‘ಒಡೆಯ’ ದರ್ಶನ್ ತಮ್ಮನಾಗಲಿದ್ದಾರಾ ಪಂಕಜ್?

Public TV
1 Min Read

ಬೆಂಗಳೂರು: ತಂದೆ ಎಸ್ ನಾರಾಯಣ್ ಗರಡಿಯಲ್ಲಿ ನಟನಾಗಿ, ನಿರ್ದೇಶಕ ವಿಭಾಗದಲ್ಲಿಯೂ ಪಳಗಿಕೊಂಡಿರುವವರು ಪಂಕಜ್ ನಾರಾಯಣ್. ಇದೀಗ ಶ್ರೀಧರ್ ನಿರ್ದೇಶನದ ಒಡೆಯ ಚಿತ್ರದಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ತಮ್ಮನಾಗಿ ನಟಿಸಲು ಪಂಕಜ್ ತಯಾರಾಗಿದ್ದಾರೆ!

ಚಿತ್ರತಂಡದ ಅಧಿಕೃತ ಮೂಲಗಳೇ ಈ ಸುದ್ದಿಯನ್ನು ಹೊರ ಹಾಕಿವೆ. ಅದರನ್ವಯ ದರ್ಶನ್ ಅವರ ತಮ್ಮನಾಗಿ ಪಂಕಜ್ ನಟಿಸಲಿರೋದು ಪಕ್ಕಾ. ಈ ಚಿತ್ರದಲ್ಲಿ ದರ್ಶನ್ ಅವರಿಗೆ ಇಬ್ಬರು ಸಹೋದರರಿರಲಿದ್ದಾರಂತೆ. ಅದರಲ್ಲೊಬ್ಬರಾಗಿ ಪಂಕಜ್ ನಟಿಸಿದರೆ, ಮತ್ತೋರ್ವ ಸಹೋದರನಾಗಿ ಯಶಸ್ ಸೂರ್ಯ ಅಭಿನಯಿಸಲಿದ್ದಾರೆ.

ಚೆಲುವಿನ ಚಿಲಿಪಿಲಿ ಸೇರಿದಂತೆ ಒಂದಷ್ಟು ಚಿತ್ರಗಳಲ್ಲಿ ನಾಯಕನಾಗಿಯೂ ನಟಿಸಿದ್ದ ಪಂಕಜ್ ಒಂದು ಚಿತ್ರದಲ್ಲಿ ನಾರಾಯಣ್ ಅವರಿಗೆ ನಿರ್ದೇಶನ ವಿಭಾಗದಲ್ಲಿಯೂ ಸಾಥ್ ನೀಡಿದ್ದರು. ಇದೀಗ ಅವರು ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಬಹು ನಿರೀಕ್ಷಿತ ಒಡೆಯ ಚಿತ್ರದಲ್ಲಿ ನಟಿಸುವ ಸುವರ್ಣಾವಕಾಶವನ್ನೇ ಗಿಟ್ಟಿಸಿಕೊಂಡಿದ್ದಾರೆ.

ಒಡೆಯ ಚಿತ್ರ ಇದೇ ತಿಂಗಳ ಹತ್ತನೇ ತಾರೀಕಿನಿಂದ ಮೈಸೂರಿನಲ್ಲಿ ಚಿತ್ರೀಕರಣ ಆರಂಭಿಸಲಿದೆ. ಈ ಚಿತ್ರದಲ್ಲಿ ದರ್ಶನ್ ತಮ್ಮಂದಿರ ಪಾತ್ರಗಳಿಗೂ ಮಹತ್ವ ಇದೆಯಂತೆ. ಅಂಥಾ ಪಾತ್ರದಲ್ಲಿ ಮಿಂಚಲು ಪಂಕಜ್ ರೆಡಿಯಾಗಿದ್ದಾರೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Share This Article
Leave a Comment

Leave a Reply

Your email address will not be published. Required fields are marked *