Paris Olympics |ಮನು ಭಾಕರ್‌ಗೆ ಮೂರನೇ ಪದಕ ಜಸ್ಟ್‌ ಮಿಸ್‌

Public TV
1 Min Read

ಪ್ಯಾರಿಸ್‌: ಒಂದೇ ಒಲಿಂಪಿಕ್ಸ್‌ನಲ್ಲಿ (Paris Olympics )ಎರಡು ಪದಕ ಗೆದ್ದು ದಾಖಲೆ ಬರೆದಿದ್ದ ಭಾರತದ ಮನು ಭಾಕರ್ (Manu Bhaker) ಅವರಿಗೆ ಮೂರನೇ ಪದಕ ಜಸ್ಟ್‌ ಮಿಸ್‌ ಆಗಿದೆ.

25 ಮೀ ಸ್ಪೋರ್ಟ್ಸ್ ಪಿಸ್ತೂಲ್ ವಿಭಾಗದ ಫೈನಲ್‌ನಲ್ಲಿ 8 ಸ್ಪರ್ಧಿಗಳಿದ್ದರು. ಉತ್ತಮ ಪ್ರದರ್ಶನ ನೀಡಿದ ಮನು ಭಾಕರ್‌ ಅಂತಿಮವಾಗಿ 4ನೇ ಸ್ಥಾನ ಪಡೆದರು. ಜಂಟಿಯಾಗಿ 28 ಅಂಕ ಪಡೆದರೂ ಹಂಗೇರಿ ಸ್ಪರ್ಧಿ ಈ ಹಿಂದಿನ ಸುತ್ತಿನಲ್ಲಿ ಮುನ್ನಡೆಯಲ್ಲಿದ್ದ ಕಾರಣ ಮನು ಭಾಕರ್‌ ಅವರ ಮೂರನೇ ಪದಕ ಗೆಲ್ಲುವ ಕನಸು ಭಗ್ನಗೊಂಡಿತು.

22 ವರ್ಷದ ಮನು ಭಾಕರ್‌ ಈ ಒಲಿಂಪಿಕ್ಸ್‌ನಲ್ಲಿ ಮನು 10 ಮೀ ಏರ್ ಪಿಸ್ತೂಲ್ ಮತ್ತು 10 ಮೀ ಏರ್ ಪಿಸ್ತೂಲ್‌ ಮಿಶ್ರ (ಸರಬ್ಜೋತ್‌ಸಿಂಗ್‌ ಜೊತೆಗೂಡಿ) ತಂಡ ವಿಭಾಗಗಳಲ್ಲಿ ಕಂಚಿನ ಪದಕಗಳನ್ನು ಗೆದ್ದಿದ್ದರು.

ಒಂದೇ ಒಲಿಂಪಿಕ್ಸ್‌ ಕೂಟದಲ್ಲಿ ಎರಡು ಪದಕ ಜಯಿಸಿದ ಭಾರತದ ಮೊದಲ ಕ್ರೀಡಾಪಟುವೆಂಬ ಹೆಗ್ಗಳಿಕೆಗೆ ಮನು ಭಾಕರ್‌ ಈಗಾಗಲೇ ಪಾತ್ರರಾಗಿದ್ದಾರೆ.

25 ಮೀ ಏರ್‌ ಪಿಸ್ತೂಲ್ ವಿಭಾಗದ ಸ್ಪರ್ಧೆಯು ಮನು ಭಾಕರ್‌ ಅವರ ಫೇವರೇಟ್‌ ಆಗಿತ್ತು. ಈ ಹಿಂದೆ ನಡೆದ ಅಂತರರಾಷ್ಟ್ರೀಯ ಚಾಂಪಿಯನ್‌ಷಿಪ್‌ಗಳಲ್ಲಿ ಈ ವಿಭಾಗಗಳಲ್ಲಿ ಅವರು  ಪದಕ ಗೆದ್ದು ನಿರೀಕ್ಷೆ ಹೆಚ್ಚಿಸಿದ್ದರು.

Share This Article