Pariksha Pe Charcha 2023: ಪೋಷಕರು ಮಕ್ಕಳಿಗೆ ಒತ್ತಡ ಹಾಕಬೇಡಿ – ವಿದ್ಯಾರ್ಥಿಗಳು ತಾಯಿಯಿಂದ ಸಮಯದ ನಿರ್ವಹಣೆ ಕಲಿಯಿರಿ: ಮೋದಿ

Public TV
4 Min Read

– ಪರೀಕ್ಷೆಯಲ್ಲಿ ನಕಲು ಮಾಡಿ ಬದುಕು ಕಟ್ಟಿಕೊಳ್ಳಲು ಸಾಧ್ಯವಿಲ್ಲ

ನವದೆಹಲಿ: ಪೋಷಕರು (Parents) ಮಕ್ಕಳಿಗೆ (Childrens) ಹೆಚ್ಚು ಒತ್ತಡ ಹಾಕಬಾರದು. ಪೋಷಕರು ಒತ್ತಡ ಹಾಕದಿದ್ದರೂ ವಿದ್ಯಾರ್ಥಿಗಳು (Students) ತಮ್ಮ ಸಾಮರ್ಥ್ಯಕ್ಕೆ ಅನುಗುಣವಾಗಿ ಕಲಿಕೆಯಲ್ಲಿ ಮುನ್ನುಗ್ಗಿ ಯಾವತ್ತು ಧೈರ್ಯ ಕಳೆದುಕೊಳ್ಳಬೇಡಿ. ಓದನ್ನು ಕಡೆಗಣಿಸಬೇಡಿ ಎಂದು ಪ್ರಧಾನಿ ನರೇಂದ್ರ ಮೋದಿ (Narendra Modi) ವಿದ್ಯಾರ್ಥಿಗಳಿಗೆ ಸಲಹೆ ನೀಡಿದ್ದಾರೆ.

ಆರನೇ ಆವೃತ್ತಿಯ ಪರೀಕ್ಷಾ ಪೇ ಚರ್ಚಾ (Pariksha Pe Charcha 2023) ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ವಿದ್ಯಾರ್ಥಿಗಳು, ಪೋಷಕರು ಮತ್ತು ಶಿಕ್ಷಕರ ಜೊತೆಗೆ ಸಂವಾದ ನಡೆಸಿ ಹಲವು ಸಲಹೆಗಳನ್ನು ನೀಡಿದರು. ದೆಹಲಿಯ ಟಾಲ್ಕಟೋರಾ ಒಳಾಂಗಣ ಕ್ರೀಡಾಂಗಣದಲ್ಲಿ ಕಾರ್ಯಕ್ರಮ ನಡೆಯಿತು. ಈ ವೇಳೆ ಮಾತನಾಡಿದ ಮೋದಿ, ಒಂದೋ, ಎರಡೋ ಪರೀಕ್ಷೆಯಲ್ಲಿ ನಕಲು (Copy) ಮಾಡಿ ಬದುಕು ಕಟ್ಟಿಕೊಳ್ಳಲು ಸಾಧ್ಯವಿಲ್ಲ. ನಕಲು ಮಾಡುತ್ತಾ ಮುಂದೆ ಹೋದರೂ ಮುಂದೆ ಜೀವನದಲ್ಲಿ ಸಿಕ್ಕಿಹಾಕಿಕೊಳ್ಳುವಂತಹ ವಾತಾವರಣ ನಿರ್ಮಾಣವಾಗುತ್ತೆ ಯಾರಾದರೂ ಮೋಸ ಮಾಡಿ ನಿಮಗಿಂತ ಸ್ವಲ್ಪ ಹೆಚ್ಚು ಅಂಕ ಪಡೆದರೂ ಅದು ನಿಮಗೆ ಜೀವನದಲ್ಲಿ ಅಡ್ಡಿಯಾಗಲಾರದು ನಿಮ್ಮ ಆಂತರಿಕ ಶಕ್ತಿಯನ್ನು ನಂಬಿ ಎಂದು ಸಲಹೆ ನೀಡಿದರು. ಇದನ್ನೂ ಓದಿ: ಯೋಗ್ಯತೆ ಮೀರಿ ನನಗೆ ಕೇಂದ್ರ ಸರ್ಕಾರ ಗೌರವ ನೀಡಿದೆ: ಎಸ್.ಎಂ.ಕೃಷ್ಣ

ಪೋಷಕರು ತಮ್ಮ ಮಕ್ಕಳಿಂದ ಹೆಚ್ಚಿನ ನಿರೀಕ್ಷೆ ಇಟ್ಟುಕೊಂಡಿರುತ್ತಾರೆ ಇಂತಹ ಪರಿಸ್ಥಿತಿಯಲ್ಲಿ ವಿದ್ಯಾರ್ಥಿಗಳು ಒತ್ತಡಗಳಿಗೆ ಮಣಿಯಬೇಕೇ? ಎಂಬ ಪ್ರಶ್ನೆಗೆ ಉತ್ತರಿಸಿದ ಪ್ರಧಾನಿ, ಕ್ರಿಕೆಟ್‍ನಲ್ಲಿ (Cricket) ಜನರು ಕ್ರೀಡಾಂಗಣದಲ್ಲಿ ಬೌಂಡರಿ, ಸಿಕ್ಸರ್ ಬೇಕು ಅಂತ ಕೂಗುತ್ತಲೇ ಇರುತ್ತಾರೆ, ಪ್ರೇಕ್ಷಕರ ಬೇಡಿಕೆಯ ಮೇರೆಗೆ ಆಟಗಾರನು ಬೌಂಡರಿ ಮತ್ತು ಸಿಕ್ಸರ್‌ಗಳನ್ನು ಬಾರಿಸುತ್ತಾನಾ? ಆಟಗಾರನು ಚೆಂಡಿನ ಮೇಲೆ ಮಾತ್ರ ಕೇಂದ್ರೀಕರಿಸುತ್ತಾನೆ ಹಾಗೆಯೇ ಪರೀಕ್ಷೆಗಳನ್ನು ವಿದ್ಯಾರ್ಥಿಗಳು ನಿಭಾಯಿಸಬೇಕು ಎಂದರು.

ನಮ್ಮ ಇಷ್ಟದ ವಿಷಯಗಳಲ್ಲಿ ಹೆಚ್ಚಿನ ಸಮಯವನ್ನು ಕಳೆಯುತ್ತೇವೆ ಅಂತಹ ಪರಿಸ್ಥಿತಿಯಲ್ಲಿ ಕಷ್ಟಕರವಾದ ವಿಷಯಕ್ಕೆ ಒತ್ತು ನೀಡಬೇಕು ಅದರ ನಂತರ ಹೆಚ್ಚು ಇಷ್ಟವಾದ ವಿಷಯವನ್ನು ಓದಬೇಕು. ಇಷ್ಟ ಮತ್ತು ಇಷ್ಟಪಡದಿರುವ ವಿಷಯಗಳಿಗೆ ಒಂದರ ನಂತರ ಒಂದರಂತೆ ಸಮಯ ನೀಡಿ. ತಾಯಿಯಿಂದ ಸಮಯ ನಿರ್ವಹಣೆ ಕಲಿಯಿರಿ, ತಾಯಿಯು ದಿನದ ಕೆಲಸವನ್ನು ಅತ್ಯುತ್ತಮ ರೀತಿಯಲ್ಲಿ ನಿರ್ವಹಿಸುತ್ತಾಳೆ ತಾಯಿಗೆ ಗರಿಷ್ಠ ಕೆಲಸವಿದೆ, ಸಮಯ ನಿರ್ವಹಣೆಯಿಂದ ಕೆಲಸ ನಿರ್ವಹಿಸುತ್ತಾರೆ ಪ್ರತಿ ಕೆಲಸವನ್ನು ತಾಯಿ ಸಮಯಕ್ಕೆ ಸರಿಯಾಗಿ ಮಾಡುತ್ತಾಳೆ ಹಾಗಯೇ ವಿದ್ಯಾರ್ಥಿಗಳು ಸಮಯದ ನಿರ್ವಹಣೆ ಮಾಡಬೇಕು ಎಂದು ಸಲಹೆ ನೀಡಿದರು. ಇದನ್ನೂ ಓದಿ: BBC Modi V/s The Kashmir Filesː ಎಸ್‌ಎಫ್‌ಐ, ಎಬಿವಿಪಿ ವಿದ್ಯಾರ್ಥಿಗಳ ನಡುವೆ ತಾರಕಕ್ಕೇರಿದ ಸಂಘರ್ಷ

ಇದೇ ವೇಳೆ ಪರೀಕ್ಷೆಯಲ್ಲಿ ನಕಲು ತಪ್ಪಿಸುವ ಕುರಿತಾಗಿ ಮಾತನಾಡಿದ ಅವರು, ಟ್ಯೂಷನ್ ಕಲಿಸುವ ಕೆಲವು ಶಿಕ್ಷಕರಿದ್ದಾರೆ ಅವರು ತಮ್ಮ ವಿದ್ಯಾರ್ಥಿಗಳು ಉತ್ತಮ ಅಂಕಗಳನ್ನು ಪಡೆಯಬೇಕೆಂದು ಬಯಸುತ್ತಾರೆ. ಆದ್ದರಿಂದ ಅವರು ಮೋಸವನ್ನು ಪ್ರೋತ್ಸಾಹಿಸುತ್ತಾರೆ. ವಿದ್ಯಾರ್ಥಿಗಳು ನಕಲು ಮಾಡಲು ಸೃಜನಶೀಲತಾಗಿರುತ್ತಾರೆ. ಆ ಸೃಜನಶೀಲತೆಯನ್ನು ಅಧ್ಯಯನಕ್ಕೆ ತೋರಿಸಿದರೆ, ನಕಲು ಮಾಡುವ ಅಗತ್ಯವಿಲ್ಲ ಎಂದು ಅಭಿಪ್ರಾಯಪಟ್ಟರು.

ಸ್ಮಾರ್ಟ್ ವರ್ಕ್ ಮತ್ತು ಹಾರ್ಡ್ ವರ್ಕ್ ನಡುವೆ ಯಾವುದನ್ನು ಆಯ್ಕೆ ಮಾಡಬೇಕು? ಎನ್ನುವ ಪ್ರಶ್ನೆಗೆ ಉತ್ತರಿಸಿದ ನರೇಂದ್ರ ಮೋದಿ, ಬಾಯಾರಿದ ಕಾಗೆಯ ಕಥೆಯನ್ನು ನೀವೆಲ್ಲರೂ ಕೇಳಿರಬೇಕು, ಅದರಲ್ಲಿ ಕಾಗೆಯು ಕಲ್ಲುಹಾಕಿ ನೀರು ಕುಡಿಯುತ್ತದೆ ಇದು ಕಾಗೆಯ ಹಾರ್ಡ್ ವರ್ಕ್ ಅಥವಾ ಸ್ಮಾರ್ಟ್ ವರ್ಕ್? ಕೆಲವರು ಹಾರ್ಡ್‍ಲಿ ಸ್ಮಾರ್ಟ್ ವರ್ಕ್ ಮಾಡಿದರೆ ಕೆಲವರು ಸ್ಮಾರ್ಟ್‍ಲಿ ಹಾರ್ಡ್ ವರ್ಕ್ ಮಾಡುತ್ತಾರೆ ಕಾಗೆಗಳಿಂದ ನಾವು ಕಲಿಯಬೇಕಾದುದು ಇದನ್ನೇ. ಒಮ್ಮೆ ಕಾರು ಕೆಟ್ಟು ನಿಂತಿತ್ತು ಗಂಟೆಗಟ್ಟಲೆ ತಳ್ಳಿದರೂ ವಾಹನ ಸ್ಟಾರ್ಟ್ ಆಗಲಿಲ್ಲ 2 ನಿಮಿಷದಲ್ಲಿ ಕಾರನ್ನು ಮೆಕಾನಿಕ್ ಸರಿಪಡಿಸಿದ ಕಾರು ಸರಿಪಡಿಸಿ ಮೆಕಾನಿಕ್ 200 ರೂ.ಗೆ ಬೇಡಿಕೆ ಇಟ್ಟ 2 ನಿಮಿಷದ ಕೆಲಸಕ್ಕೆ 200 ರೂಪಾಯಿ ಏಕೆ ಕೊಡಬೇಕು ಎಂದು ಪ್ರಶ್ನಿಸಿದರು ಅದಕ್ಕೆ 200 ರೂ. 2 ನಿಮಿಷಕ್ಕೆ ಅಲ್ಲ 20 ವರ್ಷಗಳ ಅನುಭವಕ್ಕೆ ಎಂದು ಮೆಕ್ಯಾನಿಕ್ ಹೇಳಿದ ಎಂದು ಉದಾಹರಣೆ ನೀಡಿದರು.

ವಿದ್ಯಾರ್ಥಿಯೊಬ್ಬ ವಿರೋಧ ಪಕ್ಷದವರ ಟೀಕೆ ಬಗ್ಗೆ ಪ್ರಶ್ನಿಸಿದಾಗ ಅದು ಔಟ್ ಆಫ್ ಸಿಲಬಸ್ ಪ್ರಶ್ನೆ ಇದ್ದಂತೆ ಎಂದು ಉತ್ತರಿಸಿದರು. ಪರೀಕ್ಷೆಯನ್ನು ಧೈರ್ಯದಿಂದ ಎದುರಿಸಿ. ನಮ್ಮ ಸಾಮರ್ಥ್ಯದ ಬಗ್ಗೆ ನಮಗೆ ನಂಬಿಕೆ ಇರಲಿ ಎಂದು ಸಲಹೆ ನೀಡಿದರು. ಇದನ್ನೂ ಓದಿ: Australian Open 2023: ಫೈನಲ್‍ನಲ್ಲಿ ಸೋತ ಬೋಪಣ್ಣ, ಸಾನಿಯಾ ಜೋಡಿ – ರನ್ನರ್ ಅಪ್ ಕಿರೀಟದೊಂದಿಗೆ ಗ್ರ್ಯಾಂಡ್‍ ಸ್ಲಾಮ್‍ಗೆ ಗುಡ್‍ಬೈ

ಈ ಬಾರಿಯ ಪರೀಕ್ಷಾ ಪೇ ಚರ್ಚೆಯಲ್ಲಿ 31.24 ಲಕ್ಷ ವಿದ್ಯಾರ್ಥಿಗಳು, 5.60 ಲಕ್ಷ ಶಿಕ್ಷಕರು ಮತ್ತು 1.95 ಲಕ್ಷ ಪೋಷಕರು ಸೇರಿದಂತೆ ಒಟ್ಟು 38.80 ಲಕ್ಷ ವಿದ್ಯಾರ್ಥಿಗಳು ನೋಂದಾಯಿಸಿಕೊಂಡಿದ್ದರು. ಕಳೆದ ವರ್ಷ, ಸುಮಾರು 15.7 ಲಕ್ಷ ವಿದ್ಯಾರ್ಥಿಗಳು ನೋಂದಾಯಿಸಿಕೊಂಡಿದ್ದರು.

ಸಮಾರಂಭದಲ್ಲಿ, ಪ್ರಧಾನಿ ಮೋದಿ ಅವರು ಪರೀಕ್ಷೆಯ ಒತ್ತಡವನ್ನು ನಿವಾರಿಸಲು ಮತ್ತು ಶಿಕ್ಷಣ ಮತ್ತು ವೃತ್ತಿಗೆ ಸಂಬಂಧಿಸಿದ ಅವರ ಪ್ರಶ್ನೆಗಳಿಗೆ ಉತ್ತರಿಸಿ ವಿದ್ಯಾರ್ಥಿಗಳೊಂದಿಗೆ ಸಲಹೆಗಳನ್ನು ಹಂಚಿಕೊಂಡರು.

Live Tv
[brid partner=56869869 player=32851 video=960834 autoplay=true]

Join our Whatsapp group by clicking the below link
https://chat.whatsapp.com/E6YVEDajTzH06LOh77r25k

Share This Article
Leave a Comment

Leave a Reply

Your email address will not be published. Required fields are marked *