ಗೋಲ್ಡನ್ ಟೆಂಪಲ್‌ನಲ್ಲಿ ಪಾತ್ರೆ ತೊಳೆದು ಸೇವೆ ಸಲ್ಲಿಸಿದ ರಾಘವ್- ಪರಿಣಿತಿ ಜೋಡಿ

By
1 Min Read

ಬಾಲಿವುಡ್‌ನ (Bollywood) ನಯಾ ಜೋಡಿ ರಾಘವ್ ಚಡ್ಡಾ- ಪರಿಣಿತಿ ಚೋಪ್ರಾ (Parineethi Chopra) ಇತ್ತೀಚಿಗೆ ಅದ್ದೂರಿಯಾಗಿ ಎಂಗೇಜ್‌ಮೆಂಟ್ ಆಗಿದ್ದರು. ನಿಶ್ಚಿತಾರ್ಥದ ಬೆನ್ನಲ್ಲೇ ಈ ಪ್ರೇಮ ಪಕ್ಷಿಗಳು ಕೈ ಕೈ ಹಿಡಿದು ಓಡಾಡಲು ಆರಂಭಿಸಿದ್ರು. ಇದೀಗ ಈ ಜೋಡಿ ಜೊತೆಯಾಗಿ ಅಮೃತಸರ ಗೋಲ್ಡನ್ ಟೆಂಪಲ್‌ಗೆ ಭೇಟಿ ನೀಡಿದ್ದಾರೆ. ಈ ಕುರಿತ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿದೆ. ಇದನ್ನೂ ಓದಿ:‘ಕೃಷ್ಣಂ ಪ್ರಣಯ ಸಖಿ’ಯಾಗಿ ಲವರ್‌ ಬಾಯ್‌ ಲುಕ್‌ನಲ್ಲಿ ಗೋಲ್ಡನ್‌ ಸ್ಟಾರ್‌ ಎಂಟ್ರಿ

ರಾಜಕಾರಣಿ ರಾಘವ್ ಚಡ್ಡಾ (Raghav Chadha) ಜೊತೆ ಪರಿಣಿತಿ ಚೋಪ್ರಾ ಪ್ರೀತಿಸಿ ಇದೀಗ ಹೊಸ ಕಾಲಿಡಲು ಸಜ್ಜಾಗುತ್ತಿದ್ದಾರೆ. ಮೇ 13ರಂದು ಗುರುಹಿರಿಯರ ಸಮ್ಮುಖದಲ್ಲಿ ಎಂಗೇಜ್ಮೆಂಟ್ ಮಾಡಿಕೊಂಡಿದ್ದರು. ಸದ್ಯದಲ್ಲೇ ಹಸೆಮಣೆಗೆ (Wedding) ಏರಲಿದ್ದಾರೆ. ಈ ಬೆನ್ನಲ್ಲೇ ಅಮೃತಸರ ಗೋಲ್ಡನ್ ಟೆಂಪಲ್ (Golden Temple) ಭೇಟಿ ನೀಡಿ, ಅಲ್ಲಿ ಪಾತ್ರೆ ತೊಳೆದು ಸೇವೆ ಸಲ್ಲಿಸಿದ್ದಾರೆ.

 

View this post on Instagram

 

A post shared by Viral Bhayani (@viralbhayani)

ಮದುವೆಗೂ ಮೊದಲು ಪರಿಣಿತಿ ಮತ್ತು ರಾಘವ್ ಚಡ್ಡಾ ದೇವಸ್ಥಾನಕ್ಕೆ ಭೇಟಿ ನೀಡಿ ದೇವರ ಆಶೀರ್ವಾದ ಪಡೆಯುತ್ತಿದ್ದಾರೆ. ಸದ್ಯ ವೈರಲ್ ಆಗಿರುವ ಹೊಸ ವಿಡಿಯೋದಲ್ಲಿ ಪರಿಣೀತಿ ಮತ್ತು ರಾಘವ್ ಇಬ್ಬರೂ ಪಾತ್ರೆಗಳನ್ನು ತೊಳೆಯುತ್ತಿದ್ದಾರೆ. ದೇವಸ್ಥಾನದಲ್ಲಿ ಪಾತ್ರೆ ತೊಳೆಯುವ ಸೇವೆ ಸಲ್ಲಿಸಿದ್ದಾರೆ. ಭಕ್ತರ ಜೊತೆ ಸೇರಿ ರಾಘವ್ ಮತ್ತು ಪರಿಣಿತಿ ಕೂಡ ಪಾತ್ರ ತೊಳೆಯುತ್ತಿದ್ದಾರೆ. ಇಬ್ಬರೂ ಬಿಳಿ ಬಣ್ಣದ ಬಟ್ಟೆ ಧರಿಸಿದ್ದಾರೆ. ಇಬ್ಬರ ವಿಡಿಯೋಗೆ ಅಭಿಮಾನಿಗಳಿಂದ ಭಾರಿ ಮೆಚ್ಚುಗೆ ವ್ಯಕ್ತವಾಗಿದೆ.

ನೆಟ್ಟಿಗರು ರಾಘವ್ ಮತ್ತು ಪರಿಣಿತಿ ಜೋಡಿಯನ್ನು ಹೊಗಳುತ್ತಿದ್ದಾರೆ. ಡೌನ್ ಟು ಅರ್ಥ್ ಜೋಡಿ ಎಂದು ಹೇಳುತ್ತಿದ್ದಾರೆ. ಇನ್ನು ಅನೇಕರು ಹಾರ್ಟ್ ಇಮೋಜಿ ಇರಿಸಿ ಪ್ರೀತಿ ವ್ಯಕ್ತಪಡಿಸುತ್ತಿದ್ದಾರೆ.

Share This Article
ಮಳೆಗಾಲದಲ್ಲಿ ಪಡ್ಡೆಗಳ ಮೈಚಳಿ ಬಿಡಿಸಿದ ತಮನ್ನಾ ಹಾಟ್‌ ಲುಕ್‌ ಯೋಗ ದಿನದಂದು ನಟಿ ಪ್ರಣಿತಾ ಯೋಗ… ಬಿಕಿನಿ ಬಿಟ್ಟು ಸೀರೆ ಉಟ್ಟ ನಟಿ ದಿವ್ಯಾ ಭಾರತಿ!.. ಶೋಲ್ಡರ್‌ಲೆಸ್ ಡ್ರೆಸ್‌ನಲ್ಲಿ ಪಟಾಕಿ ಪೋರಿ ಮಿಂಚಿಂಗ್ ಶಾರ್ಟ್ ಡ್ರೆಸ್‌ನಲ್ಲಿ ‘ಕಾಟೇರ’ ನಟಿ ಮಿಂಚಿಂಗ್ ನವಿಲಿನಂತೆ ಕಂಗೊಳಿಸಿದ ಮಲೈಕಾ ಚೈತ್ರಾ ಲುಕ್‌ಗೆ ಫ್ಯಾನ್ಸ್‌ ಫಿದಾ ಡಿಫರೆಂಟ್ ಆಗಿ ಸೀರೆಯುಟ್ಟ ಸ್ಯಾಮ್ ಬೋಲ್ಡ್ ಅವತಾರ ತಾಳಿದ ಚೈತ್ರಾ ಆಚಾರ್ ಡೆನಿಮ್ ಡ್ರೆಸ್‌ನಲ್ಲಿ ದೀಪಿಕಾ ಫೋಟೋಶೂಟ್