ಪರಶುರಾಮ ಮೂರ್ತಿ ಫೈಬರ್ ಅಲ್ಲ ಕಂಚು- ಬಿಜೆಪಿಯಿಂದ ವೀಡಿಯೋ ಬಿಡುಗಡೆ

Public TV
1 Min Read

ಉಡುಪಿ: ಜಿಲ್ಲೆಯ ಕಾರ್ಕಳ ತಾಲೂಕಿನ ಬೈಲೂರಿನ ಪರಶುರಾಮ ಥೀಂ ಪಾರ್ಕ್ (Prashurama Theame Park) ಪ್ರತಿದಿನ ಸುದ್ದಿಯಲ್ಲಿದೆ.

33 ಅಡಿ ಎತ್ತರದ ಪ್ರತಿಮೆ ಕಂಚಿನದ್ದಲ್ಲ ಫೈಬರ್ (Fiber Statue) ಎಂಬುದು ಕಾಂಗ್ರೆಸ್ ಆರೋಪ ಮಾಡಿದೆ. ರಟ್ಟು ಫೈಬರ್ ನಿಂದ ಮೂರ್ತಿ ನಿರ್ಮಾಣ ಮಾಡಿದ್ದಾರೆ ಎಂದು ಕಾಂಗ್ರೆಸ್ ನಿರಂತರವಾಗಿ ಆರೋಪ ಪ್ರತಿಭಟನೆ ಮಾಡುತ್ತಿದೆ. ಈ ಬಗ್ಗೆ ಒಂದು ವೀಡಿಯೋ ಕೂಡ ಬಿಡುಗಡೆ ಮಾಡಿತ್ತು.

ಕಾಂಗ್ರೆಸ್ ಆರೋಪದ ಬೆನ್ನಲ್ಲೇ ಇದೀಗ ಬಿಜೆಪಿ ಕಾರ್ಯಕರ್ತರು, ಕ್ಷೇತ್ರ ಅಧ್ಯಕ್ಷರು ವೀಡಿಯೋ ಬಿಟ್ಟಿದ್ದಾರೆ. ಇದು ಕಂಚಿನ ಪ್ರತಿಮೆ ಎಂದು ಸಾಬೀತು ಮಾಡಿದ್ದಾರೆ. 15 ರಿಂದ 20 ಬಿಜೆಪಿ ಕಾರ್ಯಕರ್ತರು ತೆರವು ಮಾಡದೆ ಅರ್ಧ ಉಳಿಸಿರುವ ಮೂರ್ತಿಯನ್ನು ಪರೀಕ್ಷಿಸಿ, ಸುತ್ತಿಗೆಯಲ್ಲಿ ಬಡಿದು ಪರೀಕ್ಷಿಸಿ ಕಂಚು ಎಂದು ಸಾಬೀತು ಮಾಡಿದ್ದಾರೆ. ಕಾಂಗ್ರೆಸ್ ಕೆಟ್ಟ ರಾಜಕೀಯ ಮಾಡುತ್ತಿದೆ ಎಂದು ತಿರುಗೇಟು ನೀಡಿದ್ದಾರೆ. ಇದನ್ನೂ ಓದಿ: ಥೀಂ ಪಾರ್ಕ್‌ನಲ್ಲಿ ತಲೆ ಎತ್ತಿದ್ದ ಪರಶುರಾಮನ ಪ್ರತಿಮೆ ರಾತ್ರೋರಾತ್ರಿ ಮಾಯ!

ಕಾಂಗ್ರೆಸ್ ಆರೋಪ: ಥೀಮ್ ಪಾರ್ಕ್ ವಿಚಾರದಲ್ಲಿ ಕಾಂಗ್ರೆಸ್ (Congress) ಕಾರ್ಯಕರ್ತರು ನಾಯಕರು ಮಾಜಿ ಸಚಿವ, ಕಾರ್ಕಳ ಶಾಸಕ ಸುನೀಲ್ ಕುಮಾರ್ ಬೆನ್ನುಬಿದ್ದಿದ್ದಾರೆ. ಕಂಚಿನ ಪ್ರತಿಮೆಗೆ ಬದಲಾಗಿ, ಭಾಗಶಃ ಫೈಬರ್ ಅಳವಡಿಸುವ ಮೂಲಕ ಸುಳ್ಳು ಹೇಳಿ ಜನರನ್ನ ವಂಚಿಸಲಾಗಿದೆ ಎಂದು ಕಾಂಗ್ರೆಸ್ ಆರೋಪ ಮಾಡುತ್ತಾ ಬಂದಿತ್ತು. ಪರಶುರಾಮ ಪ್ರತಿಮೆಯ ಭಾಗಶಃ ತೆರವುಗೊಳಿಸಲಾಗಿದೆ.

ಗುರುವಾರ ವಿಧಾನಪರಿಷತ್ ಸದಸ್ಯ , ಕಾಂಗ್ರೆಸ್ ಮುಖಂಡ ಮಂಜುನಾಥ ಭಂಡಾರಿ ಸ್ಥಳಕ್ಕೆ ಭೇಟಿ ನೀಡಿದರು. ಈ ವೇಳೆ ಪಕ್ಷದ ಪದಾಧಿಕಾರಿಗಳು ಕೂಡ ಹಾಜರಿದ್ದರು. ಥೀಂಪಾರ್ಕ್ ಸುತ್ತಮುತ್ತ ಅನೇಕ ಫೈಬರ್ ತುಣುಕುಗಳು ಸಿಕ್ಕಿದೆ. ಇದು ಫೈಬರ್ ಪ್ರತಿಮೇ, ಕೋಟ್ಯಂತರ ಅವ್ಯವಹಾರ ಆಗಿದೆ ಎಂದು ಕಾಂಗ್ರೆಸ್ ನಾಯಕರು ಆರೋಪ ಮುಂದುವರಿಸಿದ್ದಾರೆ.

Web Stories

Share This Article
ಯಮ್ಮೊ ಯಮ್ಮೊ.. ನೋಡ್ದೆ ನೋಡ್ದೆ.. Milky Beauty Tamanna Bhatia Hot Photoshoot ಬಿಕಿನಿ ಬಿಟ್ಟು ಸೀರೆ ಉಟ್ಟ ನಟಿ ದಿವ್ಯಾ ಭಾರತಿ!.. ಶೋಲ್ಡರ್‌ಲೆಸ್ ಡ್ರೆಸ್‌ನಲ್ಲಿ ಪಟಾಕಿ ಪೋರಿ ಮಿಂಚಿಂಗ್ ಶಾರ್ಟ್ ಡ್ರೆಸ್‌ನಲ್ಲಿ ‘ಕಾಟೇರ’ ನಟಿ ಮಿಂಚಿಂಗ್ ನವಿಲಿನಂತೆ ಕಂಗೊಳಿಸಿದ ಮಲೈಕಾ ಚೈತ್ರಾ ಲುಕ್‌ಗೆ ಫ್ಯಾನ್ಸ್‌ ಫಿದಾ ಡಿಫರೆಂಟ್ ಆಗಿ ಸೀರೆಯುಟ್ಟ ಸ್ಯಾಮ್ ಬೋಲ್ಡ್ ಅವತಾರ ತಾಳಿದ ಚೈತ್ರಾ ಆಚಾರ್ ಡೆನಿಮ್ ಡ್ರೆಸ್‌ನಲ್ಲಿ ದೀಪಿಕಾ ಫೋಟೋಶೂಟ್