ಪ್ಯಾನ್ ಇಂಡಿಯಾ ಸಿನಿಮಾ ಇಂದಿನದ್ದಲ್ಲ : ರಾಜಮೌಳಿಗೆ ಟಾಂಗ್ ಕೊಟ್ಟ ಕಮಲ್ ಹಾಸನ್

Public TV
1 Min Read

ಕ್ಷಿಣದ ಭಾರತದ ಸಿನಿಮಾಗಳು ಭಾರೀ ಬಜೆಟ್ ನಲ್ಲಿ ನಿರ್ಮಾಣವಾಗಿ, ಹಲವು ಭಾಷೆಗಳಿಗೆ ಡಬ್ ಆಗಿ ಭಾರೀ ಹವಾ ಕ್ರಿಯೇಟ್ ಮಾಡುತ್ತಿವೆ. ಹೀಗಾಗಿಯೇ ಪ್ಯಾನ್ ಇಂಡಿಯಾ ಕಲ್ಪನೆಗೂ ತುಸು ಹೆಚ್ಚಾಗಿಯೇ ದಕ್ಷಿಣದ ಸಿನಿಮಾ ರಂಗದಲ್ಲಿ ಕಾಣಿಸಿಕೊಳ್ಳುತ್ತಿದೆ. ಅದರಲ್ಲೂ ಆರ್.ಆರ್.ಆರ್, ಕೆಜಿಎಫ್ 2 ಸಿನಿಮಾಗಳು ಬಾಕ್ಸ್ ಆಫೀಸಿನಲ್ಲಿ ದಾಖಲೆ ಬರೆದಾಗಿನಿಂದ, ಪ್ಯಾನ್ ಇಂಡಿಯಾ ಚಳವಳಿ ಹುಟ್ಟಿದ್ದು ಇದೇ ಸಿನಿಮಾಗಳಿಂದ ಎನ್ನುವಂತೆ ಬಿಂಬಿಸಲಾಗುತ್ತಿದೆ. ಈ ಮಾತಿಗೆ ಕಮಲ್ ಹಾಸನ್ ಖಡಕ್ ಪ್ರತಿಕ್ರಿಯೆ ನೀಡಿದ್ದಾರೆ.  ಇದನ್ನೂ ಓದಿ : ಹಾಲಿವುಡ್ ಖ್ಯಾತ ನಟ ರೇ ಲಿಯೊಟ್ಟಾ ಮಲಗಿದ್ದಾಗಲೇ ನಿಧನ

ಕಮಲ್ ಹಾಸನ್ ನೀಡಿರುವ ಪ್ರತಿಕ್ರಿಯೆಯನ್ನು ರಾಜಮೌಳಿ ಅವರಿಗೆ ಕೊಟ್ಟ ಟಾಂಗ್ ಎಂದೇ ತಮಿಳು ಸಿನಿಮಾ ರಂಗದಲ್ಲಿ ಬಿಂಬಿಸಲಾಗುತ್ತಿದೆ. ಅಷ್ಟಕ್ಕೂ ಕಮಲ್ ಹಾಸನ್ ಹೇಳಿದ್ದೇನು ಅಂದರೆ, ‘ಪ್ಯಾನ್ ಇಂಡಿಯಾ ಸಿನಿಮಾಗಳು ಈಗ ಹುಟ್ಟಿಲ್ಲ. ಹಲವು ವರ್ಷಗಳ ಹಿಂದೆಯೇ ಪ್ಯಾನ್ ಇಂಡಿಯಾ ಸಿನಿಮಾಗಳನ್ನು ಮಾಡಲಾಗಿದೆ. ಅವುಗಳಿಗೆ ಪ್ಯಾನ್ ಇಂಡಿಯಾ ಅಂತ ಹೆಸರು ಇರಲಿಲ್ಲವಷ್ಟೆ. ಈಗ ಅದನ್ನೇ ದೊಡ್ಡದು ಮಾಡಿ ಹೇಳಲಾಗುತ್ತಿದೆ ಎಂದು ತಮ್ಮ ಅಭಿಪ್ರಾಯವನ್ನು ವ್ಯಕ್ತ ಪಡಿಸಿದ್ದಾರೆ. ಇದನ್ನೂ ಓದಿ  : ಸಿನಿಮಾವಾಗಲಿದೆ ‘ಟೈಂಪಾಸ್’ ಬೆಡಗಿ ಪ್ರೋತಿಮಾ ಬೇಡಿ ಬಯೋಪಿಕ್

ಆರ್.ಆರ್.ಆರ್, ಕೆಜಿಎಫ್ 2 ಸಿನಿಮಾಗಳಿಗಿಂತ ಮುಂಚೆಯೇ ಪ್ಯಾನ್ ಇಂಡಿಯಾ ಚಿತ್ರಗಳು ಬಂದಿವೆ. ಮಲಯಾಳಂನ ಚಮ್ಮೇನ್, ಮುಘಲ್ ಎ ಅಜಮ್ , ಪಡೋಸನ್ ರೀತಿಯ ಸಿನಿಮಾಗಳನ್ನು ಏನೆಂದು ಕರೆಯಬೇಕು? ನಮ್ಮದು ಹಲವು ಭಾಷೆಗಳನ್ನು ಹೊಂದಿದ ದೇಶ. ಅದನ್ನು ಅರ್ಥ ಮಾಡಿಕೊಂಡರೆ, ಎಲ್ಲವೂ ಅರ್ಥವಾದೀತು ಎಂದು ಮಾರ್ಮಿಕವಾಗಿ ಮಾತನಾಡಿದ್ದಾರೆ ಕಮಲ್ ಹಾಸನ್. ಇದನ್ನೂ ಓದಿ : ವಾರಕ್ಕೆ ಹತ್ತತ್ತು ಸಿನಿಮಾಗಳು ರಿಲೀಸ್ : ಥಿಯೇಟರ್ ಮಾತ್ರ ಖಾಲಿ ಖಾಲಿ

ಬಾಲಿವುಡ್ ಮತ್ತು ದಕ್ಷಿಣದ ಸಿನಿಮಾಗಳು ಎಂದು ಬೇರ್ಪಡಿಸುವುದನ್ನು ನಾನು ಒಪ್ಪಲಾರೆ ಎಂದಿರುವ ಕಮಲ್ ಹಾಸನ್, ಎಲ್ಲವೂ ನಮ್ಮದೇ ಎಂದು ಸಾಗಬೇಕು. ತಾಜ್ ಮಹಲ್ ನನ್ನದು, ಮಧುರೈ ಮೀನಾಕ್ಷಿ ದೇವಾಲಯ ಕೂಡ ನನ್ನದೇ ಎಂದು ಹೇಳುವ ಮೂಲಕ ದೇಶ, ಭಾಷೆಯನ್ನು ಒಡೆಯಬೇಡಿ ಎಂದಿದ್ದಾರೆ ಕಮಲ್ ಹಾಸನ್.

Share This Article
Leave a Comment

Leave a Reply

Your email address will not be published. Required fields are marked *