 Min Read

ಗುವಾಹಟಿ: ವಕ್ಫ್‌ ಆಸ್ತಿಯ (Waqf Land) ಜಾಗದಲ್ಲಿ ಹೊಸ ಸಂಸತ್ತಿನ (Parliament) ಕಟ್ಟಡವನ್ನು ನಿರ್ಮಿಸಲಾಗಿದೆ ಎಂದು ಹೇಳುವ ಮೂಲಕ ಎಐಯುಡಿಎಫ್ ಮುಖ್ಯಸ್ಥ ಬದ್ರುದ್ದೀನ್ ಅಜ್ಮಲ್ (Badruddin Ajmal) ಅವರು ಹೊಸ ವಿವಾದವನ್ನು ಹುಟ್ಟುಹಾಕಿದ್ದಾರೆ.

ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಸಂಸತ್‌ ಕಟ್ಟಡ, ರಾಷ್ಟ್ರ ರಾಜಧಾನಿಯ ವಸಂತ ವಿಹಾರ್ ಸುತ್ತಮುತ್ತ ವಿಮಾನ ನಿಲ್ದಾಣದವರೆಗಿನ (Airport) ಪ್ರದೇಶ ವಕ್ಫ್‌ ಆಸ್ತಿ ಎಂದು ಹೇಳಿದ್ದಾರೆ. ಇದನ್ನೂ ಓದಿ: ಅಯೋಧ್ಯೆ ರಾಮಮಂದಿರಕ್ಕೆ ಇಸ್ರೇಲ್‌ ರಾಯಭಾರಿ ಭೇಟಿ

 

ಅನುಮತಿ ಇಲ್ಲದೆ ವಕ್ಫ್ ಭೂಮಿಯನ್ನು ಬಳಸುವುದು ಸರಿಯಲ್ಲ. ವಕ್ಫ್‌ ಬೋರ್ಡ್‌ ಸಮಸ್ಯೆ ಇತ್ಯರ್ಥವಾದ ಕೂಡಲೇ ತಮ್ಮ ಸಚಿವಾಲಯದ ಜಾಗವನ್ನು ಕಳೆದುಕೊಳ್ಳುತ್ತಾರೆ ಎಂದು ತಿಳಿಸಿದರು.

15 ವರ್ಷಗಳ ಕಾಲ ಸಂಸದರಾಗಿ ಸೇವೆ ಸಲ್ಲಿಸಿದ ಅಜ್ಮಲ್ ಅವರು ಈ ವಿಷಯದ ಬಗ್ಗೆ ತನಿಖೆ ನಡೆಸಬೇಕೆಂದು ಒತ್ತಾಯಿಸಿದರು. ನಾನು 15 ವರ್ಷಗಳ ಕಾಲ ಸಂಸತ್ತಿನಲ್ಲಿದ್ದೆ ಮತ್ತು ವಕ್ಫ್ ಭೂಮಿಯಲ್ಲಿ ಸಂಸತ್ತು ನಿರ್ಮಿಸಲಾಗಿದೆ ಎಂಬ ವದಂತಿಗಳಿವೆ. ಅದಕ್ಕಾಗಿಯೇ ನಾನು ಈ ಬಗ್ಗೆ ತನಿಖೆಗೆ ಆಗ್ರಹಿಸುತ್ತಿದ್ದೇನೆ ಎಂದರು. ಇದನ್ನೂ ಓದಿ: ಸ್ನೇಹಿತನ ವಿರುದ್ಧ ಸೇಡು ತೀರಿಸಿಕೊಳ್ಳಲು 4 ವಿಮಾನಗಳಿಗೆ ಬಾಂಬ್ ಬೆದರಿಕೆ – ಮುಂಬೈನಲ್ಲಿ ಅಪ್ರಾಪ್ತ ಅರೆಸ್ಟ್‌

ವಕ್ಫ್‌ ಮಸೂದೆಯನ್ನು ಪ್ರಶ್ನಿಸಲು ಜಮಿಯತ್ ಉಲೇಮಾ-ಎ-ಹಿಂದ್ ಅಸ್ಸಾಂನಲ್ಲಿ ವಕ್ಫ್ ಬೋರ್ಡ್ ಜಮೀನುಗಳ ಸಮೀಕ್ಷೆಯನ್ನು ನಡೆಸಲಿದೆ.ವಕ್ಫ್ ಮಸೂದೆಯ ಮೇಲಿನ ಕಾನೂನು ಹೋರಾಟ ಮುಂದುವರಿಯುತ್ತದೆ ಎಂದು ಅವರು ಹೇಳಿದರು.

 

Share This Article