ನಟಿ ಪರಿಣಿತಿ ಚೋಪ್ರಾ ಹಾಗೂ ಎಂಪಿ ರಾಘವ ಛಡ್ಡಾ ದಂಪತಿಗೆ ಗಂಡು ಮಗು ಜನಿಸಿ ತಿಂಗಳು ಉರುಳಿದೆ. ಇದೀಗ ಮಗನ ಹೆಸರನ್ನ ದಂಪತಿ ಸೋಶಿಯಲ್ ಮೀಡಿಯಾ ಮೂಲಕ ಅನೌನ್ಸ್ ಮಾಡಿದ್ದಾರೆ. ಮಗುವಿಗೆ ನೀರ್ ಎಂದು ಹೆಸರಿಟ್ಟಿರೋದಾಗಿ ಬಹಿರಂಗಪಡಿಸಿದ್ದಾರೆ.
ಮಗನ ಕಾಲಿಗೆ ಮುತ್ತಿಡುವ ಫೋಟೋ ಜೊತೆ ಮಗನ ಹೆಸರನ್ನ ರಿವೀಲ್ ಮಾಡಿರುವ ಪರಿಣಿತಿ ದಂಪತಿ ನೀರ್ ಹೆಸರಿನ ಅರ್ಥವನ್ನೂ ಹೇಳಿದ್ದಾರೆ. ನೀರ್ ಹೆಸರಿನ ಅರ್ಥ ಪರಿಶುದ್ಧ, ಅಪರಿಮಿತ ಎಂಬ ಪದದ ಸ್ವರೂಪವಾಗಿ ಎಂದು ವಿವರಣೆ ನೀಡಿದ್ದಾರೆ.
ಮಗು ಜನಿಸಿದ ನಾಲ್ಕು ವಾರಗಳ ಬಳಿಕ ದಂಪತಿ ಮಗುವಿನ ಹೆಸರನ್ನು ಅಧಿಕೃತವಾಗಿ ಘೋಷಿಸಿದ್ದು, ಇದುವರೆಗೂ ಮಗುವಿನ ಮುಖವನ್ನ ರಿವೀಲ್ ಮಾಡಿಲ್ಲ. ಮದುವೆಯಾದ ಬಳಿಕ ಸಿನಿಮಾದಿಂದಲೂ ಬ್ರೇಕ್ ಪಡೆದ ಪರಿಣಿತಿ ಚೋಪ್ರಾ ಇದೀಗ ಮಗುವಿನ ಲಾಲನೆ ಪಾಲನೆಯಲ್ಲಿ ಬ್ಯುಸಿ ಇದ್ದಾರೆ.

