Paris Olympics 2024: ಲಕ್ಷ್ಯ ಸೇನ್‌ಗೆ ಸೋಲು – ಕಂಚು ಗೆಲ್ಲುವ ಕನಸು ಭಗ್ನ; ಭಾರತಕ್ಕೆ ಮತ್ತೆ ನಿರಾಸೆ!

Public TV
2 Min Read

ಪ್ಯಾರಿಸ್‌: ಭಾರತದ ಭರವಸೆಯ ಬ್ಯಾಡ್ಮಿಂಟನ್ ಆಟಗಾರ ಲಕ್ಷ್ಯ ಸೇನ್ (Lakshya Sen) ಕಂಚಿನ ಪದಕಕ್ಕಾಗಿ (Bronze Medal) ಸೋಮವಾರ (ಆ.5) ನಡೆದ ಪಂದ್ಯದಲ್ಲಿ ಮಲೇಶಿಯಾದ ಝೀ ಜಿಯಾ ಲೀ ವಿರುದ್ಧ ಸೋತು ಹೊರನಡೆದಿದ್ದಾರೆ.

ಮೂರು ಸೆಟ್‌ಗಳಿಗೆ ನಡೆದ ಪಂದ್ಯದಲ್ಲಿ ಸೇನ್‌ ಹೋರಾಡಿ ಸೋತಿದ್ದಾರೆ. 21-13 ರಿಂದ ಮೊದಲ ಸೆಟ್‌ನಲ್ಲಿ ಗೆದ್ದಿದ್ದ ಲಕ್ಷ್ಯ ಸೇನ್‌ ಮುಂದಿನ 2 ಸೆಟ್‌ಗಳಲ್ಲಿ ಅಂಕಗಳಿಸಲು ವಿಫಲರಾಗಿ ಸೋಲೊಪ್ಪಿಕೊಂಡರು. ಇದನ್ನೂ ಓದಿ: ಬೆಂಗಳೂರಿಗೆ ಮತ್ತೊಂದು ಹೆಮ್ಮೆ – ಶೀಘ್ರದಲ್ಲೇ ಉದ್ಘಾಟನೆಯಾಗಲಿದೆ ಹೊಸ ರಾಷ್ಟ್ರೀಯ ಕ್ರಿಕೆಟ್‌ ಅಕಾಡೆಮಿ

ಲಕ್ಷ್ಯ ಸೇನ್‌ ಅವರ ಮೊಣಕೈ ಗಾಯವು ಅವರ ಹೊಡೆತಗಳಿಗೆ ಬ್ರೇಕ್ ನೀಡಿತು. ಆದ್ರೆ ಮೊದಲ ಸೆಟ್‌ನಲ್ಲಿ ಸೋತಿದ್ದ ಝಿ ಜಿಯಾ ಲೀ (Zii Jia Lee)ಉಳಿದ ಎರಡು ಸೆಟ್‌ಗಳಲ್ಲಿ ಉತ್ತಮ ಆಟ ಪ್ರದರ್ಶಿಸಿದ ಗೆಲುವು ಕಂಡರು. ಸೇನ್‌ ವಿರುದ್ಧ ಜಿಯಾ ಲೀ 16-21, 11-21 ಅಂಕಳಿಂದ 2 ಸೆಟ್‌ಗಳಲ್ಲಿ ಗೆದ್ದು ಕಂಚಿನ ಪದಕ ತಮ್ಮದಾಗಿಸಿಕೊಂಡರು. ಇದನ್ನೂ ಓದಿ: ಒಲಿಂಪಿಕ್ಸ್‌ ಪದಕ ಗೆದ್ದ ಬೆನ್ನಲ್ಲೇ ಮನು ಭಾಕರ್‌ಗೆ ಭರ್ಜರಿ ಆಫರ್‌ – ಬ್ರ್ಯಾಂಡ್‌ ಮೌಲ್ಯ 6 ಪಟ್ಟು ಹೆಚ್ಚಳ

ಕೊನೇ ಸುತ್ತಿನಲ್ಲಿ ಲಕ್ಷ್ಯ ಸೇನ್‌ ಪೈಪೋಟಿ:
ಮೊಣಕೈ ಗಾಯಕ್ಕೆ ತುತ್ತಾದ ಲಕ್ಷ್ಯ ಸೇನ್‌ ಕೊನೇ ಸುತ್ತಿನಲ್ಲಿ ಉತ್ತಮ ಪೈಪೋಟಿ ನೀಡಿದ್ದರು. ಜಿಯಾ ಲೀ 9 ಪಾಯಿಂಟ್‌ ಇದ್ದಾಗ 3 ಅಂಕ ಗಳಿಸಿದ್ದ ಲಕ್ಷ್ಯ ಸೇನ್‌ ಸತತ ಪಾಯಿಂಟ್ಸ್‌ ನೊಂದಿಗೆ 6-10 ಅಂಕಗಳ ವರೆಗೆ ಪೈಪೋಟಿ ನೀಡಿದ್ದರು. ಆದ್ರೆ ಮಿಂಚಿನ ಆಟವಾಡಿದ ಜಿಯಾ ಲೀ, ಸೇನ್‌ಗೆ ಕೊಂಚ ನಿರಾಳವೂ ಕೊಡದೇ ಬ್ಯಾಕ್‌ ಟು ಬ್ಯಾಕ್‌ ಅಂಕ ಗಳಿಸುತ್ತಲೇ ಹೋದರು. ಇದರಿಂದ ಲಕ್ಷ್ಯ ಸೇನ್‌ಗೆ ಸೋಲು ಎದುರಾಯಿತು.

Share This Article