Paris Olympics Javelin Throw: ಮೊದಲ ಎಸೆತದಲ್ಲೇ ನೀರಜ್‌ ಚೋಪ್ರಾ ಫೈನಲ್‌ಗೆ ಜಂಪ್‌

By
1 Min Read

ಪ್ಯಾರಿಸ್: ಹಾಲಿ ಚಾಂಪಿಯನ್ ನೀರಜ್ ಚೋಪ್ರಾ (Neeraj Chopra) ಮೊದಲ ಪ್ರಯತ್ನದಲ್ಲೇ ಪ್ಯಾರಿಸ್ ಒಲಿಂಪಿಕ್ಸ್ (Paris Olympics) ಪುರುಷರ ಜಾವೆಲಿನ್ ಫೈನಲ್‌ಗೆ ಅರ್ಹತೆ ಪಡೆದುಕೊಂಡಿದ್ದಾರೆ.

ಮಂಗಳವಾರ ಪುರುಷರ ಜಾವೆಲಿನ್ ಥ್ರೋ ಅರ್ಹತಾ ಸುತ್ತಿನಲ್ಲಿ 89.34 ಮೀ ಎಸೆದು ನೀರಜ್‌ ಫೈನಲ್‌ಗೆ ಜಂಪ್‌ ಆಗಿದ್ದಾರೆ. ವಿಶ್ವ ಚಾಂಪಿಯನ್ ಮೇನಲ್ಲಿ ನಡೆದ ದೋಹಾ ಡೈಮಂಡ್ ಲೀಗ್‌ನಲ್ಲಿ 88.36 ಮೀ. ಎಸೆದಿದ್ದರು. ಇದನ್ನೂ ಓದಿ: Paris Olympics 2024: ಲಕ್ಷ್ಯ ಸೇನ್‌ಗೆ ಸೋಲು – ಕಂಚು ಗೆಲ್ಲುವ ಕನಸು ಭಗ್ನ; ಭಾರತಕ್ಕೆ ಮತ್ತೆ ನಿರಾಸೆ!

ಟೋಕಿಯೊ ಒಲಿಂಪಿಕ್ಸ್‌ನಲ್ಲಿ 87.58 ಮೀಟರ್‌ ಜಾವೆಲಿನ್‌ ಎಸೆದು ನೀರಜ್‌ ಚಿನ್ನ ಜಯಿಸಿದ್ದರು. ಚಿನ್ನದ ಪದಕವನ್ನು ಇಲ್ಲಿಯೂ ಉಳಿಸಿಕೊಳ್ಳುವ ಛಲದಲ್ಲಿದ್ದಾರೆ.

Share This Article