Paralympics | ನಿಶಾದ್‌ ಕುಮಾರ್‌ಗೆ ಬೆಳ್ಳಿ, ಪ್ರೀತಿ ಪಾಲ್‌ಗೆ ಕಂಚು

Public TV
2 Min Read

ಪ್ಯಾರಿಸ್​: ಪ್ಯಾರಾಲಿಂಪಿಕ್ಸ್‌ನ (Paralympics) ಪುರುಷರ ಹೈ ಜಂಪ್ ಟಿ47 ಸ್ಪರ್ಧೆಯಲ್ಲಿ ಭಾರತದ (India) ನಿಶಾದ್ ಕುಮಾರ್ (Nishad Kumar) ಬೆಳ್ಳಿ ಗೆದ್ದರೆ ಅಥ್ಲೆಟಿಕ್ಸ್‌ನಲ್ಲಿ ಪ್ರೀತಿ ಪಾಲ್ (Preethi Pal) ಕಂಚಿನ (Bronze) ಪದಕ ಗೆದ್ದಿದ್ದಾರೆ.

ನಿಶಾದ್ 2.04 ಮೀಟರ್ ಎತ್ತರ ಜಿಗಿಯುವ ಮೂಲಕ ದ್ವಿತೀಯ ಸ್ಥಾನ ಪಡೆದರು. ಅಮೆರಿಕದ ಟೌನ್ಸೆಂಡ್ 2.12 ಮೀ ಮಾರ್ಕ್​ನೊಂದಿಗೆ ಚಿನ್ನದ ಪದಕ ಗೆದ್ದುಕೊಂಡರೆ, ತಟಸ್ಥ ಪ್ಯಾರಾಲಿಂಪಿಕ್ ಅಥ್ಲೀಟ್‌ಗಳನ್ನು ಪ್ರತಿನಿಧಿಸಿದ್ದ ಜಾರ್ಜಿ ಮಾರ್ಗೀವ್ (ರಷ್ಯಾ) ಕಂಚಿನ ಪದಕವನ್ನು ಗೆದ್ದರು. 24 ವರ್ಷದ ನಿಶಾದ್ ಕುಮಾರ್ ಮೂರು ವರ್ಷಗಳ ಹಿಂದೆ ಟೋಕಿಯೊ ಪ್ಯಾರಾಲಿಂಪಿಕ್ಸ್‌ನಲ್ಲಿ ಇದೇ ಸ್ಪರ್ಧೆಯಲ್ಲಿ ಬೆಳ್ಳಿ ಪದಕವನ್ನು ಗೆದ್ದಿದ್ದರು. ಇದನ್ನೂ ಓದಿ: ಸಿಎಂ ಬಳಿಕ ಹಲವು ಕೈ ನಾಯಕರಿಗೆ ಪ್ರಾಸಿಕ್ಯೂಷನ್‌ ಭೀತಿ


ಪ್ರೀತಿ ಪಾಲ್ ಅವರು 200 ಮೀಟರ್‌ ಓಟದಲ್ಲಿ (ಟಿ35 ವಿಭಾಗ) ಮೂರನೇ ಸ್ಥಾನ ಪಡೆದರು. ಭಾನುವಾರ ನಡೆದ ಸ್ಪರ್ಧೆಯಲ್ಲಿ ಅವರು 30.01 ಸೆಕೆಂಡ್‌ಗಳಲ್ಲಿ ವೈಯಕ್ತಿಕ ಶ್ರೇಷ್ಠ ಸಮಯದೊಂದಿಗೆ ಗುರಿ ಮುಟ್ಟಿದರು.

ಶುಕ್ರವಾರ ಮಹಿಳೆಯರ 100 ಮೀಟರ್ಸ್ ಓಟ (ಟಿ35) ವಿಭಾಗದಲ್ಲೂ ಪ್ರೀತಿ ಕಂಚಿನ ಪದಕ ಗೆದ್ದಿದ್ದರು. ಈ ಮೂಲಕ ಪ್ರೀತಿ, ಟ್ರ್ಯಾಕ್ ಮತ್ತು ಫೀಲ್ಡ್‌ನಲ್ಲಿ ಎರಡು ಪದಕಗಳನ್ನು ಗೆದ್ದ ಭಾರತದ ಮೊದಲ ಮಹಿಳಾ ಅಥ್ಲೀಟ್‌ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದಾರೆ.

ಭಾರತಕ್ಕೆ 7  ಪದಕ:
ಪ್ರೀತಿ ಅವರ ಕಂಚು, ನಿಶಾದ್ ಅವರ ಬೆಳ್ಳಿ ಪದಕದೊಂದಿಗೆ ಭಾರತವು ಈ ಬಾರಿಯ ಪ್ಯಾರಾಲಿಂಪಿಕ್ಸ್​ನಲ್ಲಿ 7ನೇ ಪದಕವನ್ನು ಗೆದ್ದುಕೊಂಡಿದೆ. 1 ಚಿನ್ನ, 2 ಬೆಳ್ಳಿ, 4 ಕಂಚಿನ ಪದಕದೊಂದಿಗೆ 27ನೇ ಸ್ಥಾನ ಪಡೆದುಕೊಂಡಿದೆ.

 

Share This Article