ಬಾಲಿವುಡ್ ನಟಿ ಪರಿಣಿತಿ ಚೋಪ್ರಾ (Parineeti Chopra) ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಇದೀಗ ಪರಿಣಿತಿ ಗರ್ಭಿಣಿಯಾಗಿದ್ದು ಇನ್ಸ್‌ಸ್ಟಾಗ್ರಾಂನಲ್ಲಿ (Instagram) ಅಧಿಕೃತ ಘೋಷಣೆ ಮಾಡಿದ್ದಾರೆ. 1+ 1 = 3 ಎಂಬ ಬರಹದಲ್ಲಿ ಪುಟ್ಟ ಪಾದಗಳ ಚಿತ್ರ ತೋರಿಸಿದ್ದಾರೆ. ನಮ್ಮ ಪುಟ್ಟ ಜಗತ್ತು ಬರುತ್ತಿದೆ ಎಂದು ಮಗುವಿನ ನಿರೀಕ್ಷೆಯಲ್ಲಿರುವ ಸುದ್ದಿಯನ್ನು ವಿಭಿನ್ನವಾಗಿ ನೀಡಿದ್ದಾರೆ ಬಾಲಿವುಡ್ ನಟಿ.ಇದನ್ನೂ ಓದಿ: ಅಂಗವಿಕಲರ ಬಗ್ಗೆ ತಮಾಷೆ – ಸ್ಟ್ಯಾಂಡ್ ಅಪ್ ಕಾಮಿಡಿಯನ್‌ಗಳಿಗೆ ಸುಪ್ರೀಂ ತರಾಟೆ
ರಾಜ್ಯಸಭಾ ಸದಸ್ಯ ರಾಘವ್ ಚಡ್ಡಾರನ್ನು (Raghav Chadha) ನಟಿ ಪರಿಣಿತಿ ಚೋಪ್ರಾ 2023ರಲ್ಲಿ ವಿವಾಹವಾಗಿದ್ದರು. ಬಳಿಕ ಸಿನಿಮಾ ನಟನೆಯಿಂದ ದೂರವೇ ಉಳಿದಿದ್ದರು ಪರಿಣಿತಿ. ಮದುವೆ ಬಳಿಕ ಪರಿಣಿತಿ ತೂಕ ಹೆಚ್ಚಿಸಿಕೊಂಡಾಗ ಗರ್ಭಿಣಿ ಎಂದು ವದಂತಿ ಹಬ್ಬುತ್ತಿದ್ದ ವೇಳೆ ಪರಿಣಿತಿ ಖಾರವಾಗಿ ಉತ್ತರ ಕೊಟ್ಟಿದ್ದನ್ನ ಇಲ್ಲಿ ನೆನೆಯಬಹುದು. `ಗರ್ಭಿಣಿಯಾದಾಗ ಖಂಡಿತ ಹೇಳ್ತೀನಿ, ದಪ್ಪಗಾದ ಮಾತ್ರಕ್ಕೆ, ಅಗಲ ಬಟ್ಟೆ ಧರಿಸಿದ ಮಾತ್ರ ಗರ್ಭಿಣಿ ಎಂದು ಜಡ್ಜ್ ಮಾಡಬೇಡಿ’ ಎಂದಿದ್ದರು. ಇದೀಗ ಕೊನೆಗೂ ತಾವು ಗರ್ಭಿಣಿಯಾಗಿರುವ ಸುದ್ದಿ ಕೊಟ್ಟಿದ್ದಾರೆ ಪರಿಣಿತಿ ಚೋಪ್ರಾ.
ಅಂದಹಾಗೆ ಪರಿಣಿತಿಗೆ ಈಗೆಷ್ಟು ತಿಂಗಳು..? ಯಾವಾಗ ಮಗು ನಿರೀಕ್ಷಿಸಬಹುದು ಎಂಬ ಪ್ರಶ್ನೆಗಳಿಗೆ ಇನ್ನೂ ಉತ್ತರ ಸಿಕ್ಕಿಲ್ಲ. ಇತ್ತೀಚೆಗೆ ಪತಿ ಜೊತೆ ವೆಕೇಷನ್‌ಗೆ ತೆರಳಿದ್ದ ಫೋಟೋಗಳನ್ನ ಇನ್ಸ್‌ಸ್ಟಾಗ್ರಾಂನಲ್ಲಿ ಪರಿಣಿತಿ ಪೋಸ್ಟ್ ಮಾಡ್ದಾಗೆಲ್ಲ ಪರಿಣಿತಿಗೆ ಇದೇ ಪ್ರಶ್ನೆ ಎದುರಾಗಿತ್ತು. ಇದೀಗ ಚೊಚ್ಚಲ ಮಗುವಿನ ನಿರೀಕ್ಷೆಯಲ್ಲಿರುವ ಸುದ್ದಿಯನ್ನ ಅಧಿಕೃತವಾಗಿ ಅಭಿಮಾನಿಗಳ ಜೊತೆ ಹಂಚಿಕೊಂಡಿದ್ದಾರೆ. ಇನ್ನು ನಟಿಯರಾದ ಪ್ರಿಯಾಂಕಾ ಚೋಪ್ರಾ, ಕತ್ರೀನಾ ಕೈಫ್, ಸೋನಂ ಕಪೂರ್, ಸೇರಿದಂತೆ ಹಲವರು ಇನ್ಸ್‌ಸ್ಟಾಗ್ರಾಂನಲ್ಲಿನಲ್ಲೇ ಶುಭಾಶಯ ಕೋರಿದ್ದಾರೆ. ಅಂದಹಾಗೆ ಪರಿಣಿತಿ ಚೋಪ್ರಾ ಖ್ಯಾತ ನಟಿ ಪ್ರಿಯಾಂಕ ಚೋಪ್ರಾಗೆ ಸಂಬಂಧದಲ್ಲಿ ಸಹೋದರಿ ಆಗಬೇಕು.ಇದನ್ನೂ ಓದಿ: ಮಾತಾಡೋರು ಮಾತಾಡಲಿ, ಸೂಕ್ತ ವೇದಿಕೆಯಲ್ಲಿ ನಾನು ಮಾತಾಡ್ತೀನಿ: ಬಾನು ಮುಷ್ತಾಕ್