ಹಿಂದಿ ನೆಲದಲ್ಲಿ ಕನ್ನಡದ ಕಂಪು ಹರಡಿಸ್ತಿದ್ದಾರೆ ಚಂಡೀಗಡದ ಪಂಡಿತರಾವ್

Public TV
1 Min Read

ನವದೆಹಲಿ/ವಿಜಯಪುರ: ರಾಜ್ಯದಲ್ಲಿ ಅದರಲ್ಲೂ ರಾಜಧಾನಿ ಬೆಂಗಳೂರಿನಲ್ಲಿ ಕನ್ನಡಿಗರೇ ಕನ್ನಡ ಮಾತನಾಡೋಕೆ ಹಿಂದೇಟು ಹಾಕ್ತಾರೆ. ಗಡಿ ಜಿಲ್ಲೆಗಳಲ್ಲಿ ಕನ್ನಡದ ಬಗ್ಗೆ ಹೇಳೋದೇ ಬೇಡ. ಆದ್ರೆ, ಪಬ್ಲಿಕ್ ಹೀರೋ ಪಂಡಿತರಾವ್ ಅವರು ಹೊರ ನಾಡಿನಲ್ಲಿ ಕನ್ನಡದ ಕಂಪನ್ನ ಹರಡುತ್ತಿದ್ದಾರೆ.

ಹೌದು. ಮೂಲತಃ ವಿಜಯಪುರ ಜಿಲ್ಲೆ ಇಂಡಿ ತಾಲೂಕಿನ ಸಾಲೋಟಗಿ ಗ್ರಾಮದ ಪಂಡಿತ್‍ರಾವ್ ಧರನ್ನೇನವರ್ ಅವರು ಸದ್ಯ ಚಂಡೀಗಡದ ಸರ್ಕಾರಿ ಕಾಲೇಜೊಂದರಲ್ಲಿ ಸಮಾಜಶಾಸ್ತ್ರದ ಸಹಾಯಕ ಉಪನ್ಯಾಸಕರಾಗಿದ್ದಾರೆ. ಜೊತೆಗೆ ಇತಿಹಾಸ, ಸಾಹಿತ್ಯದಲ್ಲಿ ಆಸಕ್ತಿ ಹೊಂದಿರುವ ಇವರು ವಚನಕಾರರಾದ ಬಸವಣ್ಣ, ಅಕ್ಕಮಹಾದೇವಿ, ಅಲ್ಲಮಪ್ರಭು, ಕನಕದಾಸರು, ಪುರಂದರದಾಸರು ಸೇರಿದಂತೆ 8 ಪುಸ್ತಕಗಳನ್ನು ಕನ್ನಡದಿಂದ ಪಂಜಾಬಿಗೆ ಭಾಷಾಂತರ ಮಾಡಿದ್ದಾರೆ. ಜೊತೆಗೆ. ಪಂಜಾಬಿನ ಪ್ರಸಿದ್ಧ ಚಿಂತಕರ ಐದು ಪುಸ್ತಕಗಳನ್ನು ಕನ್ನಡಕ್ಕೂ ತಂದಿದ್ದಾರೆ.

ಕನ್ನಡ ರಾಜೋತ್ಸವದಂದು ಪ್ರತಿ ವರ್ಷ ಉತ್ತರ ಭಾರತದ ಬೇರೆ ಬೇರೆ ನಗರಗಳಿಗೆ ತೆರಳಿ, ತಲೆ ಮೇಲೆ ಕನ್ನಡ ವರ್ಣಮಾಲೆಯ ಫಲಕ ಹೊತ್ತು ಕನ್ನಡತೇರರಿಗೆ ನಮ್ಮ ಕಲಿಸುವ ಪ್ರಯತ್ನ ಮಾಡ್ತಿದ್ದಾರೆ ಅಂತ ಪಂಜಾಬಿ ಸ್ನೇಹಿತ ಭೂಪೇಂದ್ರ ಸಿಂಗ್ ತಿಳಿಸಿದ್ದಾರೆ.

ಚಂಡೀಗಡದಲ್ಲಿ ಕನ್ನಡಿಗರ ಸಂಘಟನೆ ಕಟ್ಟಿಕೊಂಡು ಕನ್ನಡವನ್ನು ಸಂಘಟಿಸುತ್ತಿದ್ದಾರೆ. ಕನ್ನಡದ 150ಕ್ಕೂ ಹೆಚ್ಚು ಮಕ್ಕಳಿಗೆ ಅಲ್ಪ ವಿದ್ಯಾರ್ಥಿ ವೇತನ ನೀಡ್ತಿದ್ದಾರೆ. ಇಷ್ಟೇ ಅಲ್ಲ, ಚಂಡೀಗಡದ ಕೆಲ ಪಂಜಾಬಿ ವಿದ್ಯಾರ್ಥಿಗಳಿಗೆ ಕನ್ನಡವನ್ನೂ ಕಲಿಸುತ್ತಿದ್ದಾರೆ. ಇವರ ಈ ಕಾರ್ಯವನ್ನು ಗುರುತಿಸಿರೋ ಪಂಜಾಬ್‍ನ ವಿವಿಧ ಸಂಘಟನೆಗಳು ಸನ್ಮಾನವನ್ನೂ ಮಾಡಿವೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

https://www.youtube.com/watch?v=nrHAGxufexI

Share This Article
Leave a Comment

Leave a Reply

Your email address will not be published. Required fields are marked *