ಕಾರವಾರ: ಕಾಣೆಯಾಗಿದ್ದ ಶಿರಸಿಯ (Sirsi) ಇಬ್ಬರು ಮಕ್ಕಳು ಮುಂಬೈನಲ್ಲಿ (Mumbai) ಪತ್ತೆಯಾಗಿದ್ದಾರೆ.
ಶಿರಸಿ ಪೊಲೀಸರ(Police) ನಿರಂತರ ಕಾರ್ಯಾಚರಣೆಯಿಂದ ನಾಪತ್ತೆಯಾಗಿದ್ದ ಕಸ್ತೂರ್ಬಾ ನಗರದ ನಿವಾಸಿಗಳಾದ ಶ್ರೀಶಾ (13), ಪರಿಧಿ(10) ಈಗ ಪತ್ತೆಯಾಗಿದ್ದಾರೆ.
ಪರೀಕ್ಷೆಯಲ್ಲಿ ಕಡಿಮೆ ಅಂಕಗಳಿಸಿದಕ್ಕೆ ಓದುವಂತೆ ಪೋಷಕರು ಒತ್ತಾಯಿಸಿದ್ದಕ್ಕೆ ಇಬ್ಬರು ಆ.16 ರಂದು ಕಾಣೆಯಾಗಿದ್ದರು. ಶಿರಸಿಯಿಂದ- ಹುಬ್ಬಳ್ಳಿಗೆ ತೆರಳಿ ಅಲ್ಲಿಂದ ಪುಣೆಗೆ ತೆರಳಿ ಅಲ್ಲಿಂದ ಮುಂಬೈಗೆ ತೆರಳಿದ್ದರು. ಮಕ್ಕಳು ಬಸ್ಸಿನಲ್ಲಿ ಪ್ರಯಾಣಿಸಿದ ದೃಶ್ಯಗಳು ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದವು. ಇದನ್ನೂ ಓದಿ: ನೇಣು ಬಿಗಿದ ಸ್ಥಿತಿಯಲ್ಲಿ ಪತ್ನಿ ಶವ ಪತ್ತೆ – ಪತಿ ವಿರುದ್ಧ ಕೊಲೆ ಆರೋಪ
ಈ ದೃಶ್ಯ ಆಧಾರಿಸಿ ಶಿರಸಿ ಪೊಲೀಸರು ಮುಂಬೈ ಪೊಲೀಸರಿಗೆ ತಿಳಿಸಿದ್ದರು. ಮುಂಬೈನಲ್ಲಿ ಇಳಿದ ಮಕ್ಕಳು ಶಿರಡಿಗೆ ಹೋಗಬೇಕೆಂದು ಸಾರ್ವಜನಿಕರಲ್ಲಿ ಹಣ ಕೇಳುತ್ತಿದ್ದರು.
ಅನುಮಾನಗೊಂಡ ಸ್ಥಳಿಯ ಪೊಲೀಸರು ಪೊಲೀಸ್ ಠಾಣೆಗೆ ಕರೆದೊಯ್ದಿದ್ದಾರೆ. ಎಲ್ಲಿಂದ ಬಂದಿರುವುದು ಎಂದು ಮಕ್ಕಳಿಗೆ ವಿಚಾರಿಸಿದಾಗ ಶಿರಸಿ ಎಂದು ಹೇಳಿದ್ದಾರೆ. ಕೂಡಲೇ ಈ ವಿಚಾರವನ್ನು ಶಿರಸಿ ಪೊಲೀಸರಿಗೆ ಮುಂಬೈ ಪೊಲೀಸರು ತಿಳಿಸಿದ್ದಾರೆ.
ಸದ್ಯ ಮಕ್ಕಳು ಮುಂಬೈಯಿಂದ ಶಿರಸಿ ಕಡೆ ಬರುತ್ತಿದ್ದಾರೆ. ಮಕ್ಕಳ ಶೋಧಕ್ಕಾಗಿ ಉತ್ತರ ಕನ್ನಡ ಎಸ್ಪಿ ಎಂ.ಎನ್.ದೀಪನ್ ಆರು ತಂಡ ಮಾಡಿದ್ದರು.