ಸಂಸತ್ ದಾಳಿ ಘಟನೆಯನ್ನು ಎಲ್ಲರೂ ಖಂಡಿಸಬೇಕು: ಸಿದ್ದರಾಮಯ್ಯ

Public TV
1 Min Read

ಬೆಂಗಳೂರು: ಸಂಸತ್ (Parliament) ದಾಳಿಯಾದ ಘಟನೆಯನ್ನು ಎಲ್ಲರೂ ಖಂಡಿಸಬೇಕಾಗುತ್ತದೆ. ಪಾಸ್‍ಗಳನ್ನು ಕೊಡುವಾಗ ಗೊತ್ತಿರುವವರಿಗೆ ಮಾತ್ರ ಕೊಡಬೇಕು. ಗೊತ್ತಿಲ್ಲದವರಿಗೆ ಪಾಸ್ ಕೊಡಬಾರದು. ಈ ಘಟನೆ ಮೇಲ್ನೋಟಕ್ಕೆ ಭದ್ರತಾ ಲೋಪ ಎನ್ನುವುದು ಗೊತ್ತಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಹೇಳಿದ್ದಾರೆ.

ಲೋಕಸಭೆ (Loksabha) ಘಟನೆ ಸಂಬಂಧ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಂಸತ್‍ಗೆ ಯಾರಿಂದಲೋ ಪಾಸ್ ಪಡೆದು ಹೋಗಿದ್ದಾರೆ. ಸಂಸತ್ ಸದಸ್ಯರೊಬ್ಬರಿಂದ ಪಾಸ್ ಪಡೆದಿದ್ದಾರೆ ಎನ್ನಲಾಗಿದೆ. ಭದ್ರತಾ ಸಿಬ್ಬಂದಿ ಸರಿಯಾಗಿ ಅವರನ್ನು ತಪಾಸಣೆ ಮಾಡಿಲ್ಲ ಅನ್ಸತ್ತೆ. ಸಚಿವರಿಗೆ ಸೇರಿ ಎಲ್ಲರಿಗೂ ತಪಾಸಣೆ ಮಾಡ್ತಾರೆ. ತಪಾಸಣೆ ಮಾಡಿದರೂ ಹೇಗೆ ಸ್ಮೋಕ್ ಸ್ಪ್ರೇ ಮಾಡಿದ್ರು?. ನಾನು ಅನುಮಾನ ವ್ಯಕ್ತಪಡಿಸ್ತಿಲ್ಲ. ಇಲ್ಲೂ ಕೂಡಾ ನಾವೆಲ್ಲರೂ ಎಚ್ಚರಿಕೆಯಿಂದ ಇರಬೇಕು. ಪಾಸ್ ಪಡೆದು ಒಳ್ಳೆಯವ್ರೂ ಬರಬಹುದು, ಕೆಟ್ಟವರೂ ಬರಬಹುದು, ಉಗ್ರರೂ ಬರಬಹುದು. ಹಿಂದೆ ಸಂಸತ್ ನಲ್ಲಿ ಉಗ್ರರು ನುಗ್ಗಿದ್ರು ಎಂದು ಸಿಎಂ ತಿಳಿಸಿದ್ದಾರೆ.

ಗೃಹ ಸಚಿವರು (Home Minister) ಅಧಿವೇಶನ ಕ್ಕೆ ಭಾರೀ ಪೊಲೀಸ್ ಬಂದೋಬಸ್ತ್ ಕೊಡಲು ಹೇಳ್ತೀನಿ. ಸ್ಪೀಕರ್ ಅವರು ಕೂಡಾ ನಿಮ್ಮ ಸಿಬ್ಬಂದಿಗೆ ಹೇಳಿ ಭದ್ರತಾ ಲೋಪ ಆಗದಂತೆ ನೋಡಿಕೊಳ್ಳಬೇಕು. ಪಾಸ್ ಕೊಡುವಾಗಲೂ ಎಚ್ಚರಿಕೆ ವಹಿಸಬೇಕು. ಈ ಘಟನೆಯನ್ನು ನಾನು ತೀವ್ರವಾಗಿ ಖಂಡಿಸ್ತೇನೆ. ಸದ್ಯಕ್ಕೆ ಸುದೈವ ಸಂಸತ್ ನಲ್ಲಿ ಏನೂ ಆಗಿಲ್ಲ. ತಕ್ಷಣ ಸ್ಪೀಕರ್ ಕಲಾಪ ಮುಂದೂಡಿ ಎಲ್ಲರೂ ಹೊರಗೆ ಹೋಗಲು ಅವಕಾಶ ಮಾಡಿದ್ರು. ಗ್ಯಾಸ್ ಬಾಂಬ್ ಹಾಕಿದ್ದಾರೆ ಅಂತ ನನಗೆ ಇರೋ ಮಾಹಿತಿ ಟಿವಿಗಳಲ್ಲಿ ಬರ್ತಿದೆ ಎಂದರು. ಇದನ್ನೂ ಓದಿ: ಲೋಕಸಭೆಯಲ್ಲಿ ಸ್ಮೋಕ್ ಬಾಂಬ್ – ಪ್ರತಾಪ್ ಸಿಂಹ ಕಚೇರಿಯಿಂದಲೇ ಪಾಸ್ ವಿತರಣೆ

ಯಾವುದು ಸ್ಫೋಟ ಆಗುತ್ತೋ ಅವೆಲ್ಲ ಬಾಂಬ್ ಗಳೇ ಅದು ಗ್ಯಾಸ್ ಆಗಿರಬಹುದು. ಠುಸ್ ಅನ್ನೋದು ಆಗಬಹುದು, ಪಟಾಕಿಗಳಿಗೂ ಬಾಂಬ್ ಪಟಾಕಿ ಅಂತ ಕರೀತೀವಲ್ಲ. ಬಹಳ ಎಚ್ಚರಿಕೆ ವಹಿಸೋದು ಒಳ್ಳೆಯದು ಎಂದು ಸಿದ್ದರಾಮಯ್ಯ ಹೇಳಿದ್ದಾರೆ.

Share This Article