ಮಂಧಾನ ಜೊತೆ ಮುರಿದುಬಿದ್ದ ಮದುವೆ – ಪಲಾಶ್ ಮುಚ್ಚಲ್ ಹೇಳಿದ್ದೇನು?

2 Min Read

ಟೀಂ ಇಂಡಿಯಾ (Team India) ಸ್ಟಾರ್ ಕ್ರಿಕೆಟ್ ಆಟಗಾರ್ತಿ ಸ್ಮೃತಿ ಮಂಧಾನ (Smriti Mandhana) ಹಾಗೂ ಸಂಗೀತ ಸಂಯೋಜಕ ಪಲಾಶ್ ಮುಚ್ಚಲ್ (Palash Muchhal) ವಿವಾಹ (Marriage) ಮುರಿದುಬಿದ್ದಿದೆ. ಈ ಬಗ್ಗೆ ಪಲಾಶ್ ಮುಚ್ಚಲ್ ಇನ್ಸ್ಟಾದಲ್ಲಿ ಸ್ಪಷ್ಟನೆ ನೀಡಿದ್ದಾರೆ.

ಇನ್ಸ್ಟಾಗ್ರಾಮ್‌ ಸ್ಟೋರಿಯಲ್ಲಿ ನಾನು ನನ್ನ ಜೀವನದಲ್ಲಿ ಮುಂದುವರಿಯಲು ಮತ್ತು ನನ್ನ ವೈಯಕ್ತಿಕ ಸಂಬಂಧದಿಂದ ಹಿಂದೆ ಸರಿಯಲು ನಿರ್ಧರಿಸಿದ್ದೇನೆ. ಆಧಾರರಹಿತ ವದಂತಿಗಳಿಗೆ ಜನರು ಪ್ರತಿಕ್ರಿಯಿಸುವುದನ್ನು ನೋಡುವುದು ನನಗೆ ತುಂಬಾ ಕಷ್ಟಕರವಾಗಿತ್ತು. ಇದು ನನ್ನ ಜೀವನದ ಅತ್ಯಂತ ಕಷ್ಟಕರ ಹಂತವಾಗಿದ್ದು ನಾನು ನಿಭಾಯಿಸುತ್ತೇನೆ. ಸುಳ್ಳು ಮತ್ತು ಮಾನಹಾನಿಕರ ವಿಷಯವನ್ನು ಹರಡುವವರ ವಿರುದ್ಧ ನನ್ನ ತಂಡ ಕಠಿಣ ಕಾನೂನು ಕ್ರಮ ಕೈಗೊಳ್ಳಲಿದೆ ಎಂದು ಎಚ್ಚರಿಸಿದ್ದಾರೆ. ಇನ್ನೂ ಈ ಕಠಿಣ ಸಮಯದಲ್ಲಿ ತಮ್ಮ ಪರ ನಿಂತ ಎಲ್ಲರಿಗೂ ಧನ್ಯವಾದ ತಿಳಿಸಿದ್ದಾರೆ. ಇದನ್ನೂ ಓದಿ: ಮದುವೆ ಮುರಿಯಿತು – ಮೌನ ಮುರಿದು ವದಂತಿಗಳಿಗೆ ತೆರೆ ಎಳೆದ ಸ್ಮೃತಿ ಮಂಧಾನ

ಮದುವೆ ದಿನ ಆಗಿದ್ದೇನು?
ಪಲಾಶ್ ಮತ್ತು ಸ್ಮೃತಿ ಮಂಧಾನ ನ.23 ರಂದು ವಿವಾಹವಾಗಬೇಕಿತ್ತು. ವಿವಾಹ ಪೂರ್ವ ಸಮಾರಂಭಗಳು ಪ್ರಾರಂಭವಾಗಿದ್ದವು. ಫೋಟೋಗಳು ಸಹ ವೈರಲ್ ಆಗಿದ್ದವು. ಇದರ ನಡುವೆ ಇದ್ದಕ್ಕಿದ್ದಂತೆ, ಸ್ಮೃತಿಯ ತಂದೆಯ ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾಗಿದ್ದರು. ಪರಿಣಾಮವಾಗಿ, ಸ್ಮೃತಿ ಮತ್ತು ಪಲಾಶ್ ಅವರ ಮದುವೆಯನ್ನು ಮುಂದೂಡಲಾಗಿತ್ತು. ಬಳಿಕ ಪಲಾಶ್ ಅವರ ಮೇಲೆ ವಂಚನೆ ಆರೋಪಗಳು ಕೇಳಿ ಬಂದಿದ್ದವು.

ಇದರ ಮಧ್ಯೆ ಸ್ಮೃತಿ ಜೊತೆ ಮದುವೆ ನಿಶ್ಚಯವಾಗಿದ್ದರೂ ಪಲಾಶ್‌ ಮುಚ್ಚಲ್ ಬೇರೊಬ್ಬ ಯುವತಿ ಜೊತೆ ಚಾಟ್ ಮಾಡಿದ್ದಾರೆ ಎನ್ನಲಾದ ಸ್ಕ್ರೀನ್‌ಶಾಟ್ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದವು. ಬಳಿಕ ಪಲಾಶ್‌ ತನ್ನ ಎಕ್ಸ್‌ ಗರ್ಲ್‌ಫ್ರೆಂಡ್‌ ಪ್ಲಾಸ್ಟಿಕ್ ಸರ್ಜನ್ ಬಿರ್ವಾ ಶಾ ಅವರಿಗೆ ಪ್ರಪೋಸ್‌ ಮಾಡಿದ್ದ ಫೋಟೋಗಳು ಹಾಗೂ ಆಕೆಯೊಂದಿಗೆ ರೊಮ್ಯಾಂಟಿಕ್‌ ಮೂಡ್‌ನಲ್ಲಿದ್ದ ಫೋಟೋಗಳು ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದ್ದವು. ಬಳಿಕ ಮದುವೆ ರದ್ದಾಗಿದೆ ಎಂಬ ವಿಷಯ ಸೋಷಿಯಲ್‌ ಮೀಡಿಯಾದಲ್ಲಿ ಚರ್ಚೆ ಆಗುತ್ತಲೇ ಇತ್ತು. ಇದೀಗ ಈ ಎಲ್ಲ ವದಂತಿಗಳಿಗೆ ತೆರೆ ಬಿದ್ದಿದೆ. ಇದನ್ನೂ ಓದಿ: ಮದುವೆ ಮುಂದೂಡಿಕೆ ಬಳಿಕ ಸ್ಮೃತಿ ಮಂಧಾನ ಮೊದಲ ಪೋಸ್ಟ್‌ – ಎಂಗೇಜ್‌ಮೆಂಟ್‌ ರಿಂಗ್‌ ಎಲ್ಲಿ ಅಂದ್ರು ಫ್ಯಾನ್ಸ್‌

Share This Article