ಮಹಿಳಾ ಪ್ರಯಾಣಿಕರ ಸುರಕ್ಷತೆಗೆ BMTC ಒತ್ತು- ಪ್ಯಾನಿಕ್ ಬಟನ್ ಅಳವಡಿಕೆ

Public TV
1 Min Read

ಬೆಂಗಳೂರು: ಮಾಲ್, ಮೆಟ್ರೋ (Metro) ಸೇರಿದಂತೆ ಹಲವೆಡೆ ಮಹಿಳೆಯರ ಮೇಲೆ ಲೈಂಗಿಕ ಕಿರುಕುಳ ಆರೋಪ ಕೇಳಿ ಬರುತ್ತಿದೆ. ಇದರಿಂದಾಗಿ ಬೆಂಗಳೂರಲ್ಲಿ ಮಹಿಳೆಯರು ಸುರಕ್ಷಿತವಾಗಿಲ್ಲ ಎಂಬ ಆರೋಪ ಕೇಳಿ ಬರುತ್ತಿದೆ. ಈ ನಿಟ್ಟಿನಲ್ಲಿ ಬಿಎಂಟಿಸಿ (BMTC) ಟ್ರಾನ್ಸ್‌ಪೋರ್ಟ್ ಅನ್ನು ಸೇಫ್ ಟ್ರಾನ್ಸ್‌ಪೋರ್ಟ್ ಮಾಡಲು ಹೊರಟಿದೆ.

ಇತ್ತಿಚಿನ ದಿನಗಳಲ್ಲಿ ಬೆಂಗಳೂರಲ್ಲಿ (Bengaluru) ಮಹಿಳೆಯರ ಮೇಲೆ ಲೈಂಗಿಕ ಕಿರುಕುಳ ಪ್ರಕರಣಗಳು ಹೆಚ್ಚಿನ ಸಂಖ್ಯೆಯಲ್ಲಿ ಬೆಳಕಿಗೆ ಬರುತ್ತಿವೆ. ಈ ನಿಟ್ಟಿನಲ್ಲಿ ಬಿಎಂಟಿಸಿ ಮಹಿಳಾ ಪ್ರಯಾಣಿಕರ ಸುರಕ್ಷತೆಗೆ ಒತ್ತು ಕೊಡುತ್ತಿದೆ. ಪಬ್ಲಿಕ್ ಟ್ರಾನ್ಸ್‌ಪೋರ್ಟ್ ಅನ್ನು ಸೇಫ್ ಟ್ರಾನ್ಸ್‌ಪೋರ್ಟ್ ಮಾಡುವುದಾಗಿ ಬಿಎಂಟಿಸಿ ಎಂಡಿ ಸತ್ಯವತಿ ಹೆಜ್ಜೆ ಇಟ್ಟಿದ್ದಾರೆ. ಮಹಿಳೆಯರು ಬಸ್‍ನಲ್ಲಿ ಪ್ರಯಾಣಿಸುವಾಗ ಏನಾದರೂ ತೊಂದರೆಯಾದರೆ, ಬಸ್ ಸೀಟ್ ಪಕ್ಕದಲ್ಲೇ ಇರೋ ಪ್ಯಾನಿಕ್ ಬಟನ್ ಕ್ಲಿಕ್ ಮಾಡಬಹುದು. ಈ ಬಟನ್ ಕ್ಲಿಕ್ ಮಾಡಿದ ತಕ್ಷಣ ಈ ಅಲರ್ಟ್ ಬಿಎಂಟಿಸಿ ಕಂಟ್ರೋಲ್ ರೂಮ್‍ಗೆ ಬರುತ್ತದೆ. ಜೊತೆಗೆ ಸಾರಥಿಗೆ ಲೋಕೇಶನ್ ಹೋಗುತ್ತದೆ. ಆ ಲೋಕೇಷನ್‍ನಲ್ಲೇ ಬಿಎಂಟಿಸಿ ಟೀಮ್ ಬರುತ್ತದೆ.

ಬಿಎಂಟಿಸಿಗೆ ಹೊಸದಾಗಿ ಬಂದ ಬಿಎಸ್ -3, ಬಿಎಸ್ 4 ಬಸ್‍ಗಳಲ್ಲಿ ಎರಡು ಕಡೆ ಪ್ಯಾನಿಕ್ ಬಟನ್ ಅಳವಡಿಕೆ ಮಾಡಲಾಗಿದೆ. ಇದರಿಂದ ಮಹಿಳೆಯರಿಗೆ ಸುರಕ್ಷತೆ ಸಿಗಲಿದೆ. ಜೊತೆಗೆ ಬಿಎಂಟಿಸಿಯಲ್ಲಿರೋ ಒಟ್ಟು 5500 ಬಸ್‍ಗಳಲ್ಲಿ, 5000 ಬಸ್‍ಗೆ ಸಿಸಿಟಿವಿ ಅಳವಡಿಸಲಾಗಿದೆ. ಒಟ್ಟಿನಲ್ಲಿ ಬಿಎಂಟಿಸಿ ಈ ಹೆಜ್ಜೆ ನಿಜಕ್ಕೂ ಪ್ರಶಂಸನೀಯವಾಗಿದೆ. ಹೆಣ್ಣು ಮಕ್ಕಳಿಗೂ ಕೂಡ ಇನ್ನಷ್ಟು ಸುರಕ್ಷತೆ ಸಿಕ್ಕಿದಂತಾಗುತ್ತೆ.

Share This Article